ಕಥೆ-701
ಓ ಮನಸೇ ರಿಲಾಕ್ಸ್ ಪ್ಲೀಸ್
Relax...Relax...Relax..
ಆತ್ಮೀಯ ವಿದ್ಯಾರ್ಥಿಗಳೇ 10ನೇ ತರಗತಿ ಬೋರ್ಡ್ ಎಕ್ಸಾಮ್ ಪೂರ್ಣಗೊಳಿಸಿದಿರಿ..
ಸರಿಯಾದ ನಿದ್ದೆಯಿಲ್ಲದ ರಾತ್ರಿಗಳೊಂದಿಗೆ ತಿಂಗಳುಗಟ್ಟಲೆ ಕಷ್ಟಪಟ್ಟು ಬೋರ್ಡ್ ಪರೀಕ್ಷೆ ಮುಗಿಸಿದ್ದೀರಿ. ನಿಮಗೆ ಈಗ ಅಗತ್ಯವಾಗಿ ಬೇಕಾಗಿರುವುದು ವಿಶ್ರಾಂತಿ. ಮೊದಲನೆಯದಾಗಿ ನಿದ್ರೆಯ ಕೊರತೆಯನ್ನು ಸರಿಪಡಿಸಿಕೊಳ್ಳಿರಿ. ನಂತರ ಸ್ನೇಹಿತರೊಂದಿಗೆ ಮತ್ತು ಕುಟುಂಬದೊಂದಿಗೆ ನಿಮ್ಮ ಭವಿಷ್ಯದ ಯೋಜನೆಗಳನ್ನು ರೂಪಿಸಿಕೊಳ್ಳಿ
ನೀವು ಪರೀಕ್ಷೆಯ ಉತ್ಸವವನ್ನು ಆನಂದಿಸಿದ್ದೀರಿ,ಯಶಸ್ವಿಗೊಳಿಸಿದ್ದೀರಿ ಎಂದು ಆನಂದಿಸಿ!
ನಿಮ್ಮ ಫಲಿತಾಂಶಗಳಿಗಾಗಿ ಉತ್ಸುಕರಾಗುವುದು ಸಹಜ.
ಪರೀಕ್ಷೆ ಮುಗಿದಿದೆ ಎಂದು ಆನಂದದಿಂದ, ಆತ್ಮವಿಶ್ವಾಸದಿಂದಿರಿ. ಏನಾಯಿತು ಎಂಬುದರ ಕುರಿತು ಯೋಚಿಸುವುದರಿಂದ ಅದು ಬದಲಾಗುವುದಿಲ್ಲ.
key ಉತ್ತರಗಳಿಂದ ನಿಮ್ಮ ಫಲಿತಾಂಶವನ್ನು ಅಂದಾಜಿಸಬಹುದು..
ಈಗ ರಿಲ್ಯಾಕ್ಸ್ ಮೂಡ್ ಗೆ ಬನ್ನಿ..
1).ನಿಮ್ಮ ಮನೋವಿಕಾಸಕ್ಕಾಗಿ ಒಳ್ಳೆಯ ಸಿನಿಮಾಗಳನ್ನು ನೋಡಿರಿ..
2).ಉತ್ತಮ ಪುಸ್ತಕವನ್ನು ಓದಲು ಪ್ರಾರಂಭಿಸಿ.
3).10ನೇ ತರಗತಿ ಓದಿದ ನಂತರ ಏನು ಮಾಡುವುದು ಉತ್ತಮ?
4.ನಾನು Vs.. Future ಮುಂದೇನು ಎನ್ನೋ ಗುರಿ ಸ್ಪಷ್ಟವಾಗಿರಲಿ
5.ಉತ್ತಮ ಹವ್ಯಾಸ ರೂಡಿಸಿಕೊಳ್ಳಿರಿ ಮುಖ್ಯವಾಗಿ ನಿಮ್ಮನ್ನು ಆರೋಗ್ಯವಾಗಿರಿಸಿಕೊಳ್ಳಿ,.
6.ಧ್ಯಾನ, ಯೋಗ, ವ್ಯಾಯಾಮಗಳನ್ನು ಕೈಗೊಳ್ಳಿರಿ
7.ದಿನಪತ್ರಿಕೆ ಓದುವುದನ್ನು ರೂಢಿಸಿಕೊಳ್ಳಿರಿ ಶಬ್ದಕೋಶವನ್ನು ಮತ್ತು ಭಾಷೆಯ ಮೇಲೆ ಹಿಡಿತವನ್ನು ಹೆಚ್ಚಿಸುವುದನ್ನು ಖಚಿತಪಡಿಸಿಕೊಳ್ಳಿ.
8.ನಿಮ್ಮ ಆಸಕ್ತಿ ರಂಗದಲ್ಲಿ ಉತ್ತಮ ಗುರಿ ಹಾಕಿಕೊಳ್ಳಿರಿ ಅದಕ್ಕೆ ಸಂಬಂಧಿಸಿದ ಜ್ಞಾನವನ್ನು ಸಂಪನ್ಮೂಲಗಳನ್ನು ಸಂಗ್ರಹಿಸಿಕೊಳ್ಳಿರಿ, ಅದಕ್ಕಾಗಿ ಪರಿಶ್ರಮ ಪಡಿ.
9.ಹಾಡುಗಾರಿಕೆ, ಸಂಗೀತ ವಾದ್ಯ ನುಡಿಸುವುದು, ಪೇಂಟಿಂಗ್, ಡ್ರೈವಿಂಗ್, ರಾಕ್ ಕ್ಲೈಂಬಿಂಗ್ ವಿಶೇಷ ಸಾಂಸ್ಕೃತಿಕ ಇತ್ಯಾದಿ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದರೆ ಆ ಚಟುವಟಿಕೆಗಳಲ್ಲಿ ಭಾಗಿಯಾಗಿರಿ
10.ಸ್ಥಳೀಯ ವಿಶೇಷ ಸ್ಥಳಗಳಿಗೆ ಭೇಟಿ ನೀಡುವುದು
11.ಸಾಮಾಜಿಕ ಕಾರ್ಯಗಳಲ್ಲಿ ( Social Service) ತೊಡಗಿಸಿಕೊಳ್ಳಿ..
ನಿಮಗೆ ಒಳ್ಳೆಯದಾಗಲಿ ಉತ್ತಮ ಫಲಿತಾಂಶ ನಿಮ್ಮದಾಗಲಿ, ಶುಭವಾಗಲಿ!
👍💐💐💐💐💐
No comments:
Post a Comment