ಭಾರತ ದೇಶದ ಅತಿ ಮುಖ್ಯ ರೈಲ್ವೆ ಮಾರ್ಗಗಳಲ್ಲಿ ಒಂದು ಅದು ಗದಗ--ವಾಡಿ ರೈಲ್ವೆ ಯೋಜನೆ... ಗದಗ(ತಳಕಲ್) ಮಾರ್ಗದ ಕಾಮಗಾರಿ ಕುಷ್ಟಗಿ ಪಟ್ಟಣದವರೆಗೆ ಪೂರ್ಣಗೊಂಡಿದ್ದು, ಮುಂದೆ ಕುಷ್ಟಗಿಯಿಂದ ವಾಡಿವರೆಗೆ ಕಾಮಗಾರಿ ಪೂರ್ಣಗೊಳ್ಳಬೇಕಿದೆ.. ಕುಷ್ಟಗಿ ಭಾಗದ ಜನರ ಕನಸಾಗಿದ್ದ ರೈಲ್ವೆ ಪ್ರಯಾಣ ಇಂದು (2025 ಮೇ 15 ) ಕುಷ್ಟಗಿಯಿಂದ ಹುಬ್ಬಳ್ಳಿ ಕಡೆ ರೈಲು ಪ್ರಯಾಣ ಆರಂಭದ ಉದ್ಘಾಟನೆ ಮೂಲಕ ನನಸಾಗಿದೆ. ಕುಷ್ಟಗಿ-ಹುಬ್ಬಳ್ಳಿ, ಮತ್ತು ಹುಬ್ಬಳ್ಳಿ -ಕುಷ್ಟಗಿ ರೈಲ್ವೇ ಪ್ರಯಾಣ ಇಂದು ಲೋಕಾರ್ಪಣೆಗೊಂಡಿದೆ. ಹುಬ್ಬಳ್ಳಿ, ಗದಗ ಯಲಬುರ್ಗಾ ಕುಷ್ಟಗಿ..... ಮುಂದೆ ಕಲಬುರಗಿ, ಸೊಲ್ಲಾಪುರ ಹಾಗೂ ಹೊಸದಿಲ್ಲಿಯ ಮೂಲಕ ಉತ್ತರ ಭಾರತಕ್ಕೆ ನೇರವಾದ ಸಂರ್ಪಕ ಒದಗಲಿದೆ.. ಇದಕ್ಕೆ ಯಲಬುರ್ಗಾ,ಕೊಪ್ಪಳ ಮತ್ತು ಕುಷ್ಟಗಿಯ ಪ್ರಮುಖ ನಾಯಕರ ಪ್ರಯತ್ನವಿದೆ..ಈ ರೈಲು ಮಾರ್ಗದಿಂದ ವಾಣಿಜ್ಯ, ವ್ಯಾಪಾರ ಹಾಗೂ ಕೃಷಿ ಉತ್ಪನ್ನ ವಸ್ತುಗಳ ಸಾಗಣೆ ಜತೆಗೆ ಜನರ ಸಂಚಾರಕ್ಕೆ ಬಹಳಷ್ಟು ಅನುಕೂಲವಾಗಲಿದೆ. ಪ್ರಮುಖವಾಗಿ ಒಣ ಬೇಸಾಯದ ತಾಲೂಕುಗಳಾದ ಕುಷ್ಟಗಿ, ಯಲಬುರ್ಗಾ ಭಾಗದ ಜನರು ನೇರವಾಗಿ ಹುಬ್ಬಳ್ಳಿ ರೈಲು ಸಂಚಾರ ಮಾಡಬಹುದಾಗಿದೆ.
ಹೈದರಾಬಾದ್ ನಿಜಾಮರ ಆಡಳಿತ ಹಾಗೂ ಭಾರತದಲ್ಲಿದ್ದ ಬ್ರಿಟಿಷ್ ಸರಕಾರ ಈ ರೈಲ್ವೆ ಯೋಜನೆಯನ್ನು ಮಾಡಲು ಆಸಕ್ತಿ ವಹಿಸಿತ್ತು ಎಂದು ಹೇಳಲಾಗುತ್ತಿದೆ. ಇದರ ಸರ್ವೆ ಆರಂಭವಾಗಿದ್ದು 1998ರಲ್ಲಿ ಬಳಿಕ 2009ರಲ್ಲಿ ಅಪ್‌ಡೇಟ್ ಸರ್ವೆ ಮಾಡಿಸಲಾಯಿತು. ಕೊನೆಗೆ 2013-14 ರಲ್ಲಿ ರೈಲ್ವೆ ಬಜೆಟ್‌ನಲ್ಲಿ ಸೇರಿಸಿ, ಸಂಸತ್ತಿನಲ್ಲಿ ಒಪ್ಪಿಗೆ ಪಡೆಯಲಾಗಿತ್ತು. ಇಂದು ರೈಲ್ವೆ ಪ್ರಯಾಣ ಲೋಕಾರ್ಪಣೆಗೊಂಡಿದ್ದು ಕುಷ್ಟಗಿ ಭಾಗದ ಜನರಿಗೆ ಅತ್ಯಂತ ಸಂಭ್ರಮ ಸಡಗರದ ಹಬ್ಬವಾಗಿತ್ತು..
