ಕಥೆ-711
ಹಟ ಜತೆಗೆ ವಾಸ್ತವ ಪ್ರಜ್ಞೆ..
ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದರೆ
ಹಟ ಇರುವುದು ಅಗತ್ಯ. ಇದರ ಜತೆಗೆ ವಾಸ್ತವ ಪ್ರಜ್ಞೆ ಇರಬೇಕು.
ನಮಗೆ ಸಾಕಷ್ಟು ಆಕರ್ಷಣೆಗಳ ಸೆಳೆತ ಇರಬಹುದು. ಪದವಿ ಹುದ್ದೆ, ಓದು, ಆಟ, ಸಿನಿಮಾ, ನಟನೆ ಏನು ಬೇಕಾದರೂ ಮಾಡಿ. ಆದರೆ, ಈ ಎಲ್ಲ ಪ್ರವೃತ್ತಿಗಳ ಹಿಂದೆ ಹೋಗುವ ಮುನ್ನ ಜೀವನಾಧಾರಕ್ಕೆ ಒಂದು ಭದ್ರ ಉದ್ಯೋಗ ಹುಡುಕಿಕೊಳ್ಳಬೇಕು. ಅದೇ ಕಾರಣಕ್ಕೆ ವಿದ್ಯಾಭ್ಯಾಸ ಬಹಳ ಮುಖ್ಯ ಎನ್ನುವುದು. ಕನಸಿನ ಹಿಂದೆ ಬಿದ್ದು, ವಿದ್ಯಾಭ್ಯಾಸವನ್ನು ಕಡೆಗಣಿಸಿದರೆ, ಕೊನೆಗೆ ಯಾವುದೂ ಕೈಗೆ ಬಾರದಂತೆ ಆಗಬಹುದಾದ ಅಪಾಯ ಜಾಸ್ತಿ, ಸತ್ಯ ಹೇಳುವುದಕ್ಕೆ ಭಯ ಬೇಡ. ಅದರಿಂದ ನಮಗೆ ತೊಂದರೆ ಆಗಬಹುದು. ಆದರೆ, ಸುಳ್ಳುಗಳ ಆತ್ಮವಂಚನೆ ಬೇಡ. ಪ್ರತಿಯೊಬ್ಬರು ಕೆಲವು ವಿಶಿಷ್ಟ ಶಕ್ತಿಗಳನ್ನು ಹೊಂದಿರುತ್ತಾರೆ. ಉದಾಹರಣೆಗೆ, ನಮ್ಮಲ್ಲಿರುವ ಯಾವುದೋ ಪ್ರತಿಭೆ ಇರಬಹುದು ಅಥವಾ ನಮ್ಮ ಧ್ವನಿಯೇ ಇರಬಹುದು. ವಾಕ್ ಶಕ್ತಿ ಇರಬಹುದು. ಅದನ್ನು ಸದುಪಯೋಗ ಪಡಿಸಿಕೊಳ್ಳೋಣ.
ಇಂಥ ವಿಚಾರದಲ್ಲಿ ನಮ್ಮ ಪ್ರತಿಭೆಗೆ ತಕ್ಕ ಹವ್ಯಾಸ ಅದರ ಪೋಷಣೆ ನಮ್ಮ ಜೀವನಶೈಲಿ, ಆಹಾರಗಳು ಎಲ್ಲವೂ ಮುಖ್ಯವಾಗುತ್ತದೆ. ಓರ್ವ ನಟನಾಗಿ ನನ್ನ ಧ್ವನಿಯನ್ನು ಬಹಳಷ್ಟು ಜನ ಇಪ್ಪ ಪಟ್ಟಿದ್ದಾರೆ. ನನ್ನ ಧ್ವನಿಯ ಮೂಲಕವೇ ಜನ ನನ್ನನ್ನು ಗುರುತಿಸಿದ್ದಾರೆ. ಹೊರಗೆ ಏನನ್ನೂ ತಿನ್ನಬಾರದು ಎಂಬ
ಪ್ರಬಲವಾದ ಇಚ್ಛಾಶಕ್ತಿ ನನ್ನಲ್ಲಿತ್ತು. ಅಂದುಕೊಂಡ ಯಾವುದೇ ಹೆಜ್ಜೆ ಹಿಂದೆಗೆಯದ ಸ್ವಭಾವ ನಮ್ಮದಾಗಿದ್ದರೆ, ಪ್ರತಿಭೆ ಬೆಳಗುತ್ತದೆ, ನಮಗೆ ಜನ ಗುರುತಿಸುತ್ತಾರೆ ಮತ್ತು ಗೌರವಿಸುತ್ತಾರೆ. ಜೀವನದಲ್ಲಿ ಏನು ಆಗಬೇಕೋ ಅದು ಸಾಧ್ಯವಿದೆ ನಮ್ಮಲ್ಲಿ ವಾಸ್ತವ ಪ್ರಜ್ಞೆ ಮತ್ತು ಹಟವಿರಬೇಕು
ಅಮರೀಶ್ ಪುರಿ
ಬಾಲಿವುಡ್ ದಂತಕಥೆ
No comments:
Post a Comment