ಕಥೆ-716
ಮನಸ್ಸಿನ ಚಾನಲ್ ಚೇಂಜ್ ಮಾಡಿ !
ಸೋಷಿಯಲ್ ಮೀಡಿಯಾದಿಂದ ಯುವಜನತೆಯಲ್ಲಿ ಈ ನಕಾರಾತ್ಮಕ ಯೋಚನೆಗಳು ಹೆಚ್ಚುತ್ತಿವೆ. ಅದರಿಂದ ಹೊರಬಂದು, ಸಕಾರಾತ್ಮಕವಾಗಿ ಯೋಚಿಸದಿದ್ದರೆ, ನಾವು ಬೆಳೆಯುವುದು, ಜೀವನದಲ್ಲಿ ಮುಂದೆ ಬರುವುದು ಬಹಳ ಕಷ್ಟ. ಈ ನಕಾರಾತ್ಮಕ ಯೋಚನೆಗಳಿಂದ ಹೊರಬರುವುದು ಹೇಗೆ? ನೀವು ಮನೇಲಿ ಟಿವಿ ನೋಡ್ತಿದ್ದೀರಾ. ಯಾವುದೋ ಚಾನಲ್‌ನಲ್ಲಿ ಯಾವುದೋ ಒಂದು ದೃಶ್ಯ ನಿಮಗೆ ಅಷ್ಟು ಇಷ್ಟ ಆಗ್ಲಿಲ್ಲ ಅಂತಿಟ್ಟುಕೊಳ್ಳಿ. ಆಗ ಏನ್ಮಾಡ್ತೀರಾ? ಚಾನಲ್ ಚೇಂಜ್ ಮಾಡ್ತೀರಿ ಮತ್ತು ನಿಮಗಿಷ್ಟವಾದ ಚಾನಲ್‌ಗೆ ಶಿಫ್ಟ್ ಆಗ್ತಿರಿ. ಅದೇ ತರಹ ನಿಮ್ಮ ಮನಸ್ಸಿನಲ್ಲಿ ದುರಾಲೋಚನೆಗಳು ಬಂದಾಗ ದಯವಿಟ್ಟು ಮನಸ್ಸಿನ ಚಾನಲ್ ಬದಲಾಯಿಸಿ, ಪಾಸಿಟಿವ್ ಚಾನಲ್‌ಗೆ ಶಿಫ್ಟ್ ಆಗಿ. ಯಾವ ಚಾನಲ್ ಗೆ ಹೋಗಬೇಕು ಅಂತ ಹೇಳ್ಲಾ?
ನಿನ್ನೆ ರಾತ್ರಿ ಕೋಟ್ಯಂತರ ಜನ ಮಲಗಿದರು. ಅದರಲ್ಲಿ ಇಂದು ಬೆಳಿಗ್ಗೆ ಕೆಲವರು ಏಳಲೇ ಇಲ್ಲ. ನೀವು ಎದ್ದಿದ್ದೀರಾ, ಉಸಿರಾಡ್ತಿದ್ದೀರಾ ... ಇದಕ್ಕಿಂತ ಒಳ್ಳೆಯ ಯೋಚನೆ ಬೇಕಾ? ಇದಕ್ಕಿಂತ ಇನ್ನೊಂದು ದೊಡ್ಡ ವರ ಬೇಕಾ? ಚಪ್ಪಲಿ ಇಲ್ಲ ಅಂತ ಕೊರಗೋ ಬದಲು ಕಾಲಿದೆ ಅಂತ ಖುಷಿಪಡಿ.
ಎರಡು ವಸ್ತುಗಳು ಒಂದೇ ಜಾಗದಲ್ಲಿ ಒಂದೇ ಸಮಯದಲ್ಲಿ ಇರೋಕೆ ಸಾಧ್ಯವಿಲ್ಲ ಎಂದು ಫಿಸಿಕ್ಸ್‌ನಲ್ಲಿ ಓದಿದ್ದು ನೆನಪಿರಬಹುದು. ಇದು ಮನಸ್ಸಿಗೂ ಅನ್ವಯಿಸುತ್ತೆ. ಮನಸ್ಸಿನಲ್ಲಿ ನಕಾರಾತ್ಮಕ ಯೋಚನೆಗಳು ಬಂದಾಗ, ಆ ಜಾಗದಲ್ಲಿ ಸಕಾರಾತ್ಮಕ ಯೋಚನೆಗಳನ್ನು ತುರುಕಿಕೊಳ್ಳಿ. ಆಗ ನಕಾರಾತ್ಮಕ ವಿಷಯಗಳು ಆಟೋಮ್ಯಾಟಿಕ್ ಆಗಿ ಜಾಗ ಖಾಲಿ ಮಾಡುತ್ತವೆ. ಇದು ಕಷ್ಟದ ಕೆಲಸ ಅಂತ ನನಗೆ ಗೊತ್ತಿದೆ. ಅಭ್ಯಾಸ ಮಾಡಿಕೊಂಡರೆ ಖಂಡಿತಾ ಸಾಧ್ಯ.
- ರಮೇಶ ಅರವಿಂದ್
ನಟ
No comments:
Post a Comment