ಕುಷ್ಟಿಗಿ...... ಕುಷ್ಟಗಿ , ಎಂದು ಹೆಸರು ಬರಲು ಕಾರಣ ಇಲ್ಲಿಯ ವಾತಾವರಣ. ಇಲ್ಲಿನ ಮೂಲಿಕೆ ಮತ್ತು ಜಲಮೂಲ ಔಷಧೀಯ ವಿಶೇಷ ಗುಣಕ್ಕೆ ಎಂತಹ ಕಾಯಿಲೆಗಳಿದ್ದರೂ ಗುಣವಾಗುವ ನಂಬಿಕೆ ಇತ್ತು. ಕುಷ್ಟರೋಗಿಗಳು ಬಂದು ಇಲ್ಲಿ ವಾಸವಾದರೆ, ಅವರ ರೋಗ ರುಜಿನಗಳು ಕಡಿಮೆಯಾಗುವ ಪ್ರತೀತಿ ಇತ್ತು ಎಂದು ಹಿರಿಯರು ಹೇಳುವ ಮಾತಿದು. ಇಂದು ಪ್ಲೋರೈಡ್ ಯುಕ್ತ ನೀರಿನ ಬಳಕೆ ಹೆಚ್ಚಾಗಿದ್ದು ಪುರಸಭೆಯ ವತಿಯಿಂದ ಕೊಳವೆಬಾವಿ ಹಾಗೂ ಸಂಗಮದಿಂದ ಬರುವ ನಲ್ಲಿ ನೀರು. ಅಲ್ಲದೆ ನಿಡಸೇಸಿ ಕೆರಯೇ ಜೀವನ ಉಳಿಸಿದ ಏಕೈಕ ಕೆರೆ ,
ಕುಷ್ಟಗಿ ಎಂದರೆ ದಾಳಿಂಬೆ ಮತ್ತು ಪಪ್ಪಾಯಿ ಬೆಳೆಗಳ ತವರು...
ಭೌಗೋಳಿಕ ವಿಸ್ತಾರ ಹೊಂದಿರುವ ನಗರ ಕುಷ್ಟಗಿ... ಕ್ರಿ.ಪೂ 2 ರಿಂದ 3 ನೇ ಶತಮಾನದ ಅವಶೇಷಗಳು ಇಲ್ಲಿ ಕಂಡುಬಂದಿವೆ, ನೂತನ ಶಿಲಾಯುಗದಿಂದ ಕಲ್ಯಾಣ ಚಾಲುಕ್ಯರ ಕಾಲದವರೆಗಿನ ವೈಭವದ ಕುರುಹುಗಳು ಕಂಡುಬಂದಿವೆ.
ವಾಣಿಜ್ಯ ನಗರವಾಗಿ ಬೆಳೆಯುತ್ತಿರುವ ಕುಷ್ಟಗಿಗೆ, ಕೇವಲ ರಸ್ತೆ ಮಾರ್ಗ ಮಾತ್ರ ಇತ್ತು.. ಈ ನಗರಕ್ಕೆ ಹಗಲು- ರಾತ್ರಿ ವಾಹನಗಳ ದಟ್ಟಣೆ ಇದೆ.. ಯಾವಾಗಲೂ ಗಿಜಗುಡತ್ತಿರುವ ಬೆಂಗಳೂರು-ಸೊಲ್ಲಾಪೂರ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ-50. ಅಲ್ಲದೆ, ಹುಬ್ಬಳ್ಳಿ- ಹೈದರಾಬಾದ್ ಹೆದ್ದಾರಿ.. ಈಗ ಕುಷ್ಟಗಿಯು ರೈಲ್ವೆ ಪ್ರಯಾಣದ ಹೊಸ ಗರಿಮೆಯನ್ನು ಹೊಂದಿದಂತಾಗಿದೆ..
-Shankargouda Basapur

No comments:
Post a Comment