ಕಥೆ-731
ಆಲೋಚನೆಯಂತೆ ಜೀವನ
ಕೆಲವರು ಈ ಜೀವನ ಎಂಬ ಯುದ್ಧ ಅಥವಾ ಹೋರಾಟದಲ್ಲಿ ಯಶಸ್ಸನ್ನು ಕಾಣ್ತರಲ್ವಾ? ಅದಕ್ಕೆ ಕಾರಣ ಏನು ಅಂತ ಹುಡುಕಿಕೊಂಡು ಹೊರಟ್ರೆ, ಮುಖ್ಯವಾದುದು ಅವರು ಯೋಚನೆ ಮಾಡುವಂತಹ ರೀತಿ, ಆಂಗ್ಲ ಗಾದೆಯೊಂದಿದೆ, You are finally, only your thoughts.. ಯೋಚನೆಗಳು, ಆಲೋಚನೆಗಳು ನೀವು ಪ್ರಪಂಚವನ್ನ, ಜೀವನವನ್ನ ಹೇಗೆ ನೋಡ್ತೀರಿ ಅನ್ನೋದನ್ನ ತೋರಿಸ್ತದೆ. ಅಷ್ಟೇ ಅಲ್ಲ, ನಿಮ್ಮ ಜೀವನವನ್ನ ನಿರ್ಣಯ ಮಾಡೋದೂ ಅದೇ.
ಒಂದು ಕಡೆ God is now here ಎಂದು ಬರೆಯಲಾಗಿತ್ತು. ಅದೇ ರಸ್ತೆಯಲ್ಲಿ ಒಬ್ಬ ಹೋಗುತ್ತಿದ್ದ. ಅವನಿಗೆ ದೇವರ ಮೇಲೆ ನಂಬಿಕೆ ಇಲ್ಲ. ಅವನು God is no where ಅಂತ ಓದ್ಕೊಂಡು ಹೋದನಂತೆ. ಬೋರ್ಡ್ ಒಂದೇ. ಆದರೆ, ನೋಡುವವರ ದೃಷ್ಟಿ ಮಾತ್ರ ಬೇರೆ. here ಅನ್ನೋದನ್ನ where ಅಂತ ಓದಿಕೊಂಡರೆ ಅದರ ಅರ್ಥ ಬೇರೆ ಆಗಿರುತ್ತೆ. ಆಗಿದ್ದರೆ, ಅದನ್ನ ಖಂಡಿತ ನಮ್ಮ ಉಪಯೋಗಕ್ಕೆ ಬಳಸಿಕೊಳ್ಳಬಹುದು ಅಂತ ನನ್ನ ದೃಢವಾದ ನಂಬಿಕೆ. ಈಗ ಬಹಳಷ್ಟು ಮಂದಿಗೆ ಒಂದು ಟೆನ್ಸನ್ ಇದೆ. ನಾಳೆ ಏನಾಗುತ್ತದೋ, ಆರು ತಿಂಗಳ ನಂತರ ಏನಾಗುತ್ತದೋ ಅಂತ ಯೋಚನೆ ಮಾಡಿ ಮಾಡಿ ಹಲವರು ಹೈರಾಣಾಗಿದ್ದಾರೆ. ಅಂಥ ಯೋಚನೆ ಬರೋದು ತಪ್ಪು ಅಂತ ಹೇಳುತ್ತಿಲ್ಲ. ಆದರೆ, ತುಂಬ ಯೋಚನೆ ಮಾಡಿ, ನಾಳೆ ಹಾಗಾಗುತ್ತೆ, ಹೀಗಾಗುತ್ತೆ ಅಂತ ಕಲ್ಪನೆಯಲ್ಲಿ ಜನ ತಮ್ಮನ್ನ ಹಿಂಸಿಸಿಕೊಳ್ತಿದ್ದಾರೆ ಅನಿಸುತ್ತದೆ. ನಾವು ನೋಡುವ ದೃಷ್ಟಿ ಸರಿ ಇದ್ದರೆ, ಅದು ಪಾಸಿಟಿವ್... ಅದರಲ್ಲೂ ಕೆಟ್ಟದ್ದನ್ನು ಕಲ್ಪಿಸಿಕೊಳ್ಳಬೇಡಿ. ಏಕೆಂದರೆ, ನೆಗೆಟಿವ್ ಅಂಶಗಳು ನಮ್ಮ ಮೆಂಟಲ್ ಎನರ್ಜಿಯನ್ನು ಹೀರಿಬಿಡುತ್ತವೆ. ಹಾಗಾಗಿ ಪಾಸಿಟಿವ್ ಆಗಿರುವುದು ಬಹಳ ಮುಖ್ಯ. ಒಂದು ಪಕ್ಷ ನಾಳೆ ಕೆಟ್ಟ ಪರಿಸ್ಥಿತಿ ನಿಜಕ್ಕೂ ಬಂದುಬಿಡಬಹುದು, ಆಗ ಫೇಸ್ ಮಾಡೋಣ, ಘನತೆಯಿಂದ ಸ್ವೀಕರಿಸೋಣ.
ಕೃಪೆ:ರಮೇಶ ಅರವಿಂದ್, ನಟ
No comments:
Post a Comment