Monday, June 2, 2025

 ಕಥೆ-746

ಸುಖ-ಭೋಗಗಳ ತ್ಯಜಿಸಿದಾಗ ಸಾಧನೆ (ಜ್ಞಾನ) ಪ್ರಾಪ್ತಿ..

https://basapurs.blogspot.com


'ಈ ಪ್ರಪಂಚದಲ್ಲಿ ಜ್ಞಾನದಷ್ಟು ಪವಿತ್ರವಾದುದು ಬೇರೇನಿಲ್ಲ'-ಎಂಬ ಮಾತು ಜ್ಞಾನದ ಹಿರಿಮೆ-ಗರಿಮೆಗಳನ್ನು ಎತ್ತಿ ಹಿಡಿಯುತ್ತದೆ. ಇಂತಹ ಮಹತ್ವ ಪೂರ್ಣವಾದ ಜ್ಞಾನ-ಸಂಪಾದನೆಗಾಗಿಯೇ ವಿಶ್ವದಾದ್ಯಂತ ಶಾಲಾ-ಕಾಲೇಜು ಗಳೂ, ವಿಶ್ವವಿದ್ಯಾಲಯಗಳೂ ಜನಸಾಮಾನ್ಯರಿಗೆ ನೆರವಾಗುತ್ತವೆ. ಅಲ್ಲಿ ಲಕ್ಷಾಂತರ ಶಿಕ್ಷಕರೂ, ಸಹಸ್ರಾರು ಪ್ರಾಧ್ಯಾಪಕರೂ ಜ್ಞಾನ ದಾಹಿಗಳಾದ ಕೋಟಿಗಟ್ಟಲೆ ವಿದ್ಯಾರ್ಥಿಗಳಿಗೆ ಜ್ಞಾನವಿತರಣೆ ಮಾಡುತ್ತಾರೆ. ಸರ್ಕಾರದ ಪ್ರೋತ್ಸಾಹವಿದ್ದರೂ ಜ್ಞಾನವಿತರಣೆಯ ಕಾರ್ಯವು ಸಮರ್ಪಕವಾಗಿ ನಡೆಯುತ್ತಿಲ್ಲ ವೇಕೆ? ಎಂಬುದನ್ನು ನಿರೂಪಿಸುವ ಒಂದು ಮನೋಜ್ಞ ಪ್ರಸಂಗ ಇಲ್ಲಿದೆ.


ರಾಜಾ ಥೀಬಾ ಎಂಬಾತ ಅತ್ಯಂತ ಮಹಾನ್ ಜ್ಞಾನಯೋಗಿ ಎಂದು ತುಂಬಾ ಪ್ರಸಿದ್ಧನಾಗಿದ್ದ. ಆತನ ಕೀರ್ತಿಗೆ ಮರುಳಾದ ಬೌದ್ಧ ಭಿಕ್ಷುವೊಬ್ಬರು ರಾಜನ ಬಳಿ ಬಂದು ನಿವೇದಿಸಿಕೊಂಡರು. ''ಮಹಾರಾಜರೇ, ನಾನು ಅನೇಕ ವರುಷಗಳಿಂದ ಅಖಂಡ ಜಪ-ತಪ-ಧ್ಯಾನಗಳನ್ನು ಮಾಡುತ್ತಾ ಬಂದಿದ್ದೇನೆ. ಆದರೆ ಪರಿಶುದ್ಧ ಜ್ಞಾನದ ಪ್ರಾಪ್ತಿ ಈವರೆಗೆ ನನಗಾಗಿಲ್ಲ. ಆದರೆ ನೀವಾದರೋ ರಾಜ ವಂಶದಲ್ಲಿ ಜನಿಸಿ, ರಾಜ ವೈಭೋಗದ ಜೀವನವನ್ನು ನಡೆಸುತ್ತಲಿದ್ದು ಜ್ಞಾನ ಯೋಗಿ ಎಂಬ ಕೀರ್ತಿಗೆ ಭಾಜನರಾಗಿದ್ದೀರಿ! ಇದು ಹೇಗೆ ಸಾಧ್ಯವಾಯಿತು? ಇದರ ರಹಸ್ಯವೇನು? ನನಗೆ ತುಸು ಮಾರ್ಗದರ್ಶನ ನೀಡಬಲ್ಲಿರಾ?''


