ಕಥೆ-717
ನಕಾರಾತ್ಮಕ ಟೀಕೆಗಳಿಗೆ ಕಿವಿಗೊಡದಿರಿ
ಗುರಿಯನ್ನು ಸಕಾಲಕ್ಕೆ ತಲುಪಬೇಕೆಂದರೆ ಹಾಗೂ ಬೇಕಾದದ್ದನ್ನು ಪಡೆದುಕೊಳ್ಳಲೇಬೇಕೆಂದರೆ ಇತರರ ಅಭಿಪ್ರಾಯದ ಕುರಿತು ಚಿಂತಿಸುವುದನ್ನು ಮೊದಲು ಬಿಟ್ಟುಬಿಡಬೇಕು. ನಿಂಬೆ ಹಣ್ಣನ್ನು ಚಮಚದಲ್ಲಿ ಇಟ್ಟುಕೊಂಡು ಓಡುವ ಸ್ಪರ್ಧೆ ನಿಮಗೆ ತಿಳಿದಿರಬಹುದು. ಈ ಸ್ಪರ್ಧೆಯಲ್ಲಿ ಭಾಗವಹಿಸುವಾಗ ಓಡುವಾಗ ನಾನು ಹೇಗೆ ಕಾಣಿಸುತ್ತೇನೋ ಎಂದು ನಾಚಿಕೆಯಿಂದ ನಿಧಾನವಾಗಿ ನಡೆದರೆ ಎಲ್ಲರಿಗಿಂತ ಬೇಗ ಗುರಿ ತಲುಪಲು ಸಾಧ್ಯವೇ? ಹೀಗೆ ಎಲ್ಲ ಕೆಲಸಗಳಿಗೂ ಬೇರೆಯವರು ಏನೆಂದುಕೊಳ್ಳುತ್ತಾರೋ, ಇತರರ ದೃಷ್ಟಿಯಲ್ಲಿ ನಾವು ಹೇಗೆ ಕಾಣಿಸುತ್ತೇವೆಯೋ ಎಂದು ಯೋಚಿಸತೊಡಗಿದರೆ ಸಮಯ ಪಾಲನೆ ಇರಲಿ, ಕೆಲಸವನ್ನು ಪ್ರಾರಂಭಿಸಲೂ ಸಾಧ್ಯವಾಗುವುದಿಲ್ಲ. ಆದ್ದರಿಂದ ಗುರಿ ಯಾವಾಗಲೂ ನಾವಂದುಕೊಂಡಿದ್ದನ್ನು ನಿಗದಿತ ಸಮಯದ ಒಳಗೆ ಯಶಸ್ವಿಯಾ! ಮುಗಿಸುವುದರ ಕಡೆಗೇ ಕೇಂದ್ರೀಕೃತವಾಗಿರಬೇಕು. ಕೆಲವೊಮ್ಮೆ ಕಾಲ ಸಿಕ್ಕಾಗಲೆಲ್ಲ ಅವಕಾಶಗಳೆಂಬ ಏಣಿಯ ಮೆಟ್ಟಿಲುಗಳನ್ನು ಏರಿದರೆ. ಮಾತ್ರ ಯಶಸ್ಸೆಂಬ ಸೂರ್ಯನೆಡೆಗೆ ಹೋಗಲು ಸಾಧ್ಯ. ಅವಕಾಶಗಳು ಹಾಗೂ ಸಮಯಕ್ಕೆ ಸರಿಯಾಗಿ ಅವುಗಳ ಸದುಪಯೋಗ ಯಾವಾಗಲೂ ಮನಸ್ಸಿನಲ್ಲಿ ಅಚ್ಚು ಒತ್ತಿರಬೇಕು. ಸಲ್ಲದ ಟೀಕೆ ಹಾಗೂ ಅಭಿಪ್ರಾಯಗಳು ಕೆಲಸದ ವೇಗವನ್ನು ತಗ್ಗಿಸುತ್ತವೆ.
ಕೃಪೆ: ನೆಟ್
No comments:
Post a Comment