ಕಥೆ-775
ನಾವೆಲ್ಲರೂ ಹನುಮಂತನ ಹಾಗೆ
ರಾಮಾಯಣದಲ್ಲಿ ಹನುಮಂತನಿಗೆ ಒಂದು ಶಾಪದ ಉಲ್ಲೇಖ ಇದೆ. ಆತ ಭಾರೀ ಶಕ್ತಿವಂತ. ದೇವಾನುದೇವತೆಗಳಿಂದ ಸಾಕಷ್ಟು ವರಗಳನ್ನು ಪಡೆದಿದ್ದ ಹನುಮಂತನಿಗೆ ಇದ್ದ ಒಂದು ಶಾಪ ಏನೆಂದರೆ, ಆತನಿಗಿರೋ ಶಕ್ತಿಯ ಬಗ್ಗೆ ಯಾರಾದರೂ ಜ್ಞಾಪಿಸಿದರಷ್ಟೇ ನೆನಪಾಗಿ, ಆ ಕೆಲಸವನ್ನ ಹೋಗಿ ಸಾಧಿಸಿಕೊಂಡು ಬರ್ತಾನೆ. ಇಲ್ಲದಿದ್ದರೆ ಇಲ್ಲ..
ಹೀಗೆ ಜ್ಞಾಪಿಸಬೇಕು ಅವನಿಗೆ, ಆಗಲೇ ಅವನಲ್ಲಿ ಆ ಶಕ್ತಿ ಉದ್ಭವ ಆಗೋದು..
ಮೇಲಿನದು ಕಾಲ್ಪನಿಕವಾಗಿರಲಿ ಅಥವಾ ಕಥೆಯಾದರೂ ಆಗಿರಲಿ ನಾವೆಲ್ಲರೂ ಒಂಥರಾ ಹನುಮಂತನಹ ಹಾಗೇ ಅಲ್ಲವೇ, ನಮ್ಮಲ್ಲಿರೋ ಶಕ್ತಿ ನಮಗೆ ಮರೆತೇ ಹೋಗಿರುತ್ತೆ. ಹನುಮನಿಗಾದರೆ ನೆನಪಿಸಲು ರಾಮನಿದ್ದ ಅನ್ಬೋದು... ನಮಗೆ? ಯಾರಾದರೂ ‘ನಿನ್ನ ಕೈಲಿ ಇದು ಸಾಧ್ಯ. ನೀನಿದನ್ನ ಮಾಡಬಲ್ಲೆ’ ಅಂದರೆ ಅದನ್ನು ಮಾಡ್ತೀವಿ, ಅಲ್ಲಿಯವರೆಗೆ ಇದು ನನ್ನ ಕೈಲಿ ಆಗೋದಿಲ್ಲ ಅನ್ನೋದನ್ನೇ ನಂಬಿರ್ತೀವಿ. ಅದಕ್ಕೇ, ಎಷ್ಟೊಂದು ಜನ, ತಮ್ಮಲ್ಲಿ ತಾಕತ್ತು ಇದ್ದರೂ, ದೊಡ್ಡದಾದ ಸಾಧನೆಯನ್ನು ಮುಂದಾಗದೇ, ಇದ್ದಲ್ಲೇ ಇದ್ದು, ತಾವು ನೇಯ್ದ ಜೇಡರ ಬಲೆಯಲ್ಲೇ ಸುತ್ತುತ್ತಿರುತ್ತಾರೆ.
ಕೃಪೆ:ನೆಟ್
No comments:
Post a Comment