Tuesday, May 13, 2025

 ಕಥೆ-732

ಸಾರ್ಥಕತೆ ತರದ ಕೆಲಸ ಎಷ್ಟೇ ದೊಡ್ಡದಾದರೂ ಕನಿಷ್ಠವೇ....

ಆತ್ಮೀಯ ಸ್ಪರ್ಧಾರ್ಥಿಗಳೇ,

ನಾನು ದೊಡ್ಡ ವ್ಯಕ್ತಿಯಾಗಬೇಕು. ನನಗೆ ಆ ವೃತ್ತಿ ಸಿಕ್ಕಿದ್ದರೆ ದೊಡ್ಡ ವ್ಯಕ್ತಿಯಾಗುತ್ತಿದ್ದೆ, ದೊಡ್ಡ ಯಶಸ್ಸು ಪಡೆಯುತ್ತಿದ್ದೆ ಎಂದು ಕೊರಗುವವರು,ನಮ್ಮ ಸುತ್ತಮುತ್ತ ದೊಡ್ಡ ಸಂಖ್ಯೆಯಲ್ಲಿದ್ದಾರೆ, ಅವರು ಎಂದಿಗೂ ಏನನ್ನೂ ಸಾಧಿಸಲಾರರು.


ವ್ಯಕ್ತಿಗೆ ಗೌರವ ಬರುವುದು ಹುದ್ದೆಯಿಂದಲ್ಲ, ವ್ಯಕ್ತಿಯ ವ್ಯಕ್ತಿತ್ವದಿಂದ, ಎಷ್ಟೋ ವ್ಯಕ್ತಿಗಳು ದೊಡ್ಡ ಹುದ್ದೆಯಲ್ಲಿದ್ದರೂ ಸಮಾಜದಲ್ಲಿ ಸಣ್ಣವರಂತೆ ಕಾಣುತ್ತಾರೆ. ಕಾರಣ, ಅವರ ವರ್ತನೆ, ಅವರ ವ್ಯಕ್ತಿತ್ವ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಅವಕಾಶವಿರುತ್ತದೆ.


ಸಣ್ಣ ಕೆಲಸವೇ ಇರಬಹುದು, ಅದೊಂದು ದೊಡ್ಡ ಅವಕಾಶವೆಂದು ತಿಳಿಯಬೇಕು. ಯಾರು ತನಗೆ ಸಿಕ್ಕಿದ ಅವಕಾಶವನ್ನು ಶ್ರದ್ಧೆಯಿಂದ ಮಾಡುತ್ತಾರೋ ಅವರು ಸಣ್ಣ ವೃತ್ತಿಯಿಂದ ಮಹಾನ್ ಸಾಧನೆ ಮಾಡಿ ದಂತಕತೆಯಾಗುತ್ತಾರೆ. ಅವರು ಸಮಾಜಕ್ಕೆ ಮಾದರಿಯಾಗುತ್ತಾರೆ.


ದೊಡ್ಡ ಅವಕಾಶ ಸಿಕ್ಕರೂ ಸದ್ಬಳಕೆ ಮಾಡಿಕೊಳ್ಳದೆ ನಿರುದ್ಯೋಗಿಗಳಾಗಿ ಅದೃಷ್ಟವನ್ನು ದೂರುತ್ತಾ ಮೂಲೆ ಗುಂಪಾದ ಎಷ್ಟೋ ಮಂದಿ ನಮ್ಮ ಸುತ್ತಮುತ್ತಲಿದ್ದಾರೆ.


ಜಗತ್ತಿನಲ್ಲಿ ಯಾವ ಕೆಲಸವೂ ಶ್ರೇಷ್ಠವಲ್ಲ, ಯಾವ ಕೆಲಸವೂ ಕನಿಷ್ಠವಲ್ಲ, ಅದು ನಮ್ಮ ಮನಸ್ಥಿತಿಯಷ್ಟೇ.. ಯಾವ ಕೆಲಸ ತೃಪ್ತಿ ಕೊಡುತ್ತದೋ, ಗೌರವ ತರುತ್ತದೋ ಅದು ಸಣ್ಣ ಕೆಲಸವಾದರೂ ಶ್ರೇಷ್ಟವೇ, ದೊಡ್ಡ ಹುದ್ದೆಯಲ್ಲಿದ್ದು, ಅದು ತೃಪ್ತಿ ಕೊಡದೆ, ಸಾರ್ಥಕತೆ ತರದ ಆ ಕೆಲಸ ಎಷ್ಟೇ ದೊಡ್ಡದಾದರೂ ಕನಿಷ್ಠವೇ.

ಕೃಪೆ -ನೆಟ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು