Sunday, April 27, 2025

 ಕಥೆ-719

ಕುರಿ ಕಾಯುತ್ತಲೇ UPSC ದಡ ಸೇರಿದ ಬೀರಪ್ಪ ಡೋಣಿ

ಆತನ ಇಡೀ ಕುಟುಂಬದ ವೃತ್ತಿಯೇ ಕುರಿಗಾಹಿತನ, ತಲೆತಲಾಂತರದಿಂದ ಅವರ ಕುಟುಂಬ ಕುರಿಕಾಯೋ ಕೆಲಸ ಮಾಡಿಕೊಂಡು ಬರ್ತಿದೆ. ಆ ಯುವಕನಿಗೆ ಜೀವನದಲ್ಲಿ ಏನಾದ್ರೂ ಸಾಧಿಸಬೇಕು ಅನ್ನೋ ಆಸೆ ಇತ್ತು. ಕೈಯಲ್ಲಿ ಪುಸ್ತಕ ಹಿಡಿದು ಕುರಿ ಬೆನ್ನು ಹತ್ತಿದ್ದ. ಹೀಗೆ ಕಾಡು ಮೇಡಲ್ಲಿ ಸುತ್ತಾಡುತ್ತಾ ಓದಿದ ಆ ಯುವಕ ಕಡೆಗೂ 2024ರ UPSC (IAS) ಪಾಸ್ ಮಾಡಿ ಅಪ್ರತಿಮ ಸಾಧನೆ ಮಾಡಿದ್ದಾನೆ. ಅವನೇ ಬೆಳಗಾವಿಯ ನಾನಾವಾಡಿಯ ಬೀರಪ್ಪ ಡೋಣಿ.. ದೇಶದ ಅತ್ಯುನ್ನತ್ತ ಪರೀಕ್ಷೆಯಲ್ಲಿ ಒಂದಾದ UPSC ಪರೀಕ್ಷೆಯಲ್ಲಿ ಬೀರಪ್ಪ ದೇಶಕ್ಕೆ 551 ನೇ Rank ಪಡೆದು ತಾನು ಕಲಿತ ಶಾಲೆ ಹಾಗೂ ತನ್ನೂರು ಹಾಗೂ ತನ್ನ ಕುಟುಂಬಕ್ಕೆ ಕೀರ್ತಿ ತಂದಿದ್ದಾನೆ. ಮುಂದೆ ಐಪಿಎಸ್ ಆಫೀಸರ್ ಆಗಿ ಕೆಲಸ ಮಾಡುವ ಆಸೆ ಹೊಂದಿದ್ದಾನೆ. 2021 ರಿಂದ ಓದಲು ಪ್ರಾರಂಭ ಮಾಡಿದ್ದ. ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್ ಆಗಲೇಬೇಕು ಎಂದು ಹಠ ಹಿಡಿದು ಛಲದಂಕಮಲ್ಲನ ರೀತಿ ತಯಾರಿ ನಡೆಸಿ ಕಡೆಗೂ ಯಶಸ್ವಿಯಾಗಿದ್ದಾನೆ.. ಎಷ್ಟೋ ಸಾರಿ ನಾವು ಆ ಸೌಲಭ್ಯವಿಲ್ಲ ಈ ಸೌಲಭ್ಯಗಳಿಲ್ಲ ಎಂದು ವಾದಿಸುತ್ತೇವೆ, ಕೇವಲ ಸೌಲಭ್ಯಗಳ ಹಿಂದೆ ಬೆನ್ನತ್ತೋದಲ್ಲ, ಗುರಿ ಹಿಂದೆ ಬೆನ್ನತ್ತಬೇಕು... ಪ್ರಯತ್ನವಾದಿಗಳಿಗೆ ಎಲ್ಲವೂ ಸಾಧ್ಯ...

👍💐

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು