Wednesday, May 14, 2025

 ಕಥೆ-733

ಬೇಕಿರುವುದು ಗೆಲುವಷ್ಟೇ ಅಲ್ಲ

ನಾವು ಸಾಮಾನ್ಯವಾಗಿ ಯಶಸ್ವಿ ಪುರುಷರ ಮತ್ತು ಇತಿಹಾಸ ಸೃಷ್ಟಿಸಿದವರ ಜೀವನದ ಬಗ್ಗೆ ಅರಿತುಕೊಳ್ಳುವುದಕ್ಕೆ ಹೆಚ್ಚು ಉತ್ಸುಕರಾಗಿರುತ್ತೇವೆ. ಅವರು ಹೇಗೆ ಜೀವನದಲ್ಲಿ ಅಷ್ಟೊಂದು ಮುಂದುವರೆದರು ಎಂಬುದನ್ನು ಅರಿತುಕೊಳ್ಳುವುದಕ್ಕೆ ಮುಂದಾಗುತ್ತೇವೆ. ಇಲ್ಲಿ ಒಂದು ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಯಾರೇ ಆಗಲೀ, ಸೋಲನ್ನು ಕಾಣದೆಯೇ ಗೆಲುವು ಕಾಣುವುದಕ್ಕೆ ಸಾಧ್ಯವೇ ಇಲ್ಲ. ಆದರೆ, ಸೋಲಿಗಿಂತ ಅವರ ಸಾಧನೆಯಿಂದ ಅವರನ್ನು ಗುರುತಿಸಲ್ಪಡಲಾಗುತ್ತದೆ. ಅಷ್ಟೇ ಅಲ್ಲ, ಆ ಗೆಲುವು ಹಾಗೂ ಸಾಧನೆಯಿಂದಾಗಿ ಸೋಲು ಕ್ರಮೇಣ ಹಿಂದೆ ಸರಿದುಹೋಗಿರುತ್ತದೆ. ಹಾಗಾಗಿ, ನಾವು ಗಮನಿಸಬೇಕಾಗಿದ್ದು ಅವರ ಗೆಲುವನ್ನಲ್ಲ. ಬದಲಿಗೆ ಅವರು ಸೋತಿದ್ದೆಲ್ಲಿ ಮತ್ತು ಆ ಸೋಲನ್ನು ಮೆಟ್ಟಿನಿಂತು ಅವರು ಹೇಗೆ ಯಶಸ್ಸಿನತ್ತ ಬಂದರು. ಜೀವನದಲ್ಲಿ ಕೇವಲ ಸೋಲು ಆಗುತ್ತದೆ ಎಂದರ್ಥವಲ್ಲ. ಆದರೆ, ಅವರ ಸೋಲು, ನೋವು, ಅವಮಾನ ಮತ್ತು ಅದರಿಂದ ಅವರು ಆಚೆ ಬಂದು ಹೇಗೆ ಮುನ್ನಡೆದರು ಎಂಬುದನ್ನು ಅರ್ಥ ಮಾಡಿಕೊಂಡರೆ, ಅದು ನಮ್ಮ ಗೆಲುವಿಗೂ ಸಹಾಯ ಮಾಡುತ್ತದೆ. ಮುಖ್ಯವಾಗಿ ಇಲ್ಲಿ ಗೆಲ್ಲಬೇಕು ಎನ್ನುವುದಕ್ಕಿಂತ, ಅವರು ಹೇಗೆ ಮಿಕ್ಕವರಿಗಿಂತ ವಿಭಿನ್ನವಾಗಿದ್ದರು ಮತ್ತು ನಾವು ಸಹ ಹೇಗೆ ವಿಭಿನ್ನವಾಗಿ ಯೋಚಿಸಬೇಕು ಎಂದು ಗೊತ್ತಾಗುತ್ತದೆ.


ವಿವೇಕ್ ಬಿಂದ್ರಾ ಮಾರ್ಗದರ್ಶಕ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು