Wednesday, April 16, 2025

 ಕಥೆ-710

ರಾತ್ರೋರಾತ್ರಿ ಎತ್ತರಕ್ಕೆ ಬೆಳೆಯುವುದಕ್ಕೆ ಸಾಧ್ಯವೇ ಇಲ್ಲ. 


ನಿಮಗೆ ಚೈನೀಸ್ ಬಿದಿರನ ಬಗ್ಗೆ ಗೊತ್ತಿರಬಹುದು. ಅದೊಂದು ಅದ್ಭುತವಾದ ಗಿಡ. ನೀವು ಒಂದು ಬೀಜ ನೆಟ್ಟು ವರ್ಷಾನುಪೂರ್ತಿ ನೀರು ಹಾಕಿ ಪೋಷಿಸಿದರೂ, ಅದು ಚಿಗುರೊಡೆಯುವುದಿಲ್ಲ. ನಿಜ ಹೇಳಬೇಕೆಂದರೆ ಚಿಗುರೊಡೆಯುವುದಕ್ಕೆ ಐದು ವರ್ಷ ಬೇಕಾಗುತ್ತದೆ. ಐದು ವರ್ಷ ನಂತರ ಒಂದು ಸಣ್ಣ ಗಿಡ. ಈ ಗಿಡ ಬೆಳೆಯುವುದಕ್ಕೆ ಇನ್ನೆಷ್ಟು ವರ್ಷಗಳ ಕಾಲ ಬೇಕಾಗಬಹುದು ಎಂದೆನಿಸಬಹುದು. ಹಾಗೇನಿಲ್ಲ. ಮುಂದಿನ ಆರು ವಾರಗಳ ಕಾಲ ಅದು 90 ಅಡಿಯಷ್ಟು ಬೆಳೆದುಬಿಡುತ್ತದೆ. ಪ್ರತಿ 24 ಗಂಟೆಗೂ 39 ಇಂಚಿನಷ್ಟು ಎತ್ತರ ಅದು ಬೆಳೆಯುತ್ತ ಹೋಗುತ್ತದೆ. ಐದು ವರ್ಷಗಳ ಕಾಲ ತಾಳ್ಮೆಯಿಂದ ಕಾದರೆ, ಆ ನಂತರ ಪ್ರತಿದಿನ ಅದು ಎತ್ತರ ಎತ್ತರ ಬೆಳೆಯುವುದನ್ನು ನೋಡುತ್ತಾ ಹೋಗಬಹುದು. ಐದು ವರ್ಷಗಳ ಕಾಲ ಆ ಗಿಡ ಏನು ಮಾಡುತ್ತಿತ್ತು ಎಂಬ ಪ್ರಶ್ನೆ ಸಹಜ... ಉತ್ತರವೇನೆಂದರೆ ಅದು ಒಳಗೇ ಬೆಳೆಯುತ್ತಿರುತ್ತದೆ. ಐದು ವರ್ಷಗಳ ಕಾಲ ಅದು ಎತ್ತರಕ್ಕೆ ಬೆಳೆಯಲು ಸದ್ದಿಲ್ಲದೆ ತಯಾರಿ ನಡೆಸುತ್ತಲೇ ಇರುತ್ತದೆ. ಬೇರು ಗಟ್ಟಿ ಮಾಡಿಕೊಳ್ಳುತ್ತದೆ. ಕಡಿಮೆ ಸಮಯದಲ್ಲಿ ಅಷ್ಟು ಎತ್ತರಕ್ಕೆ ಬೆಳೆಯುವುದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ, ಅದು ಬೆಳೆಯುವುದಕ್ಕೆ ಸದ್ದಿಲ್ಲದೆ ಸೂಕ್ತ ತಯಾರಿ ನಡೆಸುತ್ತಿರುತ್ತದೆ. ಅದೇ ರೀತಿ ನಾವು ರಾತ್ರೋರಾತ್ರಿ ಎತ್ತರಕ್ಕೆ ಬೆಳೆಯುವುದಕ್ಕೆ ಸಾಧ್ಯವೇ ಇಲ್ಲ. ಅದಕ್ಕೆ ಸೂಕ್ತ ತಯಾರಿ, ತಾಳ್ಮೆ, ಶ್ರದ್ಧೆ, ಶ್ರಮ ಎಲ್ಲವೂ ಬೇಕು ಎಲ್ಲವೂ ಇದ್ದಾಗಲೇ ನಾವು ಅಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯ.. ಒಬ್ಬ ವ್ಯಕ್ತಿ ಸೆಲೆಬ್ರಿಟಿ ಆಗಿ ಎತ್ತರಕ್ಕೆ ಬೆಳೆದದ್ದು ಮಾತ್ರ ಕಾಣುತ್ತದೆ, ಅದರ ಇಂದಿನ ಪೂರ್ವ ತಯಾರಿ ತಾಳ್ಮೆ ಶ್ರದ್ಧೆ ಶ್ರಮ ನಮ್ಮ ಕಣ್ಣಿಗೆ ಕಾಣುವುದಿಲ್ಲ...

- ರಾಹುಲ್ ದ್ರಾವಿಡ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು