ಕಥೆ-748
ಈ ಬಾರಿ ಕಪ್ ನಮ್ದೇ.....
ನಮ್ಮ RCB ಅಭಿಮಾನಿಗಳು ಪ್ರತೀ ವರ್ಷವೂ ಕೂಡ ಈ ಸಲ ಕಪ್ ನಮ್ದೆ, ಈ ಸಲ ಕಪ್ ನಮ್ದೇ ಎಂದು ಹೇಳುತ್ತಿದ್ದರು. ಇದು 18 ವರ್ಷದಿಂದ ನಡೆಯುತ್ತಲೇ ಇತ್ತು, ಅಂತು ಇಂತು 18 ವರ್ಷ ತುಂಬಿದ ಮೇಲೆ ಕಪ್ಪು ನಮ್ಮದಾಗಿದೆ.. RCB ಮೊದಲ ಕಪ್ ಗೆದ್ದು ಅಭಿಮಾನಿಗಳಿಗೆ ಉಡುಗೊರೆ ನೀಡಿದೆ..
ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಫೈನಲ್ ಕಾದಾಟದಲ್ಲಿ ಆರ್ಸಿಬಿ 6 ರನ್ಗಳ ಜಯ ಸಾಧಿಸಿ ಚೊಚ್ಚಲ ಐಪಿಎಲ್ ಪ್ರಶಸ್ತಿ ತನ್ನದಾಗಿಸಿಕೊಂಡಿತು... IPL ಸಿಂಹಾಸನವನ್ನು RCB ತನ್ನದಾಗಿಸಿಕೊಂಡಿದೆ...
ಕ್ರಿಕೆಟ್ ನಮ್ಮ ರಾಷ್ಟ್ರೀಯ ಆಟವಲ್ಲ, ಭಾರತದಲ್ಲಿ ಅದರ ಅಬ್ಬರ ಅತಿ ದೊಡ್ಡದು, ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ನಮ್ಮ ದೇಶದಲ್ಲಿದೆ.. (BCCI) ಇದರ ಕೃಪಾಪೋಷಿತ ಐಪಿಎಲ್ ಜಗತ್ಪ್ರಸಿದ್ಧಿ ಆಟವಾಗಿದೆ...
ಒಂದು ಸಮಸ್ಯೆ ಏನೆಂದರೆ, ಈ IPL ಆಟಗಳು ಶುರುವಾಗುವುದೇ ಮಕ್ಕಳ ಪರೀಕ್ಷಾ ಸಂದರ್ಭದಲ್ಲಿ, ಎಷ್ಟೋ ಮಕ್ಕಳಿಗೆ ಪರೀಕ್ಷೆ ಮತ್ತು ವಿಷಯದ ಬಗ್ಗೆ ಮಾಹಿತಿ ಗೊತ್ತಿರಲ್ಲ, ಆದರೆ ಕ್ರಿಕೆಟಿಗೆ ಸಂಬಂಧಿಸಿದ ಏನೇ ಪ್ರಶ್ನೆ ಕೇಳಿದರೂ ಉತ್ತರ ತುದಿ ನಾಲಿಗೆಯಲ್ಲಿ ಬರುತ್ತವೆ.. IPL ಮಕ್ಕಳ ಮೇಲೆ ಅಷ್ಟು ಪ್ರಭಾವ ಬೀರಿದೆ.. ಮುಂದುವರೆದು ಮಕ್ಕಳು ಮೋಜು - ಜೂಜು ಪಾರ್ಟಿ, ಹುಚ್ಚು ಅಭಿಮಾನ ತೋರಿಸುತ್ತಾರೆ, ಇತ್ತೀಚಿಗಂತೂ ಫ್ಯಾನ್ಸ್ ಹೆಸರಿನಲ್ಲಿ ವರ್ತನೆಗಳು ವಿಚಿತ್ರವಾಗಿರುತ್ತವೆ, ಅತಿರೇಕದ ವರ್ತನೆ, ವೈಯಕ್ತಿಕ, ಇತರರಿಗೆ, ಸಮಾಜಕ್ಕೆ ಮತ್ತು ಪರಿಸರಕ್ಕೂ ಅಪಾಯವನ್ನು ತಂದು ಒಡುತ್ತದೆ..
ಮನರಂಜನೆಗೆ ಆಟ ಬೇಕು, ಅಭಿಮಾನವಿರಲಿ ಹುಚ್ಚು ಅಭಿಮಾನ ಒಳ್ಳೆದಲ್ಲ.. ನಮ್ಮ ಭವಿಷ್ಯ ನಮ್ಮ ಕೈಯಲ್ಲಿ,
ಪ್ರಯತ್ನದಲ್ಲಿ ಫಲವಿದೆ, 17 ಬಾರಿ ಸೋತರೂ ಕೊನೆಗೆ 18ನೇ ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಸಫಲವಾಗಿದೆ... ನಾವು ಎಷ್ಟೋ ಬಾರಿ ಒಂದೋ ಎರಡು ಪ್ರಯತ್ನ ಮಾಡುತ್ತೇವೆ, ಅದ್ರಲ್ಲಿ ಸಫಲವಾಗದಿದ್ದರೆ ಕೈ ಚೆಲ್ಲುತ್ತವೆ. ಆಟವೆಂದ ಮೇಲೆ ಸೋಲು ಗೆಲುವು ಸಹಜ.. ಸೋತಾಗ ಎದೆಗುಂದದೆ, ಮರಳಿ ಸಂಘಟಿಸಿ, ಹೋರಾಡುವಂತೆ ಮಾಡುವುದು ಯಶಸ್ಸಿನ ಲಕ್ಷಣ...
No comments:
Post a Comment