Monday, June 23, 2025

 ಕಥೆ-765

ಸೋತರೂ ಪ್ರಯತ್ನಿಸುವುದನ್ನು ನಿಲ್ಲಿಸಬಾರದು

https://basapurs.blogspot.com


ನಾವು ಒಂದು ಪಂದ್ಯ ಆಡುವಾಗ, ಅದೆಷ್ಟೇ ಶಕ್ತಿ ಮೀರಿ ಪ್ರಯತ್ನಿಸಿದರೂ ಒಮ್ಮೊಮ್ಮೆ ಸೋಲಬೇಕಾಗುತ್ತದೆ. ಕೆಲವೊಮ್ಮೆ ಸಾಕಷ್ಟು ಅವಮಾನಗಳನ್ನೂ ಸಹಿಸಬೇಕಾಗುತ್ತದೆ. ಮುಂದಿನ ಪಂದ್ಯದಲ್ಲಿ ನಾವು ನಮಗಾದ ಸೋಲು ಅಥವಾ ಅವಮಾನದ ಪ್ರತೀಕಾರಕ್ಕಾಗಿ ಆಡುತ್ತೇವೆ. ಹೇಗಾದರೂ ಸರಿ, ಕಳೆದ ಪಂದ್ಯದಲ್ಲಿ ಆಗಿದ್ದನ್ನು ಮರೆಯುವುದಕ್ಕೆ ಹೋರಾಡುತ್ತೇವೆ. ಆ ಹೋರಾಟದಲ್ಲಿ ಇನ್ನಷ್ಟು ಸಮಸ್ಯೆಗಳಾಗುವ ಸಾಧ್ಯತೆ ಇದೆ. ಹಾಗಾಗಿ, ಇಲ್ಲಿ ಪ್ರತೀಕಾರ ಎನ್ನುವ ಪದವೇ ಬರಬಾರದು. ನಾವು ಗೌರವ ಮತ್ತು ಘನತೆಯನ್ನು ಎತ್ತಿಹಿಡಿಯುವುದಕ್ಕೆ ಅಥವಾ ಕಾಪಾಡುವುದಕ್ಕೆ ಆಡಬೇಕೇ ಹೊರತು, ಯಾರದ್ದೋ ಮೇಲಿನ ಸೇಡಿಗಾಗಿ ಆಟ ಆಡುವುದಕ್ಕೆ ಹೋಗಬಾರದು. ಇದು ಬರೀ ಪಂದ್ಯದಲ್ಲಿ ಮಾತ್ರವಲ್ಲ, ಜೀವನದಲ್ಲೂ ಬಹಳ ಮುಖ್ಯ. ನಾವು ಯಾವತ್ತೂ ನಮ್ಮ ಗೌರವ ಮತ್ತು ಘನತೆಗಳನ್ನು ಎತ್ತಿ ಹಿಡಿಯುವಂತಹ ಕೆಲಸಗಳನ್ನು ಮಾಡಬೇಕೇ ಹೊರತು, ಅದನ್ನು ಕಳೆದುಕೊಳ್ಳುವ ನಿಟ್ಟಿನಲ್ಲಿ ಯಾವುದೇ ಕೆಲಸವನ್ನೂ ಮಾಡಬಾರದು. ಒಂದು ಪಕ್ಷ ನಾವು ಒಂದು ಪಂದ್ಯದಲ್ಲಿ ಸೋಲಬಹುದು. ಮುಂದಿನ ಪಂದ್ಯದಲ್ಲಿ ಹೇಗೆ ಗೆಲ್ಲಬೇಕು ಎಂಬುದನ್ನು ಯೋಚಿಸಬೇಕು. ಆ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು. ನಾನು ಆಡುವಾಗ ಕೆಲವು ಪಂದ್ಯಗಳಲ್ಲಿ ‌ ಸೋತಿರಬಹುದು. ಹಾಗಂತ 'ಯಾವತ್ತೂ ಪ್ರಯತ್ನಿಸುವುದನ್ನು ನಾನು ನಿಲ್ಲಿಸಿಲ್ಲ. ಪ್ರಯತ್ನ ಮಾಡುತ್ತಲೇ ಇದ್ದೆ ಮತ್ತು ಅದೇ ಪ್ರಯತ್ನಗಳೇ ನನ್ನನ್ನು ಗೆಲ್ಲಿಸಿವೆ ಎಂದರೆ ತಪ್ಪಿಲ್ಲ.


ರಾಹುಲ್ ದ್ರಾವಿಡ್ 

ಖ್ಯಾತ ಕ್ರಿಕೆಟಿಗ



No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು