ಕಥೆ-714
ಸಮಯ ಕಳ್ಳರಿದ್ದಾರೆ ಹುಷಾರ್!
ಅಮೂಲ್ಯವಾದದ್ದೆಲ್ಲ ಕಳ್ಳತನವಾಗುವುದೇ ಹೆಚ್ಚು. ಅದರಂತೆ ಸಮಯವನ್ನೂ ಲೂಟಿ ಮಾಡಲು ಹಲವು ದರೋಡೆಕೋರರು ಗುಂಪು ಕಟ್ಟಿ ಕಾಯುತ್ತಿರುತ್ತಾರೆ. ಅವರೇನೂ ಚಾಕು- ಚೂರಿ ಹಿಡಿದಿರುವುದಿಲ್ಲ. ನಿಮ್ಮನ್ನು ತಾತ್ಕಾಲಿಕ ಖುಷಿಯಲ್ಲಿರುವಂತೆ ಭ್ರಮೆ ಹುಟ್ಟಿಸಿ, ಅಲಸ್ಯ ಮಾಡಿ ಸಮಯವನ್ನು ನಮ್ಮಿಂದ ಕೈಜಾರುವಂತೆ ಮಾಡುತ್ತಾರೆ. ಸಾಮಾಜಿಕ ಜಾಲತಾಣ, ವಿಡಿಯೋಗಳು,ಆಟಗಳು. ವಿಶ್ರಾಂತಿ ಇವೆಲ್ಲವೂ ಕೆಲವೊಮ್ಮೆ ದರೋಡೆಕೋರರಾಗಿ ಬದಲಾಗುತ್ತವೆ. ತಂತ್ರಜ್ಞಾನಗಳು ಸಮಯವನ್ನು ಉಳಿತಾಯ ಮಾಡಲು ಎಷ್ಟು ಪೂರಕವೋ ಅತಿಯಾದ ಬಳಕೆಯು ಅಷ್ಟೇ ಮಾರಕ. ಅದರಲೇ ಮುಳಿಗಿ ಹೋದರೆ ಸಮಯ ಕಳುವಾಗಿ ಬಿಡುತ್ತದೆ. ಕೊನೆಗೆ ಯಾರಿಗೆ ದೂರು ನೀಡಿಯೂ ಪ್ರಯೋಜನವೇ ಇಲ್ಲ. ನಮ್ಮ ಅಮೂಲ್ಯವಾದ ಸಮಯವನ್ನು ಯಾವೆಲ್ಲ ಅಂಶಗಳು ಕಸಿದುಕೊಳ್ಳುವ ಸಾಧ್ಯತೆಯಿದೆಯೋ ಅಂಥ ಅಂಶಗಳಿಂದ ದೂರವಿರುವುದೇ ಒಳ್ಳೆಯದು. ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಂಡಷ್ಟೂ ಆ ದರೋಡೆಕೋರರು ಹೆದರಿ ಓಡುತ್ತಾರೆ. ಸಮಯ ವ್ಯರ್ಥವಾಗುತ್ತಿರುವುದರ ಕುರಿತು ಚಿಂತಿಸುತ್ತಾ ಅಥವಾ ಪಶ್ಚಾತ್ತಾಪ ಪಡುತ್ತಾ ಕೂರುವ ಬದಲು ಅದರಿಂದ ಹೊರಬರಲು ಯೋಚಿಸಿದರೆ ಸಮಯ ನಿರ್ವಹಣೆ ಸುಲಭವಾಗುತ್ತದೆ.
No comments:
Post a Comment