ಕಥೆ-768
ಪ್ರಕೃತಿಯ ಮೂರು ನಿಯಮಗಳು ಮತ್ತು ಕಟು ಸತ್ಯ
1.ಪ್ರಕೃತಿಯ ಮೊದಲ ನಿಯಮ: ಹೇಗೆ ಗದ್ದೆಯಲ್ಲಿ ಬೀಜ ಹಾಕಿಲ್ಲವೆಂದರೆ ಅಲ್ಲಿ ಹುಲ್ಲುಕಡ್ಡಿ ಬೆಳೆಯುತ್ತದೆಯೋ ತುಂಬಿಲ್ಲವೆಂದರೆ ಆಕ್ರಮಿಸಿಕೊಳ್ಳುತ್ತದೆ. ಹಾಗೆ ಬುದ್ದಿಯಲ್ಲಿ ಸಕಾರಾತ್ಮಕ ವಿಚಾರಗಳನ್ನು ತುಂಬದಿದ್ದರೆ, ಆ ಜಾಗವನ್ನು ನಕಾರಾತ್ಮಕ ವಿಚಾರಗಳು ಆಕ್ರಮಿಸುತ್ತವೆ..
2.ಪ್ರಕೃತಿಯ ಎರಡನೇ ನಿಯಮ: ಯಾರ ಬಳಿ ಏನಿರುತ್ತದೆಯೋ ಅದನ್ನೇ ಇತರರಿಗೆ ನೀಡುತ್ತಾರೆ. ಸುಖೀ ಸುಖವನ್ನು ಹಂಚುತ್ತಾನೆ. ದುಃಖೀ ದುಃಖವನ್ನು ಹಂಚುತ್ತಾನೆ. ಜ್ಞಾನಿ ಜ್ಞಾನವನ್ನು ಹಂಚುತ್ತಾನೆ. ಭ್ರಮಿತ ಭ್ರಮೆಯನ್ನು ಭಯಭೀತ ಭಯವನ್ನು ಹಂಚುತ್ತಾನೆ. ಹಂಚುತ್ತಾನೆ.
3.ಪ್ರಕೃತಿಯ ಮೂರನೇ ನಿಯಮ: ತಮಗೆ ಜೀವನದಿಂದ ಏನೆಲ್ಲಾ ಸಿಕ್ಕಿದೆಯೋ ಅದನ್ನು ಜೀರ್ಣಿಸಿಕೊಳ್ಳಲು ಕಲಿಯಿರಿ. ಏಕೆಂದರೆ ಭೋಜನ ಜೀರ್ಣವಾಗದೇ ಇದ್ದರೆ ರೋಗ ಹೆಚ್ಚುತ್ತದೆ. ಪ್ರಶಂಸೆ ಜೀರ್ಣವಾಗದ್ದಿದ್ದರೆ ಅಹಂಕಾರ ಹೆಚ್ಚುತ್ತದೆ. ನಿಂದನೆ ಜೀರ್ಣವಾಗದ್ದಿದ್ದರೆ ಶತ್ರುತ್ವ ಹೆಚ್ಚುತ್ತದೆ. ದು:ಖ ಜೀರ್ಣವಾಗದ್ದಿದ್ದರೆ ನಿರಾಸೆ ಹೆಚ್ಚುತ್ತದೆ.
ಕೃಪೆ:ನೆಟ್
No comments:
Post a Comment