Tuesday, June 24, 2025

 ಕಥೆ-767

ಯಾರನ್ನೋ ಅನುಕರಣೆ ಮಾಡುತ್ತ ಅಲ್ಲೇ ಕೂಡಬೇಡಿ.


ಪ್ರತಿಯೊಬ್ಬರಿಗೂ ತಮ್ಮ ರೋಲ್ ಮಾಡಲ್‌ಗಳ ತರಹ ಬದುಕಬೇಕು, ಅವರ ತರಹವೇ ಏನಾದರೂ ಸಾಧನೆ ಮಾಡಬೇಕು ಎಂಬ ಆಸೆ ಇರುತ್ತದೆ. ಆದರೆ, ಎಲ್ಲೋ ಒಬ್ಬಿಬ್ಬರು ಸಾಧ್ಯವಾಗಬಹುದು ಆದರೆ ಬಹಳಷ್ಟು ಜನರಿಗೆ ಇದು ಸಾಧ್ಯವಾಗುವುದಿಲ್ಲ. ಅದಕ್ಕೆ ಕಾರಣ, ಅವರು ತಮ್ಮ ರೋಲ್ ಮಾಡಲ್‌ಗಳನ್ನು ಅನುಸರಿಸುತ್ತಾರೆ, ಅನುಕರಿಸುತ್ತಿರುತ್ತಾರೆ. ಗಮನವೆಲ್ಲವೂ ಅನುಕರಣೆ ಮಾಡುವುದರಲ್ಲೇ ಮತ್ತು ಅನುಸರಿಸುವುದರಲ್ಲಿ ಇರುವಾಗ, ಹೆಚ್ಚಿನದ್ದೇನೂ ಸಾಧಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಅವರಿಂದ ಸ್ಫೂರ್ತಿ ಪಡೆಯಿರಿ. ಅದನ್ನು ನಿಮ್ಮ ಜೀವನದಲ್ಲಿ ಪಡೆಯಲು ಮುಂದಾಗಿರಿ. ಹಾಗಂತ ಅವರನ್ನೇ ಅನುಸರಿಸುವುದು ತಪ್ಪು. ಏಕೆಂದರೆ, ಅವರ ಜೀವನ ಬೇರೆ, ನಿಮ್ಮ ಜೀವನ ಬೇರೆ. ಅವರ ಜೀವನದಲ್ಲಾಗಿದ್ದು, ಅವರು ತೆಗೆದುಕೊಂಡ ನಿರ್ಧಾರಗಳು, ಇವೆಲ್ಲವೂ ನಿಮ್ಮ ಜೀವನದಲ್ಲೂ ಮುಂದುವರೆಯುತ್ತದೆ ಎಂದು ಹೇಳುವುದು ಕಷ್ಟ. ಪ್ರತಿಯೊಬ್ಬರಲ್ಲೂ Unique ಐಡೆಂಟಿಟಿ ಇದ್ದೇ ಇರುತ್ತದೆ, ಅದನ್ನು ಗುರುತಿಸಿ ಪೋಷಿಸುವ ಕೆಲಸವಾದರೆ ಮುಂದೆ ಬರಲು ಸಾಧ್ಯ. ಇಂಥಹ ಸಂದರ್ಭದಲ್ಲಿ ಅನೇಕ ಕಷ್ಟಗಳು ಬರುತ್ತವೆ, ಸಾಧಕರು ಕಷ್ಟಗಳು ಎದುರಾದಾಗ ಹೇಗೆ ನಿಂತು ಸಾಧನೆ ಮಾಡಿದರು ಎಂದು ಕಲಿಯಲು ಅಡ್ಡಿ ಇಲ್ಲ. ಇದನ್ನೆಲ್ಲ ನಾವು ಆರಾಧಿಸುವವರಿಂದ ಮಾತ್ರ ಕಲಿಯಬೇಕು ಅಂತಿಲ್ಲ. ವ್ಯಕ್ತಿ ಆರಾಧನೆಗಿಂತ ವ್ಯಕ್ತಿತ್ವ ಆರಾಧನೆ ಮುಖ್ಯವಾಗುತ್ತದೆ. ಹುಚ್ಚು ಅಭಿಮಾನ ಒಳ್ಳೆಯದಲ್ಲ. ಆ ವಿಷಯದಲ್ಲಿ ರೋಲ್ ಮಾಡಲ್‌ಗಳು ಮಾತ್ರವಲ್ಲ. ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಂದಲೂ ಏನಾದರೊಂದು ಕಲಿಯುವುದು ಇದ್ದೇ ಇರುತ್ತದೆ. ಎಲ್ಲರಿಂದ ಕಲಿಯಿರಿ. ಆದರೆ, ಯಾರನ್ನೋ ಅನುಕರಣೆ ಮಾಡುತ್ತ ಅಲ್ಲೇ ಕೂಡಬೇಡಿ.


ಕೃಪೆ : ನೆಟ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು