ಕಥೆ-745
ಸೇನಾ ಅಧಿಕಾರಿಯೊಬ್ಬರಿಗೆ ವ್ಯಕ್ತಿಯೊಬ್ಬರಿಂದ ಪತ್ರ ಬಂದಿತ್ತು__
ವಿಷಯ ಏನೆಂದರೆ.... ಅನುಮತಿಗಾಗಿ ಬೇಡಿಕೆ ಪತ್ರ....
ನನ್ನ ಹೆಸರು ರಾಮಸ್ವಾಮಿ, ನಾನು ಒಬ್ಬ ಸರ್ಕಾರಿ ನೌಕರನಾಗಿ ಕೆಲಸ ಮಾಡಿ ನಿವೃತ್ತನಾಗಿದ್ದೇನೆ.
ನನ್ನ ಮಗ ಸೇನೆಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಹತ್ತು ತಿಂಗಳ ಹಿಂದೆ ಯುದ್ಧದಲ್ಲಿ ಹುತಾತ್ಮನಾದ. ಅವನು ನಿಧನನಾದ ಸ್ಥಳಕ್ಕೆ ಭೇಟಿ ನೀಡಲು ನಾನು ಮತ್ತು ನನ್ನ ಪತ್ನಿ ನಿಮ್ಮ ಅನುಮತಿಗಾಗಿ ಕಾಯುತ್ತಿದ್ದೇವೆ.
ಅನುಮತಿ ಕೊಟ್ಟರೆ ಸರಿ, ಅದು ಸಾಧ್ಯವಿಲ್ಲ, ನಿಮ್ಮ ನಿಯಮಗಳಿಗೆ ತೊಂದರೆಯಾಗುತ್ತದೆ, ಬೇಡ ಎಂದರೂ ಸರಿ ಎಂದು ಪತ್ರವನ್ನು ಮುಗಿಸಿದ್ದರು......
ಆ ಪತ್ರವನ್ನು ಓದಿದ ಅಧಿಕಾರಿಯ ಕಣ್ಣುಗಳು ತೇವಗೊಂಡವು. ಕೂಡಲೇ ‘ಸರ್ಕಾರದ ಖರ್ಚಿನಲ್ಲಿ ಅವರನ್ನು ಕರೆಸಿ, ಸರ್ಕಾರ ವೆಚ್ಚ ಭರಿಸದಿದ್ದರೆ ನನ್ನ ಸ್ವಂತ ಖರ್ಚಿನಲ್ಲಿ ಕರೆಸಿ’ ಎಂದು ಆದೇಶ ಹೊರಡಿಸಿದರು!
ಅದರಂತೆ ಆ ವೃದ್ಧ ದಂಪತಿಗಳು ಅಲ್ಲಿಗೆ ಹೊರಟರು,,,
ಅಲ್ಲಿ ಕೆಲಸ ಮಾಡುತ್ತಿದ್ದವರೆಲ್ಲ ವೃದ್ಧ ದಂಪತಿಗೆ ನಮಸ್ಕರಿಸಿದರು.ಕೊನೆಯಲ್ಲಿ ಒಬ್ಬರಂತೂ ಗೌರವದಿಂದ ದಂಪತಿಗಳ ಪಾದಗಳಿಗೆ ಪುಷ್ಪಗಳನ್ನಿಟ್ಟು ಮುಟ್ಟಿ ನಮಸ್ಕರಿಸಿದರು .
ಆಗ ಆ ದಂಪತಿಗಳು
ಯಾಕೆ ಹೀಗೆ? ನೀವು ದೊಡ್ಡ ಅಧಿಕಾರಿ! ಎಲ್ಲರಂತೆ ನಮಸ್ಕಾರ ಮಾಡಿದರೆ ಸಾಕಲ್ಲವೇ? ಎಂದು ಕೇಳಿದರು.
ಆಗ ಅವರು ----
ಇವರೆಲ್ಲ ಈಗ ಹೊಸದಾಗಿ ಉದ್ಯೋಗದಲ್ಲಿದ್ದಾರೆ. ನಾನು ನಿಮ್ಮ ಮಗನೊಂದಿಗೆ ಕೆಲಸ ಮಾಡಿದ್ದೇನೆ,ಒಂದು ನಿಮಿಷ ಮಾತಿಲ್ಲದೆ ನಿಂತರು.
ಏನಿಲ್ಲ ಬಾಬು, ಧೈರ್ಯವಾಗಿ ಏನು ಹೇಳು, ನಾನು ಅಳುವುದಿಲ್ಲ!' ಎಂದ ಮುದುಕ.
ನೀವಲ್ಲ, ನಾನು ಅಳಬಾರದೆಂದು ನಿಲ್ಲಿಸಿದೆ!!’ ಎಂದು ಮತ್ತೆ ಹೇಳತೊಡಗಿದರು...
