ಕಥೆ-751
ದುಡಿಮೆಯ ಬೆಲೆ
ಒಂದು ಊರಿನಲ್ಲಿ ಒಬ್ಬ ನೇಕಾರನಿದ್ದ. ಶಾಂತ ಸ್ವಭಾವದ ಮನುಷ್ಯ, ನಿಗರ್ವಿ, ತುಂಬ ಪ್ರಾಮಾಣಿಕ. ಆತ ಸಿಟ್ಟಾಗಿದ್ದನ್ನು ಆ ಊರಿನಲ್ಲಿ ಯಾರೂ ನೋಡೇ ಇರಲಿಲ್ಲ.ಆ ಊರಿನ ಕೆಲ ಯುವಕರಿಗೆ ಒಂದು ತರಲೆ ಹೊಳೆಯಿತು. ನೇಕಾರನಿಗೆ ಸಿಟ್ಟು ಬರಿಸಬೇಕು ಎಂದು ಅವರು ಮಾತಾಡಿಕೊಂಡರು. ಒಂದು ದಿನ ಯುವಕರ ಗುಂಪು ನೇಕಾರನ ಅಂಗಡಿಗೆ ಆಗಮಿಸಿತು. ಆ ಯುವಕರ ನಾಯಕ ಶ್ರೀಮಂತ ವ್ಯಾಪಾರಿಯೊಬ್ಬನ ಮಗನಾಗಿದ್ದ. ಅವನು ನೇಕಾರನ ಅಂಗಡಿಯಲ್ಲಿ ಒಂದು ಬೆಲೆ ಬಾಳುವ ಸೀರೆಯನ್ನು ಆಯ್ಕೆ ಮಾಡಿ ಅದರ ಬೆಲೆ ವಿಚಾರಿಸಿದ. ನೇಕಾರ ಆ ಸೀರೆಗೆ 10 ನಾಣ್ಯಗಳ ಬೆಲೆ ಕಟ್ಟಿದ. ನೇಕಾರನನ್ನು ಛೇಡಿಸುವ ಉದ್ದೇಶದಿಂದ ಆ ಶ್ರೀಮಂತ ಯುವಕ, ನನಗೆ ಪೂರ್ಣ ಸೀರೆ ಬೇಡ, ಅರ್ಧ ಸಾಕು ಎನ್ನುತ್ತ ಸೀರೆಯನ್ನು ಹರಿದು ಎರಡು ಭಾಗ ಮಾಡಿ, ಒಂದು ಭಾಗದ ಬೆಲೆ ವಿಚಾರಿಸಿದ. ನೇಕಾರ ಶಾಂತ ಚಿತ್ತದಿಂದ ಆ ಅರ್ಧ ಸೀರೆಯ ಬೆಲೆ 5 ನಾಣ್ಯಗಳು ಎಂದು ಉತ್ತರಿಸಿದ. ಯುವಕ ಮತ್ತೆ ಆ ಸೀರೆಯನ್ನು ಎರಡು ಭಾಗ ಮಾಡಿ, ಒಂದು ಭಾಗ ಸಾಕು ಅದರ ಬೆಲೆ ಹೇಳು ಎಂದು ನೇಕಾರನನ್ನು ಕೆಣಕಿದ. ನೇಕಾರ ಕೊಂಚವೂ ವಿಚಲಿತನಾಗದೇ ಸೀರೆಯ ಬೆಲೆ ಎರಡು ನಾಣ್ಯಗಳು ಎಂದು ಉತ್ತರಿಸಿದ. ಹೀಗೇ ಆ ಯುವಕ ಸೀರೆಯನ್ನು ತುಂಡು ಮಾಡುತ್ತಲೇ ಹೋದ. ಕೊನೆಗೆ “ ಈ ಸೀರೆ ನನಗೀಗ ಯಾವ ಉಪಯೋಗಕ್ಕೂ ಬಾರದು" ಎಂದು ಕೈಚೆಲ್ಲಿದ. ಆಗ ನೇಕಾರ " ಹುಡುಗಾ ಈಗ ಈ ಸೀರೆ ನಿನಗಷ್ಟೇ ಅಲ್ಲ ಯಾರ ಉಪಯೋಗಕ್ಕೂ ಬಾರದು" ಎಂದು ಶಾಂತಚಿತ್ತದಿಂದ ಮಾತನಾಡಿದ. ಇಷ್ಟಾದರೂ ನೇಕಾರ ಸಿಟ್ಟಿಗೇಳದ್ದನ್ನು ಕಂಡು ಆ ಯುವಕನಿಗೆ ನಾಚಿಕೆಯಾಯಿತು. "ಕ್ಷಮಿಸಿ, ನನ್ನಿಂದಾಗಿ ನಿಮಗೆ ನಷ್ಟವಾಯಿತು, ದಯವಿಟ್ಟು ಸೀರೆಯ ಪೂರ್ತಿ ಬೆಲೆಯನ್ನು ನನ್ನಿಂದ ಸ್ವೀಕರಿಸಿ” ಎಂದು ಮನವಿ ಮಾಡಿಕೊಂಡ. ನೀನು ನನ್ನಿಂದ ಸೀರೆ, ಕೊಂಡಿಲ್ಲ, ಆದ್ದರಿಂದ ನಿನ್ನಿಂದ ನಾನು ಹಣ ಪಡೆಯಲಾರೆ ಎಂದು ನೇಕಾರ ಹಣ ಸ್ವೀಕರಿಸಲು ನಿರಾಕರಿಸಿದ. ನೇಕಾರನ ಈ ಮಾತು ಕೇಳುತ್ತಲೆ ಆ ಯುವಕನ
ಅಹಂಗೆ ಪೆಟ್ಟು ಬಿದ್ದಿತು.
ಕೃಪೆ :ಬದುಕಲು ಕಲಿಯಿರಿ
No comments:
Post a Comment