Sunday, March 2, 2025

 ಕಥೆ-679

ಒಳ್ಳೆಯತನ ಇದೆ, ಅದಕ್ಕೆ ಅತ್ಯುತ್ತಮ ಬೆಲೆನೂ ಇದೆ



ಫ್ರಾನ್ಸಿನ ಈ ಮೂವತ್ತೊಂಬತ್ತು ವರ್ಷದ ವ್ಯಕ್ತಿಯ ತಂದೆ ಫ್ರಾನ್ಸ್‌ನಲ್ಲಿ ನೆಲೆನಿಲ್ಲುವ ಮೊದಲು ಐವರಿ ಕೋಸ್ಟ್‌ ಅನ್ನುವ ದೇಶದಲ್ಲಿ ಕೆಲಸ ಮಾಡುತ್ತಿದ್ದರಂತೆ. ಅಲ್ಲಿ ಈ ವ್ಯಕ್ತಿ ಪುಟ್ಟ ಮಗುವಾಗಿದ್ದಾಗ ಆತನನ್ನು ನೋಡಿಕೊಳ್ಳುತ್ತಿದ್ದ ನ್ಯಾನಿ ಈಕೆ. ಮೂವತ್ತೆಂಟು ವರ್ಷದ ಹಿಂದೆ ತನ್ನನ್ನು ನೋಡಿಕೊಳ್ಳುತ್ತಿದ್ದ ನ್ಯಾನಿಯನ್ನು ಭೇಟಿ ಮಾಡಲು 6000 ಚಿಲ್ಲರೆ ಕಿಲೋಮೀಟರ್ ದೂರದ ಐವರಿ ಕೋಸ್ಟ್‌ ಗೆ ಹೋಗಿ ಆಕೆಯನ್ನು ಭೇಟಿಯಾಗಿದ್ದಾನೆ ಈ ವ್ಯಕ್ತಿ. ಆಕೆಯನ್ನು ನೋಡಿ ಆತನ ಖುಶಿಗೂ ಅಂತೆಯೇ ಅನಿರೀಕ್ಷಿತವಾಗಿ ಬಂದ ಈ ವ್ಯಕ್ತಿಯನ್ನು ನೋಡಿ ಆಕೆಯ ಖುಶಿಗೂ ಎಲ್ಲೆ ಇರಲಿಲ್ಲ. ಆಕೆಗೆ ಹತ್ತು ಮಿಲಿಯನ್‌ ಫ್ರ್ಯಾಂಕ್‌ ಹಣ ಕೊಟ್ಟು ಮೇಲಾಗಿ ಪ್ರತೀ ತಿಂಗಳೂ ಹಣ ಕೊಡುವ ವ್ಯವಸ್ಥೆ ಮಾಡಿದ್ದಾನೆ ಈ ಹೃದಯವಂತ. ಒಳ್ಳೆಯತನ ಕಳೆದುಹೋಗಿದೆ ಎಂದು ಗೋಳಾಡುತ್ತಿರುತ್ತೇವೆ. ಒಳ್ಳೆಯತನ ಇದೆ, ಆದರೆ ನಾವು ನೆಗೆಟಿವ್‌ ಸಂಗತಿಗಳನ್ನು ವೈರಲ್‌ ಮಾಡುತ್ತಿದ್ದೇವೆ ಅಷ್ಟೇ. ನಿಜ, ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ.

-ದೀಪಾಹಿರೇಗುತ್ತಿ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು