Tuesday, May 6, 2025

 ಕಥೆ-727

UPSC ಎಕ್ಸಾಂ ಫೇಲ್‌ 

ಲೈಫ್‌ನಲ್ಲಿ ಪಾಸ್..

https://basapurs.blogspot.com


ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸ್ ಆಗದೇ ಇದ್ದರೂ ಕಾಜಲ್ ಶ್ರೀವಾಸ್ತವ 'ಸ್ವದೇಶಿ ಸ್ಪೋರ್ಟ್ಸ್ ವೇರ್' ಕಂಪನಿಗಳನ್ನು ಆರಂಭಿಸಿ ಯಶಸ್ವಿಯಾದರು.


ಯುಪಿಎಸ್‌ಸಿ ಪರೀಕ್ಷೆ (UPSC Exam) ಭಾರತದಲ್ಲಿಯೇ ಅತ್ಯಂತ ಕಠಿಣವಾದ ಪರೀಕ್ಷೆಗಳಲ್ಲಿ ಒಂದು. ಪ್ರತಿವರ್ಷ ಹತ್ತು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು (Students) ಈ ಪರೀಕ್ಷೆ ಬರೆಯುತ್ತಾರೆ. ಬಹಳಷ್ಟು ಮಂದಿ ಫಲಿತಾಂಶ (Result) ಬಂದಾಗ ನಿರಾಸೆಯಾಗುತ್ತಾರೆ. ಕೆಲವರು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗದೇ ಹಿನ್ನಡೆ ಅನುಭವಿಸುತ್ತಾರೆ, ಅಲ್ಲದೆ ಬದುಕಿನಲ್ಲಿ ಮುನ್ನಡೆ ಕಾಣುವುದೇ ಇಲ್ಲ . ಆದರೆ ಕೆಲವರು ಮಾತ್ರ, ಈ ಪರೀಕ್ಷೆಯಲ್ಲಿ ಪಾಸ್ ಆಗದಿದ್ದರೂ ತಮ್ಮ ಬದುಕಿನಲ್ಲಿ ಹೊಸ ದಾರಿಯನ್ನು ಹುಡುಕಿ ದೊಡ್ಡ ಸಾಧನೆ ಮಾಡುತ್ತಾರೆ.


ಕಾಜಲ್ ಶ್ರೀವಾಸ್ತವ ಎಂಬ ಮಹಿಳೆ 6 ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದರೂ ಪಾಸ್ ಆಗಲಿಲ್ಲ. ಕೊನೆಯ ಪ್ರಯತ್ನದಲ್ಲಿ, 2020ರಲ್ಲಿ ಅವರು ವಿಫಲರಾದಾಗ ತುಂಬಾ ನೋವಾಗಿತ್ತು. ಅವರ ಕುಟುಂಬದವರು ಕೂಡ "ಅವಳು ಸಮಯ, ಹಣ ವ್ಯರ್ಥ ಮಾಡುತ್ತಿದ್ದಾಳೆ" ಎನ್ನುತ್ತಿದ್ದರು. ಆದರೂ, ಕಾಜಲ್ ಹೋರಾಟವನ್ನೇ ನಿಲ್ಲಿಸಲಿಲ್ಲ.


2017ರಲ್ಲಿ ಅವರು 1000 ವರ್ಷಗಳ ಹಿಂದೆ ಜನಿಸಿದ ಭಾರತದ ಯೋಧರ ಪ್ರಾಚೀನ ಕಲೆಯಾದ ಕಲರಿಪಯಟ್ಟು ಎಂಬ ಭಾರತೀಯ ಯುದ್ಧಕಲೆ ಕಲಿಯಲು ಆರಂಭಿಸಿದರು. ಇದರಿಂದಾಗಿ ಅವರ ಆತ್ಮವಿಶ್ವಾಸ ಹೆಚ್ಚಿತು. ನಂತರ ಅವರು ತವಾಸಿ ಎಂಬ ಆಂದೋಲನ ಆರಂಭಿಸಿದರು. ಈ ಆಂದೋಲನದ ಮೂಲಕ 2,000ಕ್ಕೂ ಹೆಚ್ಚು ಜನರಿಗೆ ಶಾರೀರಿಕ ಹಾಗೂ ಮಾನಸಿಕ ಶಕ್ತಿಯನ್ನು ನೀಡಲು ಸಹಾಯ ಮಾಡಿದರು.


ಅಲ್ಲಿಂದ ಮುಂದಾಗಿ, ಉದ್ಯಮಕ್ಕೆ ಕಾಲಿಟ್ಟರು. ನೈಸರ್ಗಿಕ ಸ್ಪೋರ್ಟ್ಸ್ ವಸ್ತ್ರಗಳನ್ನು ತಯಾರಿಸುವ 'ಸ್ವದೇಶಿ ಸ್ಪೋರ್ಟ್ಸ್ ವೇರ್' ಎಂಬ ಕಂಪನಿಯನ್ನು ಸ್ಥಾಪಿಸಿದರು. ಇದೀಗ ಅವರು

 ಯಶಸ್ವಿ ಉದ್ಯಮಿಯಾಗಿದ್ದಾರೆ...

ಕೃಪೆ :ನೆಟ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು