ಕಥೆ-787
ನಮ್ಮ ಸಂತೋಷ ಮತ್ತು ದುಃಖಕ್ಕೆ ಕಾರಣವೇನು?
ಸಂತೋಷಕ್ಕೆ ಸ್ನೇಹಿತರು ಕಾರಣ, ದುಃಖಕ್ಕೆ ವೈರಿಗಳು ಕಾರಣ ಎಂಬ ನಂಬಿಕೆ ನಮ್ಮಲ್ಲಿ ನೆಲೆಯೂರಿದೆ. ಅದು ತಪ್ಪು. ನಮ್ಮ ಸಂತೋಷ ಮತ್ತು ದುಃಖಗಳಿಗೆ ನಮ್ಮ ಸ್ನೇಹಿತರು ಅಥವಾ ವೈರಿಗಳು ಕಾರಣರಲ್ಲ. ಎಂಬುದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಅದಕ್ಕೆ ಕಾರಣ ನಮ್ಮ ಪಾಪ, ಪುಣ್ಯಗಳು. ನಮ್ಮ ಒಳ್ಳೆಯ ನಡವಳಿಕೆಗಳು ಪ್ರತಿಫಲವಾಗಿ ಸಂತೋಷವನ್ನು ಕೆಟ್ಟ ನಡವಳಿಕೆಗಳು ಪ್ರತಿಫಲವಾಗಿ ದುಃಖಕ್ಕೆ ಕಾರಣವಾಗುತ್ತವೆ. ಪಾಪ-ಪುಣ್ಯಗಳೇ ನಮ್ಮ ಖುಷಿ ಅಥವಾ ದುಃಖಕ್ಕೆ ಮೂಲ ಕಾರಣ. ಯಾರೇ ಆಗಲೀ, ಒಂದು ಕ್ಷಣಕ್ಕೂ ಸುಮ್ಮನಿರುವುದಿಲ್ಲ. ಗೊತ್ತಿದ್ದೋ, ಗೊತ್ತಿಲ್ಲದೆಯೋ ಮಾತಾಡುತ್ತಲೇ ಇರುತ್ತಾರೆ. ಬೇಕಿದ್ದೋ, ಬೇಡದ್ದೋ ಏನಾದರೊಂದು ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಅದರಿಂದ ಯಾರಿಗೋ ಸಂತೋಷವಾದರೆ, ಇನ್ಯಾರಿಗೋ ದುಃಖವಾಗುತ್ತಿರುತ್ತದೆ. ಅದರಿಂದ ಅವರು ಇನ್ನೆಂದೋ ಸಂತೋಷ ಅಥವಾ ದುಃಖವನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ, ಎಲ್ಲದಕ್ಕೂ ನಮ್ಮ ಕರ್ಮವೇ(ಕೆಲಸ) ಮುಖ್ಯ ಹೊರತೂ, ಬೇರೇನೂ ಅಲ್ಲ. ಹಾಗಾಗಿ, ನಾವು ಏನೇ ಕರ್ಮ ಮಾಡುವುದಕ್ಕೂ ಮೊದಲು, ಯಾವುದೇ ವೈಯಕ್ತಿಕ ಅಭಿಲಾಷೆ ಇಲ್ಲದೆ ಸಂಪೂರ್ಣನಾಗಿ ಶರಣಾಗತನಾಗಿ ಯಾವುದೇ ಕೆಲಸ ಮಾಡಿದಾಗ, ಸಂತೋಷ ಮತ್ತು ಶ್ರೇಯಸ್ಸು ಹೆಚ್ಚುತ್ತದೆ.
ಕೃಪೆ: ನೆಟ್
No comments:
Post a Comment