ಕಥೆ-718
ತನು ಪಡೆ ಮುಂಬೈ ಕಡೆ
ಮೊನ್ನೆ ಮೊನ್ನೆ JEE (Joint Entrance Exam) ಪರೀಕ್ಷೆ ಫಲಿತಾಂಶ ಪ್ರಕಟವಾಯಿತು... ಕನ್ನಡಿಗನಾದ ಕುಶಾಗ್ರ ಗುಪ್ತ ಟಾಪರ್ಸ ಲಿಸ್ಟ್ ನಲ್ಲಿ..
ಲಕ್ಷಾಂತರ ವಿದ್ಯಾರ್ಥಿಗಳ ಕನಸು IIT (Indian Institutes of Technology) ಪ್ರವೇಶ ಪಡೆಯಬೇಕೆಂಬುದು... ವಿದ್ಯಾರ್ಥಿಗಳು ಪಿಯುಸಿ(Science) ನಂತರ ಎದುರಿಸಬೇಕಾದ ಅತ್ಯಂತ ಸವಾಲಿನ ಪರೀಕ್ಷೆಗಳಲ್ಲಿ (IIT JEE Exam) ಒಂದಾಗಿದೆ. ಇದು ಕಠಿಣ ಪರಿಶ್ರಮ ಮತ್ತು ಬುದ್ಧಿವಂತಿಕೆಯ ಅಗತ್ಯವಿರುವ ಪರೀಕ್ಷೆಯಾಗಿದೆ. ಪ್ರತಿ ವರ್ಷ ಸುಮಾರು 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು JEE ಪರೀಕ್ಷೆ ಬರೆಯುತ್ತಾರೆ, ಕೇವಲ ಕೆಲವು ಸಾವಿರ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ.. ಭಾರತದಲ್ಲಿ ಅತ್ಯುನ್ನತ ಮಟ್ಟದ ತಾಂತ್ರಿಕ ತರಬೇತಿ ಸಂಸ್ಥೆಗಳಾದ IIT, NIT, ISER ಗಳಲ್ಲಿ ಅಧ್ಯಯನ ಮಾಡಲು ಜೆ.ಇ.ಇ. ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆಯಲೇಬೇಕು.
IIT ಸಂಸ್ಥೆಗಳಲ್ಲಿ ಓದುವುದು ಅಂದರೆ ಅತ್ಯಂತ ಪ್ರತಿಷ್ಠೆಯ ಹೆಮ್ಮೆಯ ಸಂಗತಿ ಎಂದರೆ ತಪ್ಪಾಗಲಾರದು... IIT ಗಳಿಗೆ ಭೇಟಿ ಕೊಡಬೇಕೆಂಬುದು ನಮ್ಮಂತ ಅನೇಕ ವಿಜ್ಞಾನ ಶಿಕ್ಷಕರ ಕನಸು ಕೂಡ.. ತಾಂತ್ರಿಕ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಲು ಬಯಸುವವರಿಗೆ ಈ IIT ಸಂಸ್ಥೆಗಳು ಉತ್ಕೃಷ್ಟ ಮಟ್ಟದ ತರಬೇತಿಯನ್ನು ನೀಡುತ್ತವೆ..
IIT ಎಂದ ಕೂಡಲೇ ನಾನು ನೋಡಿದ "ಕಮಲಿ from ನಡುಕಾವೇರಿ" ಸಿನಿಮಾ ನೆನಪಾಗುತ್ತದೆ.. ಓದುವ ವಿದ್ಯಾರ್ಥಿಗಳಿಗೆ ಇದೊಂದು ಸ್ಪೂರ್ತಿದಾಯಕ ಸಿನಿಮಾ...
ಈ ವರ್ಷ IIT ಮುಂಬೈದವರು ಮೇ 26 ರಂದು WISE (Women in Science and Engineering) ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.. ಇದಕ್ಕಾಗಿ ಕೆಲವು ನವೋದಯ ವಿದ್ಯಾಲಯಗಳನ್ನು ಆಯ್ಕೆ ಮಾಡಿದ್ದಾರೆ, ಪ್ರತಿ ವಿದ್ಯಾಲಯದಿಂದ 4 ವಿದ್ಯಾರ್ಥಿಗಳನ್ನು ಅಹ್ವಾನಿಸಿದ್ದಾರೆ.. ವಿದ್ಯಾರ್ಥಿಗಳ ಪರ್ಫಾರ್ಮೆನ್ಸ್ ಆಧಾರದ ಮೇಲೆ ಕುಕನೂರ ನವೋದಯ ವಿದ್ಯಾಲಯದಿಂದ ನನ್ನ ಮಗಳಾದ ಕುಮಾರಿ ತನುಶ್ರೀ ಬಸಾಪೂರ (9th) ಆಯ್ಕೆಯಾಗಿದ್ದಾಳೆ, ಉಳಿದ ಮೂವರು ವಿದ್ಯಾರ್ಥಿನಿಯರೊಂದಿಗೆ ಐಐಟಿ ಮುಂಬೈಗೆ ಮೇ 23ರಂದು ತೆರಳಲಿರುವುದು ವೈಯಕ್ತಿಕವಾಗಿ ಒಂದು ಖುಷಿ ಸಂಗತಿ.
JEE ತಯಾರಿಗಾಗಿ XI ನೇ ತರಗತಿ ಸರಿಯಾದ ಸಮಯ. JEE ಪಠ್ಯಕ್ರಮವು ಸಾಕಷ್ಟು ವಿಸ್ತಾರವಾಗಿದೆ. ಅನುಭವಿ ಮತ್ತು ನುರಿತ ಶಿಕ್ಷಕರ ಮಾರ್ಗದರ್ಶನ ಅವಶ್ಯಕತೆ ಇದ್ದೆ ಇರುತ್ತದೆ.. ಇದರ ಗುರಿ ಕಡೆಗೆ ನೀವು ಯಾವಾಗಲೂ ಸ್ಮಾರ್ಟ್ ವಿಧಾನವನ್ನು ತೆಗೆದುಕೊಳ್ಳಬೇಕು. ನಿಮ್ಮ ಶಕ್ತಿ, ದೌರ್ಬಲ್ಯ ಆಧಾರಿತ ನಿರ್ಧಾರ ನಿಮ್ಮದು.. ಇದನ್ನು NEET ಮಾದರಿಯಲ್ಲಿ ಲಾಂಗ್ ಟರ್ಮ್ ಕೋಚಿಂಗ್ ಪಡೆಯಬಹುದು...
ಶ್ರದ್ಧೆ, ಸ್ಪಷ್ಟ ಗುರಿ, ಕಠಿಣ ಪರಿಶ್ರಮವಿದ್ದರೆ ಎಲ್ಲವೂ ಸಾಧ್ಯ.....
- Shankargouda Basapur
GHS Hiremyageri
No comments:
Post a Comment