ಬೌದ್ಧ ಭಿಕ್ಷುವನ್ನು ಸಹಾನುಭೂತಿಯಿಂದ ಆಲಿಸಿದ ರಾಜನು ಹೇಳಿದ ''ನಿಮ್ಮ ಪ್ರಶ್ನೆಗೆ ಉತ್ತರ ಮತ್ತೆ ನಾನು ಕೊಡುತ್ತೇನೆ. ಸದ್ಯ ನೀವು ಈ ದೀಪವನ್ನು ಕೈಯಲ್ಲಿ ಹಿಡಿದುಕೊಂಡು ಅರಮನೆಯೊಳಗೆ ಹೋಗಿ, ಸಕಲ ವೈಭವದ ಅಂತಃಪುರದ ದರ್ಶನ ಮಾಡಿ ಬನ್ನಿ. ಆದರೊಂದು ಶರತ್ ಇದೆ, ಎಲ್ಲೂ ದೀಪ ಆರಿ ಹೋಗ ಬಾರದು.'' ಅಂತೆಯೇ ಹೊರಟ ಭಿಕ್ಷುವು ತುಸು ಹೊತ್ತಿನಲ್ಲೇ ಹಿಂದಿರುಗಿ ಬಂದಾಗ ರಾಜನು ಅಚ್ಚರಿಯಿಂದ ಪ್ರಶ್ನಿಸಿದ. ''ಇಷ್ಟೊಂದು ವೈಭವದ ಅರಮನೆಯ ವೀಕ್ಷಣೆ ಇಷ್ಟು ಬೇಗ ಮುಗಿಯಿತೇ? ಅಥವಾ ನಿಮಗೆ ಇಷ್ಟವಾಗಲಿಲ್ಲವೇ?''


ಉತ್ತರವಾಗಿ ಭಿಕ್ಷುವು ನುಡಿದರು ''ಮಹಾಪ್ರಭು, ನಿಮ್ಮ ಔದಾರ್ಯಕ್ಕೆ ಧನ್ಯವಾದಗಳು. ಆದರೆ ನಾನು ದೀಪ ಆರಿ ಹೋಗಬಾರದೆಂಬ ಶರತ್ತಿಗೆ ಬದ್ಧನಾಗಿದ್ದೆ. ಆದ್ದರಿಂದ ಯಾವುದರ ಸ್ವಾರಸ್ಯವನ್ನು ಅನುಭವಿಸಲು ಸಮರ್ಥನಾಗಲಿಲ್ಲ!!'' ತಕ್ಷಣವೇ ಚಪ್ಪಾಳೆ ತಟ್ಟಿದ ರಾಜ ನುಡಿದ- ''ಇಲ್ಲಿದೆ ಮುಖ್ಯ ಕೇಂದ್ರಬಿಂದು. ಜನರು ಲೌಕಿಕ ಸುಖ ಭೋಗದ ಕಡೆಗೆ ಗಮನ ಹರಿಸಿದಾಗ ಆತ್ಮಜ್ಞಾನದ ದೀಪವನ್ನು ಮರೆತು ಬಿಡುತ್ತಾರೆ. ಆತ್ಮಜ್ಞಾನದ ದೀಪವನ್ನೇ ಗಮನಿಸಿದವರಿಗೆ ಲೌಕಿಕ ಸುಖ ಭೋಗದ ಕಾಟವಿಲ್ಲ''. ಭಿಕ್ಷುವಿನ ಅಂತರಂಗದ ಕಣ್ಣುಗಳು ತೆರೆದುಕೊಂಡವು. ಇಡೀ ಪ್ರಪಂಚದ ಜನರು ಸಾಧ್ಯವಾದಷ್ಟು ಉತ್ತಮ ಸ್ತರದ ಆಧ್ಯಾತ್ಮಿಕ ಜ್ಞಾನವನ್ನು ಪಡೆಯಲು ಬಯಸುತ್ತಾರೆ. ಆದರೆ ಇಂತಹ ಜ್ಞಾನ ಪ್ರಾಪ್ತಿಗಾಗಿ ತುಸು ತ್ಯಾಗವನ್ನೂ ಮಾಡಬೇಕಾಗುತ್ತದೆ. ಲೌಕಿಕ ಸುಖ-ಭೋಗಗಳ ಪಿಪಾಸೆಯನ್ನು ತ್ಯಜಿಸಬೇಕಾಗು ತ್ತದೆ. ಇವೆರಡೂ ಜೊತೆ ಜೊತೆಯಾಗಿ ಸಾಗಿದಾಗ ಮಾನವ ಜೀವನ ಸಾರ್ಥಕವೆನಿಸುತ್ತದೆ.


ಕೃಪೆ:ಡಾ.ಡಿ.ವೀರೇಂದ್ರ ಹೆಗ್ಗಡೆ.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು