ಕಥೆ-763
ಕಂಫರ್ಟ್ ಜೋನ್ ದಿಂದ ಹೊರ ಬಂದರೆ ಏನನ್ನಾದರೂ ಸಾಧಿಸಬಹುದು
ಪ್ರತಿಯೊಬ್ಬರಿಗೂ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಆಸೆ ಇರುತ್ತದೆ. ಏನೇ ಮಾಡಬೇಕಾದರೂ, ಅದು ಅಷ್ಟು ಸುಲಭವಲ್ಲ. ಪ್ರತಿಯೊಂದು ಸಾಹಸ ಮತ್ತು ಸಾಧನೆಗೆ ಅದರದ್ದೇ ಆದ ರಿಸ್ಕ್ ಇರುತ್ತದೆ. ನಾವು ಆ ರಿಸ್ಕ್ ತೆಗೆದುಕೊಳ್ಳದೆ ಏನೋ ಸಾಧಿಸುವುದಕ್ಕೆ ಸಾಧ್ಯವೇ ಇಲ್ಲ. ಆದರೆ, ನಾವು ಒಂದು ಕಂಫರ್ಟ್ ಜೋನ್‌ನಲ್ಲಿ ಇರುತ್ತೇವೆ. ಅದನ್ನು ಬಿಟ್ಟು ಹೊರಗೆ ಬಂದರೆ ಹೇಗೋ ಎಂಬ ಭಯದಲ್ಲಿ ಇರುತ್ತೇವೆ. ಆ ಭಯದಿಂದಲೇ ಬಹಳಷ್ಟು ಬಾರಿ ನಮ್ಮಿಂದ ಏನೂ ಸಾಧಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಒಮ್ಮೆ ಆ ಭಯಬಿಟ್ಟು ಹೊರಬರಬೇಕು. ಏನಾಗುತ್ತದೋ ನೋಡೋಣ ಎಂದು ಧೈರ್ಯ ಮಾಡಿ ಮುನ್ನುಗ್ಗಬೇಕು. ಅಲ್ಲಿಗೆ ಅರ್ಧ ದಾರಿ ಕ್ರಮಿಸಿದಂತಾಗುತ್ತದೆ. ಇನ್ನರ್ಧ ನಿಂತಿರುವುದು ನಾವು ಹೇಗೆ ಕೆಲಸ ಮಾಡುತ್ತೇವೆ ಎಂಬ ವಿಷಯದಲ್ಲಿ ಅಡಗಿರುತ್ತದೆ. ಏಕೆಂದರೆ, ರಿಸ್ಕ್ ತೆಗೆದುಕೊಳ್ಳುವುದಷ್ಟೇ ಅಲ್ಲ, ಶ್ರಮ ಹಾಕಬೇಕು. ಹಗಲು-ರಾತ್ರಿ ಎನ್ನದೇ ಕಷ್ಟಪಡಬೇಕು.ಇವೆಲ್ಲವೂ ಇದ್ದಾಗಲೇ ಮನುಷ್ಯನಿಗೆ ನಿಜವಾದ ಖುಷಿ ಸಿಗುವುದು ಮತ್ತು ಕಷ್ಟ ಏನೆಂದು ಅರ್ಥವಾಗುವುದು. ಆರಂಭದಲ್ಲಿ ಸೋಲು, ನೋವು, ಹತಾಶೆ ಎದುರಿಸಬೇಕಾಗುತ್ತದೆ.ಪ್ರಯತ್ನ ಪಡುತ್ತಾ ಪಡುತ್ತಾ ಅದೆಲ್ಲದಕ್ಕೂ ಹೊಂದಿಕೊಳ್ಳುವುದರ ಜತೆಗೆ, ಕ್ರಮೇಣ ಯಶಸ್ಸು ಸಹ ಸಿಗುತ್ತದೆ.
ರಿತೇಶ್ ಅಗರ್‌ವಾಲ್
ಒಯೋ ಸಂಸ್ಥಾಪಕ
No comments:
Post a Comment