ಕಥೆ-760
ಕೈ ತೊಳೆದುಕೊಂಡುಬಿಡಿ
ಆ ಕ್ಷಣದಲ್ಲಿ ನೀವು ನಿರ್ಧಾರ ಮಾಡಿ ಬಿಡಬೇಕು
ಇಲ್ಲದಿದ್ದರೆ ಮೆತ್ತಿಕೊಂಡಿರುವ ಕೆಸರು ಒಣಗಿ ಬಿಡುತ್ತದೆ ತಡ ಮಾಡಿದಷ್ಟೂ ಒಣಗುವ ಪ್ರಮಾಣ ಹೆಚ್ಚು. ಕೊನೆಕೊನೆಗೆ ಮೇಲ್ನೋಟಕ್ಕೆ ಕೆಸರನ್ನು ತೊಳಕೊಂಡಂತೆ ಕಂಡರೂ
ಕಲೆ ಹಾಗೆಯೇ ಉಳಿಯುವ ಅಪಾಯಗಳೂ ಇಲ್ಲದಿಲ್ಲ. ಹಾಗೆ ಕೆಸರು, ಕಲೆಗಳನ್ನು
ಮಾಡಿಕೊಳ್ಳುವುದರಿಂದಲಾದರೂ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು ಎಂದಾದರೆ, ಆಗ ಒಪ್ಪಿಕೊಳ್ಳಬಹುದು. ಅದಿಲ್ಲದೆ, ಅತ್ತ ಕೈ ಶುಭ್ರವಾಗಿಯೂ ಉಳಿಯದೇ, ನಿರೀಕ್ಷಿತ ಫಲವನ್ನೂ ಉಣ್ಣಲಾಗದ ಸನ್ನಿವೇಶದಲ್ಲಿ ಇನ್ನೊಂದು ಸ್ವಲ್ಪ ಕಾದು ನೋಡೋಣ, ಏನಾದರೂ ಪ್ರಯೋಜನವಾದೀತು ಎನ್ನುವುದರಲ್ಲಿ ಅರ್ಥವೇ ಇಲ್ಲ. ಹೌದು ಜೀವನದಲ್ಲಿ ಕೆಲವೊಂದು ನಿಷ್ಟುರ ನಿರ್ಧಾರಗಳನ್ನು ಆ ಕ್ಷಣದಲ್ಲಿಯೇ ತೆಗೆದುಕೊಂಡುಬಿಡಬೇಕು. ಹಾಗೆ ನಿರ್ಧರಿಸುವುದು ಹೇಳಿದಷ್ಟು ಸುಲಭವಲ್ಲ. ಅದರಲ್ಲೂ ಭಾವನಾತ್ಮ ಸಂಗತಿಗಳಾಗಿದ್ದರೆ, ಸಂಬಂಧದ ಛರವಾಗಿದ್ದರೆ ಅದು ತೀರ ಕಷ್ಟ. ಅಲ್ಲಿ ವ್ಯಾವಹಾರಿಕವಾಗಿ, ಲಾಭ ನಷ್ಟಗಳ ಲೆಕ್ಕಾಚಾರದಲ್ಲಿ ಸಂಬಂಧಗಳನ್ನು ಯೋಚಿಸಲಾಗುವುದಿಲ್ಲ. ತೀವ್ರ ತೋಳಲಾಟಕ್ಕೆ ಬೀಳುವುದೇ ಹೀಗಾಗಿ, ನಾನೇ ಸೋಲೊಪಿಕೊಂಡರೂ ತೊಂದರೆ ಇಲ್ಲ, ನನಗೆ ಅವಮಾನವಾದರೂ ಅಡ್ಡಿಯಿಲ್ಲ, ನಷ್ಟವನ್ನು ನಾನೇ ಅನುಭವಿಸುತ್ತೇನೆ... ಒಟ್ಟಾರೆ
ಏನಾದರೂ ಮಾಡಿ ಸಂಬಂಧವನ್ನು ಉಳಿಸಿಕೊಳ್ಳೋಣ ಎಂದು ಯೋಚಿಸುವುದೇ
