ಕಥೆ-755
ದುಡ್ಡೆ ಎಲ್ಲವೂ ಅಲ್ಲ..!
https://basapurs.blogspot.com
ನಾನೊಂದು ಭ್ರಮೆಯಲ್ಲಿದ್ದೆ. ದುಡ್ಡೊಂದಿದ್ದರೆ ಸಂತೋಷವಾಗಿರಬಹುದು ಎಂದು ನಾನು ನಂಬಿದ್ದೆ. ಅದಕ್ಕೆ ಸರಿಯಾಗಿ ಮನಿ ಕ್ಯಾನ್ ಬಯ್ ಹ್ಯಾಪಿನೆಸ್ ” ಎಂಬ ಮಾತು ಕೇಳಿ ಮೊದಲು ಒಂದಿಷ್ಟು ದುಡ್ಡು ಮಾಡಿಬಿಡಬೇಕು. ಆನಂತರ ಸಂತೋಷವಾಗಿರಬಹುದು ಎಂದು ಕೊಂಡಿದ್ದೆ. ಆದರೆ, ಅದು ಸುಳ್ಳು ಎಂಬ ಅರಿವಾಯಿತು. ದುಡ್ಡಿದ್ದರೆ ಒಂದಿಷ್ಟು ತಲೆಬಿಸಿಗಳಿರುವುದಿಲ್ಲ ಎನ್ನುವುದು ಎಂಬುದು ದೊಡ್ಡ ತಪ್ಪು, ಅಗತ್ಯಕ್ಕಿಂತ ಹೆಚ್ಚಾಗಿ ದುಡ್ಡು ಇದ್ದರೆ, ನಾವು ಸೋಮಾರಿಗಳಾಗಿ ಬಿಡುತ್ತೇವೆ. ಜೀವನದಲ್ಲಿ ಯಾವುದೇ ವಿಷಯಕ್ಕೂ ಕಷ್ಟಪಡುವುದಕ್ಕೆ ಹೋಗುವುದಿಲ್ಲ, ಕ್ರಿಯಾಶೀಲರಾಗಿ ಬದುಕುವುದಿಲ್ಲ. ಸೃಜನಾತ್ಮಕವಾಗಿ ಯೋಚಿಸುವುದಿಲ್ಲ. ಒಂದು ಹಂತದಲ್ಲಿ ನಮಗೆ ಸಂಸ್ಥೆಯನ್ನು ಮಾರುವ ಒಂದು ದೊಡ್ಡ ಆಫರ್ ಬಂದಿತ್ತು. ಅದನ್ನು ಒಪ್ಪಿಕೊಂಡಿದ್ದರೆ ನಾವು ಇಷ್ಟರಲ್ಲಿ ಕೋಟ್ಯಧೀಶರಾಗಿ ಬಿಡುತ್ತಿದ್ದೆವು. ಕೆಲಸ ಬಿಟ್ಟು ಸಮುದ್ರಣದಡದಲ್ಲಿ ಒಂದು ದೊಡ್ಡ ಮನೆ ಮಾಡಿಕೊಂಡು ನೆಮ್ಮದಿಯಾಗಿ ಇದ್ದು ಬಿಡುತ್ತಿದ್ದೆವು.. ಜೀವನ ಎಂದರೆ ಅಷ್ಟೇನಾ? ಖಂಡಿತಾ ಇಲ್ಲ. ಅದರಾಚೆಗೂ ಇದೆ. ಅದೇ ಕಾರಣಕ್ಕಾಗಿ ನಾವು ಅಷ್ಟು ದೊಡ್ಡ ಆಫರ್ ನಿರಾಕರಿಸಿಬಿಟ್ಟೆವು. ಒಂದು ಪಕ್ಷ ಒಪ್ಪಿದ್ದರೆ, ಆ ನಂತರ ನಿಂತ ನೀರಾಗುತ್ತಿದ್ದೆವು ನಿರಾಕರಿಸಿದ್ದರಿಂದಲೇ ಈಗಲೂ ಹೊಸದೇನೋ ಯೋಚನೆ ಮಾಡುವ ಮತ್ತು ಅದನ್ನು ಕಾರ್ಯರೂಪಕ್ಕೆ ತರುವ ಶಕ್ತಿ ಇದೆ. ದುಡ್ಡು ಬೇಕು, ಆದರೆ ದುಡ್ಡೇ ಎಲ್ಲ ಅಲ್ಲ ಎಂಬುದು ಗೊತ್ತಿರಬೇಕು...
-ಲ್ಯಾರಿ ಪೇಜ್ ಸಹಸಂಸ್ಥಾಪಕ
No comments:
Post a Comment