ಕಥೆ-699
ವಿಜ್ಞಾನ ಎಂದರೆ ವ್ಯವಸ್ಥಿತ ಅಧ್ಯಯನ
ಆತ್ಮೀಯ ಪ್ರೀತಿಯ ವಿದ್ಯಾರ್ಥಿಗಳೇ ಇವತ್ತಿನ ಸಮಾಜ ವಿಜ್ಞಾನ ಪರೀಕ್ಷೆಯನ್ನು ಚೆನ್ನಾಗಿ ಬರೆದಿದ್ದೀರಿ ಎಂದು ಭಾವಿಸುತ್ತೇನೆ.
ವಿಜ್ಞಾನದಲ್ಲಿ ಹೆಚ್ಚು ಅಂಕ ಪಡೆಯುವುದು ಸರಳ...
ಎಷ್ಟೋ ವಿದ್ಯಾರ್ಥಿಗಳು ವಿಜ್ಞಾನ ಎಂದರೆ Applied Qns ಇರುತ್ತವೆ, ಕಠಿಣ ಎಂಬ ಮನಸ್ಥಿತಿ ಹೊಂದಿದ್ದಾರೆ, ಆ ಮನಸ್ಥಿತಿಯಿಂದ ಹೊರಬನ್ನಿ, ನಿಮ್ಮ ವ್ಯವಸ್ಥಿತ ಅಧ್ಯಯನ ಹೆಚ್ಚು ಅಂಕಗಳನ್ನು ತಂದುಕೊಡುತ್ತದೆ... ಈ ಕೆಳಗಿನಂತೆ ನೀವು ವ್ಯವಸ್ಥಿತವಾಗಿ ಅಧ್ಯಯನ ಮಾಡಿದ್ದೆ ಆದರೆ ಖಂಡಿತ ಹೆಚ್ಚು ಅಂಕ ಪಡೆಯುತ್ತೀರಿ ( ವಿಜ್ಞಾನ ಎಂದರೆ ವ್ಯವಸ್ಥಿತ ಅಧ್ಯಯನ)
ವಿಜ್ಞಾನ ಪ್ರಶ್ನೆ ಪತ್ರಿಕೆ ಮೂರು ಭಾಗಗಳನ್ನು ಹೊಂದಿದೆ...
(ಭಾಗ-A ಭೌತಶಾಸ್ತ್ರ (27ಅಂಕ)
ಭಾಗ-B ರಸಾಯನಶಾಸ್ತ್ರ(25 ಅಂಕ) &
ಭಾಗ-C ಜೀವಶಾಸ್ತ್ರ (28) ..)
ನಿಮಗೆ ಈಗಾಗಲೇ ಗೊತ್ತಿರುವ ಹಾಗೆ 02/04/2024 ರಂದು ವಿಜ್ಞಾನ ಪರೀಕ್ಷೆ.
ನಿಮಗೆ ಮೂರು ದಿನಗಳು ಓದಲಿಕ್ಕೆ ಅವಕಾಶವಿದೆ..
29/03/2024 ರಂದು ಅಂದರೆ ಇವತ್ತು ರಸಾಯನಶಾಸ್ತ್ರ ವಿಭಾಗದ ಅಧ್ಯಾಯಗಳನ್ನು
30/03/2024 ರಂದು ನಾಳೆ
ಜೀವಶಾಸ್ತ್ರ ಅಧ್ಯಾಯಗಳನ್ನು
31/03/2024 ರಂದು ನಾಡಿದ್ದು ಭೌತಶಾಸ್ತ್ರ ಅಧ್ಯಾಯಗಳನ್ನು ಪುನರ್ಮನನ ಮಾಡಿಕೊಳ್ಳಿರಿ..
01/04/2025 ರಂದು ಮೂರು ವಿಭಾಗಗಳನ್ನು ಪುನರಾವರ್ತನೆ ಮಾಡಿಕೊಂಡರೆ ಹೆಚ್ಚು ಅಂಕಗಳನ್ನು ಪಡೆಯಬಹುದು
ನಿಮ್ಮ ಕೌಶಲ್ಯ, ಬದ್ಧತೆ ಮತ್ತು ಪ್ರಯತ್ನವು ನಿಸ್ಸಂದೇಹವಾಗಿ ನಿಮಗೆ ಯಶಸ್ಸನ್ನು ತರುತ್ತದೆ.
ವಿಜ್ಞಾನ ಪರೀಕ್ಷೆಗೆ ಉತ್ತಮ ತಯಾರಿ ಶುರುವಾಗಲಿ... ಶುಭವಾಗಲಿ
👍💐
No comments:
Post a Comment