ಆ ದಿನ ಶತ್ರುಗಳೊಂದಿಗೆ ಯುದ್ಧ ನಡೆಯುತ್ತಿತ್ತು...! ನಮ್ಮಲ್ಲಿ ಶಸ್ತ್ರಾಸ್ತ್ರಗಳ ಕೊರತೆಯಿತ್ತು. ಆದದ್ದಾಗಲಿ ಎಂದು ಮುನ್ನುಗ್ಗಿದೆ,,. ಆಗ ನಿಮ್ಮ ಮಗ ನನ್ನನ್ನು ಪಕ್ಕಕ್ಕೆ ಎಳೆದುಕೊಂಡು .. 'ಹುಚ್ಚಾ ನಿನಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ, ನಾನೇ ಮೊದಲು ಮುಂದೆ ಹೋಗುವೆ ಎಂದು ಮುಂದೆ ಹೋಗಿ ವೀರಾವೇಷದಿಂದ ಹೋರಾಡಿ ಅವರು 13 ಶತ್ರುಗಳನ್ನು ಕೊಂದರು, ದುರದೃಷ್ಟವಶಾತ್ ಶತ್ರುಗಳಿಂದ ನುಗ್ಗಿಬಂದ ಗುಂಡಿಗೆ ಬಲಿಯಾದರು. ಇಲ್ಲೇ ನನ್ನ ಮಡಿಲಲ್ಲಿ ತಲೆಯಿಟ್ಟು ಸತ್ತರು. ಅವರ ದೇಹದಲ್ಲಿ ಐದಾರು ಗುಂಡುಗಳು ಹೊಕ್ಕಿದ್ದವು ಎಂದು ಗದ್ಗದಿತಾದನು. ಇದನ್ನೆಲ್ಲಾ ಕೇಳುತ್ತಿದ್ದ ಆ ತಾಯಿ ಮೂಲೆಯಲ್ಲಿ ಸೀರೆ - ಕೊನೆಯನ್ನು ಮುಚ್ಚಿ ಅಳುತ್ತಿದ್ದಳು,,
ಆ ದಿನ ನಾನು ನಿಮ್ಮಲ್ಲಿಗೆ ನಿಮ್ಮ ಮಗನ ಶವವನ್ನು ತರಬೇಕಾಗಿತ್ತು, ಆದರೆ ನನಗೆ ಆ ದಿನ ಬೇರೆ ಕರ್ತವ್ಯವನ್ನು ನೀಡಲಾಯಿತು! ಎನ್ನುತ್ತಾ ಮತ್ತೊಮ್ಮೆ ಅಳುತ್ತಾ ಅವರ ಪಾದದ ಮೇಲೆ ತಲೆ ಇಟ್ಟ.
ಆಗ ಆ ದಂಪತಿಗಳು--
ಮಗನ ಹುಟ್ಟುಹಬ್ಬಕ್ಕೆ ಮಗನು ಮನೆಗೆ ಬರುವನೆಂದು ಬಟ್ಟೆ ಖರೀದಿಸಿದ್ದೆವು, ಆದರೆ ಆತನ ಸಾವಿನ ಸುದ್ದಿ ತಿಳಿಯಿತು. ಅದಕ್ಕೇ ನಾವು ಈ ಬಟ್ಟೆಗಳನ್ನು ಇಲ್ಲಿ ನಿಮಗೆ ಕೊಡಲು ತಂದಿದ್ದೇವೆ, ಅಭ್ಯಂತರವಿಲ್ಲದಿದ್ದರೆ ತೆಗೆದುಕೊಳ್ಳಿ ಎಂದು ಅವುಗಳನ್ನು ನೀಡಿ ಮರುಮಾತಾಡದೇ ಅಲ್ಲಿಂದ ಹೊರಟುಹೋದರು.
ಇಂತಹ ಕಥೆಗಳು ಸತ್ಯ! ಈ ವಿಷಯಗಳು ನಮಗೆ ತಿಳಿಯುವುದಿಲ್ಲ! ಅಥವಾ ನಾವು ಇಂತವುಗಳನ್ನು ಯೋಚಿಸುವುದೇ ಇಲ್ಲ ಅಥವಾ ತಿಳಿಯಬಯಸುವುದಿಲ್ಲ.
ನಮ್ಮನ್ನು ಹಗಲಿರುಳೂ ಕಾಯುವ ಸೈನಿಕರಿಗೆ ದೊಡ್ಡದೊಂದು ಆದರಪೂರ್ವಕ ಪ್ರಣಾಮ.
ಕೃಪೆ: ಸಂಪಿಗೆ ವಾಸು
No comments:
Post a Comment