Saturday, April 19, 2025

 ಕಥೆ-713

ತಪ್ಪುಗಳಿಂದ ಕಲಿಯಬೇಕಿದೆ..


ತಪ್ಪುಗಳನ್ನು ಎಲ್ಲರೂ ಮಾಡುತ್ತಾರೆ. ಆದರೆ, ತಪ್ಪುಗಳಿಂದ ಯಾವ ರೀತಿ ಕಲಿಯುತ್ತೇವೆ, ತಿದ್ದಿಕೊಳ್ಳುತ್ತೇವೆ, ನಮ್ಮ ವ್ಯಕ್ತಿತ್ವ ಮರು ರೂಪಿಸಿಕೊಳ್ಳಲು ಯಾವ ರೀತಿ ಪ್ರಯತ್ನ ಪಡುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ನಾವ್ಯಾರೂ ಪರಿಪೂರ್ಣರಲ್ಲ. ನಮ್ಮೆಲ್ಲರಲ್ಲೂ ಅನೇಕ ದೌರ್ಬಲ್ಯಗಳಿರುತ್ತವೆ. ಆದರೆ, ಜೀವನದ ಪಯಣದಲ್ಲಿ ನಮ್ಮ ದೌರ್ಬಲ್ಯಗಳನ್ನು ಒಪ್ಪಿಕೊಂಡು ಸುಧಾರಣೆಯ ಹಾದಿಯಲ್ಲಿ ಸಾಗುವುದು ಬಹಳ ಮುಖ್ಯ. ಜೀವನ ಎನ್ನುವುದು ಬಹಳ ಉದಾರಿ. ಏಕೆಂದರೆ, ನಾವು ಎಷ್ಟು ಬಾರಿ ತಪ್ಪು ಮಾಡಿದರೂ, ಮತ್ತೆ ಮತ್ತೆ ನಮ್ಮನ್ನು ನಾವು ಸುಧಾರಿಸಿಕೊಳ್ಳುವುದಕ್ಕೆ ಅವಕಾಶ ಕೊಡುತ್ತದೆ. ಕಾರಣವಿಲ್ಲದೆ ಯಾವುದೂ ಘಟಿಸುವುದಿಲ್ಲ. ಪಾಳು ಕಟ್ಟಡಗಳನ್ನೇ ನವೀಕರಣ ಮಾಡುವಾಗ, ದಾರಿ ತಪ್ಪಿದ ಬದುಕನ್ನು ಸರಿದಾರಿಗೆ ತಂದು, ವ್ಯಕ್ತಿತ್ವ ಮರುರೂಪಿಸುವ ಪ್ರಯತ್ನ ಏಕೆ ಮಾಡಬಾರದು. ಆದರೆ, ಒಂದು ವಿಚಾರವೆಂದರೆ, ದೊಡ್ಡ ಹಿನ್ನಡೆ ಅನುಭವಿಸಿದ ಬಳಿಕ ಮತ್ತೆ ಪ್ರಾರಂಭದಿಂದ ನಮ್ಮ ಪ್ರಯತ್ನ ಶುರು ಮಾಡಲು ಬೇಸರ ಪಟ್ಟುಕೊಳ್ಳಬಾರದು. ಕೆಲವೊಮ್ಮೆ ನಮ್ಮ ಸಾಧನೆಗಳು ಅಹಂಕಾರಕ್ಕೆ ಕಾರಣವಾಗಿಬಿಡುತ್ತವೆ. ಆದರೆ, ನಿಜವಾದ ದಿಢೀರನೆ ಲಭಿಸುವ ಯಶಸ್ಸು, ಕೀರ್ತಿ ಜನರ ತಲೆ ತಿರುಗಿಸಿಬಿಡುತ್ತದೆ. ಸಹವಾಸದೋಷದಿಂದ ವ್ಯಕ್ತಿತ್ವ ಹಾಳಾಗುತ್ತದೆ. ಹಾಗಾಗಿ ಸಾಧನೆಯ ಹಾದಿಯಲ್ಲಿ ನಮ್ಮ ಜತೆಗಿರುವವರು ಯಾರು?' ಎಂಥವರು ನನ್ನ ಜೊತೆಗಿದ್ದಾರೆ ಎಂಬ, ಆಯ್ಕೆಯೂ ಮುಖ್ಯವಾಗುತ್ತದೆ. . ಪ್ರತಿಭೆ ಒಂದಿದ್ದರೆ, ಯಶಸ್ವಿಯಾಗಿ ಬಿಡುವುದಿಲ್ಲ. ಅದಕ್ಕೆ ಪೂರಕವಾಗಿ ಸತತ ಪರಿಶ್ರಮ, ಪ್ರಾಮಾಣಿಕ ಪ್ರಯತ್ನ ಬೇಕಾಗುತ್ತದೆ. ಯಾವುದು ಸರಿ, ಯಾವುದು ತಪ್ಪು ಎಂದು ತೋರಿಸಿ, ತಿದ್ದುವ ಮಾರ್ಗದರ್ಶಕರ ನೆರವು ಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಕಲಿಯುವ, ಸುಧಾರಿಸಿಕೊಳ್ಳುವ ಮನಸ್ಸು ಮುಖ್ಯವಾಗುತ್ತದೆ.

 ಯಶಸ್ಸಿನ ಸೂತ್ರವಿರುವುದು ವಿನಮ್ರತೆ, ಸ್ವಯಂತಿಸ್ತು ಹಾಗೂ ಸರಳತೆಯಿಂದ ಹೆಚ್ಚುತ್ತದೆ.


 ಮೈಕ್ ಟೈಸನ್ಸ್

ಬಾಕ್ಸಿಂಗ್ ದಂತಕಥೆ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು