ಕಥೆ-715
ಪೂರಕ ವಾತಾವರಣ ಸೃಷ್ಟಿಸಿಕೊಳ್ಳಿ
ನಿತ್ಯ ನಡುರಾತ್ರಿಯ ತನಕ ಮೊಬೈಲ್ ಬಳಸುತ್ತ ತಡವಾಗಿ ನಿದ್ದೆಗೆ ಜಾರಿದರೆ ಬೆಳಗ್ಗೆ ಎಚ್ಚರವಾಗುವುದೂ ತಡವಾಗಿಯೇ ಹಾಗೂ ಇದರಿಂದ ಬಹಳಷ್ಟು ಸಮಯ ವ್ಯರ್ಥವಾಗುತ್ತಿದೆ ಎಂಬ ವಿಚಾರ ನಮಗೆ ತಿಳಿದಿದ್ದರೂ ಅದನ್ನೇ ಮುಂದುವೆರೆಸುತ್ತೇವೆ. ಹೀಗೆ ಅರಿವಿದ್ದರೂ ಅವಧಿಯನ್ನು ವ್ಯರ್ಥ ಮಾಡುವುದು ಒಂದು ರೀತಿಯ ಅಸಹಾಯಕತೆ. ಕೆಲವೊಂದು ಕೆಟ್ಟ ಹವ್ಯಾಸಗಳು ಸಮಯ ನಿರ್ವಹಣೆಯಲ್ಲಿ ತೊಡಕಾಗುತ್ತಿವೆ ಎಂದು ತಿಳಿದಿದ್ದರೂ ಅದನ್ನೇ ಮುಂದುವರೆಸುತ್ತಿರುತ್ತೇವೆ. ಇದಕ್ಕೆ ಕಡಿವಾಣ ಹಾಕಬೇಕೆಂದರೆ ಮೊದಲು ನಮಗೆ ಪೂರಕವಾದ ವಾತಾವರಣವನ್ನು ಸೃಷ್ಟಿ ಮಾಡಿಕೊಳ್ಳಬೇಕು. ಯಾವೆಲ್ಲ ಅಂಶಗಳಿಂದ ಸಮಯ ಹಾಳಾಗುತ್ತಿದೆಯೋ ಅಂಥ ಅಂಶಗಳ ವಿರುದ್ಧವಾಗಿ ನಡೆದುಕೊಳ್ಳಬೇಕು. ಉದಾಹರಣೆಗೆ ಟಿವಿ ವೀಕ್ಷಣೆಯಿಂದ ಸಮಯ ಹಾಳಾಗುತ್ತಿದೆ ಎಂದಾದಲ್ಲಿ ಅದರ ಹತ್ತಿರವೇ ಹೋಗಬಾರದು. ಓದುವಾಗ ಪಕ್ಕದಲ್ಲಿಟ್ಟಿರುವ ಮೊಬೈಲ್ ಕೈಬೀಸಿ ಕರೆಯುತ್ತಿದ್ದರೆ ಅದನ್ನು ಎತ್ತಿ ಕಣ್ಣಿಗೆ ಕಾಣದಂತೆ ಇಟ್ಟರಾಯಿತು. ಮನೋ ನಿಗ್ರಹ ಅಷ್ಟೇನೂ ಸುಲಭವಲ್ಲ. ಆದರೆ ಸಮಯದ ಶತ್ರುಗಳಿಂದ ದೂರವಿರಲು ನಮಗೆ ಬೇಕಾದಂತೆ ಪೂರಕ ವಾತಾವರಣವನ್ನು ಖಂಡಿತ ಸೃಷ್ಟಿಸಿಕೊಂಡು ಸಮಯದ ನಿರ್ವಹಣೆಯನ್ನು ಸಮರ್ಥವಾಗಿ ಮಾಡಬಹುದು.
ನಮ್ಮ ಜೀವನ ನಮ್ಮ ಕೈಯಲ್ಲಿದೆ
No comments:
Post a Comment