Tuesday, April 1, 2025

ಕಥೆ-700

ಟಿಪ್ಸ್ ಪಾಲನೆ ಮಾಡಿ.. 

ವಿಜ್ಞಾನ ಸ್ಕೋರ್ ಮಾಡಿ

https://basapurs.blogspot.com/


ವಿಜ್ಞಾನದಲ್ಲಿ ಹೆಚ್ಚು ಅಂಕ ಪಡೆಯುವುದು ಸರಳ...

Applied, ಕಠಿಣ ಎಂಬ ಮನಸ್ಥಿತಿಯಿಂದ ಹೊರ ಬಂದು

ಕೆಳಗಿನ ಟಿಪ್ಸ್ ಗಳನ್ನು ಪಾಲನೆ ಮಾಡಿ.. (ಆತ್ಮವಿಶ್ವಾಸ ಎಲ್ಲಾ ಯಶಸ್ಸುಗಳ ಕೀಲಿ ಕೈ.. Be confident..)

1) ಪರೀಕ್ಷೆ ಪ್ರಾರಂಭಕ್ಕೂ ಮುಂಚೆ ಕನಿಷ್ಠ 3-4 ನಿಮಿಷ ಧ್ಯಾನ ಮಾಡಿರಿ

2) ಪ್ರಶ್ನೆ ಅರ್ಥವಾಗದಿದ್ದರೆ ಪುನ: ಓದಿ, ಅರ್ಥೈಸಿಕೊಂಡು ಉತ್ತರ ಬರೆಯಿರಿ...

3) ಕ್ರಮಾನುಗತ ಸಂಖ್ಯೆ ಅಂದರೆ ಪ್ರಶ್ನೆ 1)... ನಂತರ ಪ್ರಶ್ನೆ 2)...ನಂತರ ಪ್ರಶ್ನೆ 3)....

ಈ ರೀತಿಯಾಗಿ ಉತ್ತರಗಳನ್ನು ಬರೆಯಿರಿ... ಉತ್ತರ ಬರದೇ ಇರುವ ಪ್ರಶ್ನೆಗೆ ಜಾಗ ಬಿಟ್ಟು ಮುಂದೆ ಹೋಗಿರಿ. ನಂತರ ಉತ್ತರ ಬರೆಯಬಹುದು.. ಪ್ರತಿ ಉತ್ತರಗಳ ನಡುವೆ ಅಂತರವಿರಲಿ.

4) ವಿಜ್ಞಾನದ ಉತ್ತರಗಳನ್ನು ಪ್ಯಾರಾ ರೂಪದಲ್ಲಿ ಬರೆಯಬೇಡಿ... 

ಅದರ ಬದಲು Points (*) ರೂಪದಲ್ಲಿ ಬರೆಯಿರಿ...

5) ಅನವಶ್ಯಕ ವಿಷಯಗಳನ್ನು ಬರೆಯಬೇಡಿ...

6) ಅಕ್ಷರಗಳನ್ನು ತಿಳಿಯುವಂತೆ ಬರೆಯಿರಿ.. ಉತ್ತರದಲ್ಲಿರುವ ಮುಖ್ಯಾಂಶಗಳನ್ನು ಪೆನ್ಸಿಲಿನಿಂದ Underline ಮಾಡಿರಿ......

7) ಚಿತ್ರ ಸರಳವಾಗಿ ( ಪೆನ್ಸಿಲ್ ಬಳಸಿ) ಬಿಡಿಸಿ ಕೇಳಿದ ಭಾಗಗಳನ್ನು ಗುರುತಿಸಿರಿ...

8) ಹೆಚ್ಚಿನ ಪ್ರಶ್ನೆಗಳು ಎರಡು ಅಂಕದಲ್ಲಿ ಇರುವುದರಿಂದ ಸಾಮಾನ್ಯವಾಗಿ ನಾಲ್ಕು ಪಾಯಿಂಟ್ಸ್ ಗಳನ್ನು ಬರೆದರೆ ಸಾಕು...

9) ಲೆಕ್ಕಗಳು ಬಂದಲ್ಲಿ ದತ್ತಾಂಶ ಬರೆದು, ಅದಕ್ಕೆ ಸಂಬಂಧಿಸಿದ ಸೂತ್ರ ಬಳಸಿ ಲೆಕ್ಕ ಮಾಡಿ ಕೊನೆಗೆ ಬಂದ ಉತ್ತರಕ್ಕೆ SI ಮಾನ ಬಳಸಿರಿ...

10) ಕೆಲವೊಂದು ಪ್ರಶ್ನೆಗಳಲ್ಲಿ ಉತ್ತರವಿರುತ್ತದೆ ಅವುಗಳನ್ನು ಅರ್ಥೈಸಿಕೊಂಡು ಬರೆಯಿರಿ..


ಪರೀಕ್ಷಾ ಸಂದರ್ಭದಲ್ಲಿ ಮೇಲಿನ ಟಿಪ್ಸ್ ಗಳನ್ನು ಪಾಲನೆ ಮಾಡಿ ವಿಜ್ಞಾನದಲ್ಲಿ ಸ್ಕೋರ್ ಮಾಡಿ... 

👍

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು