ಕಥೆ-750
ಪ್ರತಿಯೊಬ್ಬರಿಗೂ ಒಂದು ಶಕ್ತಿ ಇದೆ..
ನಾನು ವಿದ್ಯಾರ್ಥಿಯಾಗಿದ್ದಾಗ ಕೆಲವು ವಿಷಯಗಳಲ್ಲಿ ಫೇಲ್ ಆಗಿದ್ದೆ. ಆದರೆ, ನನ್ನ ಸ್ನೇಹಿತ ಎಲ್ಲದರಲ್ಲೂ ಉತ್ತೀರ್ಣನಾದ. ಅವನು ಈಗ ಮೈಕ್ರೋಸಾಫ್ಟ್ ನಲ್ಲಿ ದೊಡ್ಡ ಇಂಜಿನಿಯರ್ ಆಗಿದ್ದಾನೆ. ಆದರೆ, ನಾನು ಅವನು ಕೆಲಸ ಮಾಡುವ ಸಂಸ್ಥೆಯ ಮಾಲೀಕ. ಈ ಮಾತು ಯಾಕೆ ಹೇಳುತ್ತಿದ್ದೀನಿ ಎಂದರೆ, ನಮಗೆಲ್ಲರಿಗೂ ಬೇರೆಯವರೊಂದಿಗೆ ಹೋಲಿಸಿಕೊಳ್ಳುವ ಕೆಟ್ಟ ಗುಣವಿರುತ್ತದೆ. ಒಂದು ಪಕ್ಷ ನಾನು ಫೇಲ್ ಆದ ಸಂದರ್ಭದಲ್ಲಿ ಅವನ ಜತೆಗೆ ಹೋಲಿಸಿಕೊಂಡಿದ್ದರೆ, ಅವನು ನನಗಿಂತ ಉತ್ತಮ ಅಂದುಕೊಂಡಿದ್ದರೆ, ಅವನ ಜತೆಗೆ ಹೋರಾಡುವುದು ಸಾಧ್ಯವಿಲ್ಲ ಎಂದು ಅಂಜಿಕೊಂಡು ಸುಮ್ಮನಾಗಿಬಿಟ್ಟಿದ್ದರೆ ಅಥವಾ ನಾನು ಸೋತೆ ಎಂಬ ಬೇಸರದಲ್ಲಿ ಹೊಸದೇನನ್ನೋ ಪ್ರಯತ್ನಿಸುವುದಕ್ಕೆ ಹಿಂಜರಿದಿದ್ದರೆ... ನಾನು ಈ ಹಂತಕ್ಕೆ ಬರುವುದಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ. ಕೆಲವರು ಎಕ್ಸಾಮ್‌ನಲ್ಲಿ ಫೇಲಾದರೆ ಅವರು ಬದುಕಿನಲ್ಲಿ ಏನೂ ಸಾಧಿಸುವುದಿಲ್ಲ ಎಂದರ್ಥವಲ್ಲ. ಅದೇ ರೀತಿ, ಪರೀಕ್ಷೆಗಳಲ್ಲಿ ಮೊದಲ ರ‍್ಯಾಂಕ್ ಪಡೆದವರೆಲ್ಲ ಏನೋ ಆಗಿಬಿಡುತ್ತಾರೆ ಎಂದು ಹೇಳುವುದು ಕಷ್ಟ. ಹಾಗಾಗಿ, ಯಾರೂ ಯಾರ ಜತೆಗೂ ಹೋಲಿಸಿಕೊಳ್ಳಬೇಡಿ. ಹಾಗೆ ಹೋಲಿಸಿಕೊಂಡರೆ ಅದು ನಿಮಗೇ ನೀವು ಅವಮಾನಿಸಿಕೊಂಡಂತೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಶಕ್ತಿ ಇರುತ್ತದೆ ಮತ್ತು ಆ ಶಕ್ತಿಯನ್ನು ಅರಿತುಕೊಂಡು ಮುನ್ನಡೆಯಬೇಕು. ಬೇರೆಯವರಿಂದ ಸ್ಫೂರ್ತಿ ಪಡೆಯುವುದು ತಪ್ಪಲ್ಲ. ಆದರೆ, ಅವರ ಜತೆಗೆ ಹೋಲಿಸಿಕೊಳ್ಳುವುದು, ಅನುಕರಣೆ ಮಾಡುವುದು ತಪ್ಪು. ಪ್ರತಿಯೊಬ್ಬರಿಗೂ ಅವರದ್ದೆಯಾದ ಶಕ್ತಿ ಇದೆ, ಅದು ಯಾವ ರಂಗದಲ್ಲಿದೆ ಎಂಬುದನ್ನು ಗುರುತಿಸಿಕೊಳ್ಳುವುದು ಮುಖ್ಯವಾಗುತ್ತದೆ..
-ಬಿಲ್ ಗೇಟ್ಸ್
No comments:
Post a Comment