ಕಥೆ-709
ಚಿಂತೆಯೇ ಚಿತೆ
ಬ್ರಿಟನ್ ಮಾಜಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಹೇಳಿದಂತೆ.
"Let our advance worrying become advance thinking and planning ಕೆಲಸ ಕೈಗೊಳ್ಳುವ ಮೊದಲೇ ಅದರ ಫಲಿತಾಂಶದ ಕುರಿತು ಅತೀವ ಯೋಚನೆ ಮಾಡುತ್ತೇವೆ.
ಕೆಟ್ಟ ಫಲಿತಾಂಶದ ಬಗ್ಗೆ ಹೆಚ್ಚಾಗಿ ಯೋಚನೆ ಮಾಡಿ ಕೆಲಸ ಮಾಡಲು ಹಿಂಜರಿಯುತ್ತೇವೆ ಚಿಂತೆಯೇ ಚಿತೆಗೆ ಕಾರಣ.. ಹೆಚ್ಚು ಚಿಂತೆ ಮಾಡಿದಷ್ಟು ಪರಿಸ್ಥಿತಿ ಬಿಗಡಾಯಿಸುತ್ತಾ ಹೋಗುತ್ತದೆ... ಚಿಂತೆ ಮಾಡಿ ಕಾಲಹರಣ ಮಾಡುವ ಬದಲು ಚಿಂತನೆ ನಡೆಸಿ ಮುಂದಡಿಯಿಟ್ಟರೆ ಬೇಗ ಗುರಿ ತಲುಪಬಹುದು. ಹೆಜ್ಜೆ ಇಡುವುದರ ಕುರಿತು ಯೋಚಿಸುವ ಬದಲು ಹೆಜ್ಜೆ ಇಡಲೇ? ಬೇಡವೇ? ಎಂದು ಯೋಚಿಸುತ್ತ ಕುಳಿತರೆ ಸಮಯ ಹಾಳು. ಆದ್ದರಿಂದ ಅನಗತ್ಯ ನಕಾರಾತ್ಮಕ ಚಿಂತನೆಗಳಿಂದ ಹೊರಬರಬೇಕು. ಫಲಿತಾಂಶ ಕಡೆಗೆ ಹೆಚ್ಚು ಯೋಚಿಸದೇ ಕಾರ್ಯಗಳಿಗೆ ಮುಂದಾದರೆ ಮನಸು ಕೂಡ ಪ್ರಶಾಂತವಾಗಿರುತ್ತದೆ. ಇದರಿಂದ ಕೆಲಸಗಳನ್ನು ಕೂಡ ಅಂದುಕೊಂಡಿದ್ದಕ್ಕಿಂತ ಮುಂಚೆಯೇ ಮುಗಿಸಬಹುದು.
No comments:
Post a Comment