ಕಥೆ-698
ಚಿಯರ್ ಅಪ್!
ಕೆಲವೊಮ್ಮೆ ಏನಾಗುತ್ತದೆಂದರೆ ನಾವು ಸಣ್ಣ ಸಣ್ಣ ವಿಷಯಕ್ಕೂ ಬಹಳ ಯೋಚನೆ ಮಾಡುತ್ತೇವೆ. ಸದಾ ಒತ್ತಡವನ್ನು ಹೊತ್ತುಕೊಂಡು ನಮ್ಮ ನೆಮ್ಮದಿಯನ್ನು ನಾವೇ ಹಾಳು ಮಾಡಿಕೊಳ್ಳುತ್ತೇವೆ. ಸದಾ ಯೋಚನೆ ಮಾಡುವುದರಿಂದ ಬದುಕಿನ ಸಣ್ಣ ಸಣ್ಣ ಖುಶಿಗಳನ್ನು ಕಳೆದುಕೊಳ್ಳುತ್ತೇವೆ, ನಮ್ಮ ನಗುವನ್ನು ಕಳೆದುಕೊಳ್ಳುತ್ತೇವೆ. ಬದುಕು ಭಾರವೆನಿಸುವುದು ದೇಹ ಭಾರವಾದಾಗ ಅಲ್ಲ, ತಲೆ ಭಾರವಾದಾಗ! ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳೊ ನೂರಾರು ಡಯೆಟ್‌ಗಳಿವೆ, ತಲೆಯ ಭಾರ ಕಡಿಮೆ ಮಾಡಿಕೊಳ್ಳಲು? ಆಗಿಹೋದ ಮತ್ತು ಮುಂದೆ ಆಗಲಿರುವ ಸಂಗತಿಗಳ ಬಗ್ಗೆ ಅತಿಯಾದ ಯೋಚನೆಯನ್ನು ಕಡಿಮೆ ಮಾಡುವುದೊಂದೇ ದಾರಿ.
ಏನನ್ನಾದರೂ ಮಾಡುವ ಅವಕಾಶ ಇದ್ದೂ ತನ್ನಿಂದ ಏನಾಗುತ್ತದೆ ಎಂಬ ನಿರಾಶಾವಾದಿ ಯೋಚನೆ ಬಿಟ್ಟು ಮಾಡಬೇಕಾದುದನ್ನು ಮಾಡುವುದು ಅತಿಯೋಚನೆಗೆ ಕಡಿವಾಣ ಹಾಕುವ ಮತ್ತೊಂದು ಮಾರ್ಗ. ಚಿಯರ್ ಅಪ್!
ದೀಪಾಹಿರೇಗುತ್ತಿ
No comments:
Post a Comment