ಹೆಚ್ಚು. ಆದರೆ ಇದರಿಂದ ಜೀವನದಲ್ಲಿ ಗಳಿಸುವುದು ಏನೇನೂ ಇಲ್ಲ. ಕೊನೆ ಪಕ್ಷ
ಅಂಥ ಸಂಬಂಧಗಳು ಉಳಿಯುವುದೂ ಇಲ್ಲ. ಬದಲಾಗಿ ಮೆಲಿಂದ ಮೇಲೆ
ಸಂದಿಗ್ಧಗಳು ನಿಮ್ಮನ್ನು ಕಾಡುತ್ತಲೇ ಹೋಗುತ್ತದೆ. ಒಮ್ಮೆ ಏನೋ ಸುಧಾರಣೆ
ಆಗಿದ್ದಂತೆ ತೋರಿದರೂ ಅದು ಎಂದಿಗೂ ಶಾಶ್ವತವಾಗುವುದಕ್ಕೆ ಸಾಧ್ಯವೇ ಇಲ್ಲ. ಈ ಹಂತದಲ್ಲಿ ನೀವು ಸಾಕಷ್ಟು ಪ್ರಯತ್ನಗಳನ್ನೂ ಮಾಡಿರುತ್ತೀರಿ.
ನಿಮಗರಿವಿಲ್ಲದಂತೆಯೇ ನೀವು ಸಾಕಷ್ಟು ಕಳೆದುಕೊಂಡೂ ಇರುತ್ತೀರಿ. ಅದು ಹಣ,ಶ್ರಮ, ಸಮಯ, ನೆಮ್ಮದಿ ಯಾವುದೇ ಸ್ವರೂಪದಲ್ಲಿರಬಹುದು ನಷ್ಟ ನಿಮಗಾಗಿಯೇ ಆಗಿರುತ್ತದೆ. ನಿಮ್ಮ ಉದ್ದೇಶವೂ ಒಳ್ಳೆಯದೇ ಆಗಿರುತ್ತದೆ. ಇಷ್ಟಾದ ನಂತರವೂ ನಿರೀಕ್ಷಿತ ಫಲಿತಾಂಶದ ಸೂಚನೆ ಸಿಕ್ಕಿಲ್ಲವೆಂದಾದಲ್ಲಿ ಮತ್ತೆ ತಡ ಮಾಡುವುದರಲ್ಲಿ ಅರ್ಥವೇ ಇಲ್ಲ. ತಕ್ಷಣ ಅದನ್ನು ಅಲ್ಲಿಗೇ ತುಂಡರಿಸಿಬಿಡಿ. ಇನ್ನೆಂದಿಗೂ ಆ
ಬಗ್ಗೆ ಯೋಚಿಸಲೇ ಹೋಗಬೇಡಿ. ಆ ಬಗ್ಗೆ ಪುಟ್ಟದೊಂದು ವಿಷಾದ, ಬೇಸರ, ನೋವು, ನರಳಿಕೆ, ಕನವರಿಕೆ, ಅಲವತ್ತುಕೊಳ್ಳುವ ಯಾವ ಅಗತ್ಯವೂ ಇಲ್ಲ. ಹೊಸ ಉತ್ಸಾಹ, ಅದೇ ಛಲ, ಉನ್ನತ ನಿರೀಕ್ಷೆ, ಅತುಲ ಪ್ರೀತಿ, ದೃಢ ನಿರ್ಧಾರ, ಅಗತ್ಯ ಪ್ರಾಮಾಣಿಕತೆ, ಒಂದಷ್ಟು ಬದ್ಧತೆಗಳನ್ನು ಒಗ್ಗೂಡಿ ಒಗ್ಗೂಡಿಸಿಕೊಂಡು ಹೊರಟರೆ ನೀವೇನನ್ನೂ ಬೇಕಿದ್ದರೂ ಸಾಧಿಸಬಹುದು. . ತಕ್ಷಣ ನಿಮ್ಮ ದಿಕ್ಕು ಬದಲಿಸುತ್ತೀರಲ್ಲಾ?
No comments:
Post a Comment