Tuesday, July 1, 2025

 ಕಥೆ-774     

   

  ನಮ್ಮನ್ನು ನಾವು ಅರಿಯುವುದೆಂದು? (ಆನೆಯ ಸರಪಳಿ)


ಕೆಲವೊಮ್ಮೆ ಜೀವನದಲ್ಲಿ ಏಕತಾನತೆ ತುಂಬಿರುತ್ತದೆ. ಅಂತಹ ಸಮಯದಲ್ಲಿ ಮತ್ತೆ ಹುರುಪಿನಿಂದ ಮುನ್ನುಗ್ಗಲು, ಹೊಸ ಹೊಸ ಸಾಧನೆ ಮಾಡಲು ಸ್ಪೂರ್ತಿ ಬೇಕಾಗುತ್ತೆ. ಮುದುಡಿದ ಮನಸ್ಸನ್ನ ಮುದಗೊಳಿಸಿ, ಹೊಸ ಚೇತನ ಮೂಡಿಸಲು ಅನುಕೂಲಕರ..


 ಒಬ್ಬ ವ್ಯಕ್ತಿ. ಹೀಗೇ ಆನೆಯ ಹಿಂಡಿನತ್ತ ಹಾದು ಹೋಗುವಾಗ, ಅವನಿಗೆ ಆಶ್ಚರ್ಯವಾಗುತ್ತೆ. ಇಷ್ಟೊಂದು ಬೃಹತ್ ಗಾತ್ರದ ಆನೆಯನ್ನು ಒಂದು ಚಿಕ್ಕ ಸರಪಳಿ ಹಿಡಿದು ಇಟ್ಟಿದ್ಯಲ್ಲ. ಅದೂ ಒಂದೇ ಒಂದು ಕಾಲಿಗೆ ಕಟ್ಟಿದ್ದ ಚಿಕ್ಕ ಕಬ್ಬಿಣದ ಸರಪಳಿ ಅದು. ಆನೆಯ ಗಾತ್ರಕ್ಕೆ ಈ ಸರಪಳಿ ತುಂಬಾ ಚಿಕ್ಕದು. ಅದು ಮನಸ್ಸು ಮಾಡಿದರೆ, ಅದರ ಶಕ್ತಿಗೆ, ಆ ಸರಪಳಿಯಿಂದ ತನ್ನನ್ನ ತಾನು ಬಿಡಿಸಿಕೊಂಡು ಬರೋ ತಾಕತ್ತಿತ್ತು. ಅದು ಹಾಗೆ ಮಾಡದೇ, ಸರಪಳಿ ಕಟ್ಟಿದ ಜಾಗದಲ್ಲೇ ಇರ್ತಿತ್ತು. ಈ ವ್ಯಕ್ತಿಗೆ ಆಶ್ಚರ್ಯ, ಆನೆಯ ಈ ಸ್ವಭಾವದಿಂದ, ಇದು ಹೇಗೆ ಸಾಧ್ಯ! ಮತ್ತೆ ಆನೆಗಳು ಯಾಕೆ ಈ ಸರಪಳಿಯನ್ನ ಬಿಡಿಸಿಕೊಳ್ಳೋ ಪ್ರಯತ್ನ ಮಾಡ್ತಿಲ್ಲ ಅಂತ. ಅಲ್ಲೇ ಇದ್ದ ಮಾವುತನನ್ನು ಕೇಳೀದಾಗ ಆತ ಹೇಳ್ತಾನೆ, ‘ಈ ಆನೆಗಳಿಗೆ ಚಿಕ್ಕ ವಯಸ್ಸಿನಲ್ಲೇ ನಾವು ಈ ಸರಪಳಿಯನ್ನ ಕಟ್ಟಿರ್ತೀವಿ. ಆಗ ಅದರ ವಯಸ್ಸು, ಆಕಾರ, ಶಕ್ತಿಗೆ, ಈ ಸರಪಳಿಯಿಂದ ಬಿಡಿಸಿಕೊಳ್ಳೋದು ಅಸಾಧ್ಯವಾಗುತ್ತೆ. ಪ್ರಯತ್ನ ಸುಮ್ಮನಾಗಿರುತ್ತೆ. ದೊಡ್ಡದಾಗ್ತಾ ಆಗ್ತಾ, ಅವುಗಳು ಇದನ್ನೇ ನಂಬಿರುತ್ವೆ. ಓ, ಈ ಸರಪಳಿಯಿಂದ ನನ್ನನ್ನು ನಾನು ಬಿಡಿಸಿಕೊಳ್ಳಲು ಸಾಧ್ಯವೇ ಇಲ್ಲ ಅಂತ. ಈ ನಂಬಿಕೆಯಿಂದಲೇ ಅವುಗಳು ಎಷ್ಟೇ ದೊಡ್ಡದಾದರೂ, ಈ ಸರಪಳಿಯನ್ನ ಬಿಡಿಸಿಕೊಳ್ಳೋದಕ್ಕೆ ನನಗಾಗಲ್ಲ ಅಂತಲೇ ನಂಬಿರುತ್ತವೆ.’


ಇದು ಮನುಷ್ಯರ ವಿಷಯದಲ್ಲೂ ನಿಜ ಅನ್ನೋದನ್ನ ಅರ್ಥ ಮಾಡ್ಕೋಬೇಕು. ಚಿಕ್ಕ ವಯಸ್ಸಿನಲ್ಲಿ ಹೇಗೆ ಏನನ್ನ ನಂಬ್ತಾ, ಯಾವ ತತ್ವಗಳನ್ನ ಅನುಸರಿಸ್ತಾ ಬೆಳೆದು ಬಂದಿರ್ತೀವೋ, ನಮ್ಮಲ್ಲಿ ಅದೇ ನಂಬಿಕೆ ಬೇರೂರಿರುತ್ತೆ. ಅದೇ ಥರ ಯಾವುದಾದರೊಂದ ಪ್ರಯತ್ನದಲ್ಲಿ ನಾವು ಸೋತರೆ, ಓಹ್ ಇನ್ಮೇಲೆ ಇಂಥ ಪ್ರಯತ್ನಕ್ಕೆ ಕೈ ಹಾಕೋದು ಬೇಡ, ಹಾಕಿದರೆ ಸೋಲು ಖಂಡಿತ ಅಂತ ನಾವೇ ನಮ್ಮ ಮನಸ್ಸನ್ನ ಟ್ರೈನ್ ಮಾಡಿಬಿಟ್ಟಿರ್ತೀವಿ, ಅದಕ್ಕೆ ಒಂದು ಸೋಲಿನ ನಂತರ ಮತ್ತೆ ದೊಡ್ಡ ಪ್ರಯತ್ನಗಳಿಗೆ ನಾವು ಕೈ ಹಾಕೋದಕ್ಕೆ ಹಿಂಜರಿತೀವಿ. ನಮ್ಮ ಸಾಮರ್ಥ್ಯ ನಾವರಿತು ಮುಂದುವರೆಯಬೇಕು... ಫಲವಿರುವುದು ಪ್ರಯತ್ನದಲ್ಲಿ ಮಾತ್ರ...

ಕೃಪೆ:ನೆಟ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು