ಕಥೆ-786
ನೋವು, ದುಗುಡ ಕೇಳುವ ಕಿವಿ...
ನಾವು ಹಿತಾನುಭವ ಎಂಬ ಪದವನ್ನು ಪದೇಪದೆ ಕೇಳುತ್ತಿರುತ್ತೇವೆ. ಇಷ್ಟಕ್ಕೂ ಈ ಹಿತಾನುಭವ ಎಂದರೆ ಏನು? ಆ ಅನುಭವ ಆಗುವುದು ಹೇಗೆ? ಎಂಬ ಪ್ರಶ್ನೆಗಳು ಸಹಜ. ಈ ಹಿತಾನುಭವ ಸುಮ್ಮನೆ ಬರುವುದಿಲ್ಲ. ನಾವು ಒಳ್ಳೆಯ ಕೆಲಸಗಳನ್ನು ಮಾಡಿದರೆ, ಹಿತಾನುಭವ ಉಂಟಾಗುತ್ತದೆ. ಇನ್ನು ಒಳ್ಳೆಯ ಕೆಲಸಗಳನ್ನು ಮಾಡುವುದು ಸುಮ್ಮನೆಯಲ್ಲ. ನಮ್ಮ ಮನಸ್ಸು ಒಳ್ಳೆಯದಾಗಿದ್ದಾಗ, ಸಹಜವಾಗಿಯೇ ಒಳ್ಳೆಯ ಕೆಲಸಗಳನ್ನು ಮಾಡುತ್ತೇವೆ. ನಾವು ಒಳ್ಳೆಯ ಕೆಲಸಗಳನ್ನು ಮಾಡುವುದು ಯಾವಾಗ? ನಮ್ಮ ಮನಸ್ಸು ಚೆನ್ನಾಗಿದ್ದಾಗ. ನಾವು ಪಾಸಿಟಿವ್ ಆಗಿ ಯೋಚಿಸಿದರೆ, ಆಗ ಸಹಜವಾಗಿಯೇ ಮನಸ್ಸು ಚೆನ್ನಾಗಿರುತ್ತದೆ ಮತ್ತು ಅದು ನಮ್ಮಿಂದ ಒಳ್ಳೆಯ ಕೆಲಸಗಳನ್ನು ಮಾಡಿಸುತ್ತದೆ. ಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೆ ಪವರ್ ಅಥವಾ ದುಡ್ಡು ಬೇಡ. ಅದಕ್ಕೊಂದು ಒಳ್ಳೆಯ ಮನಸ್ಸಿದ್ದರೆ ಸಾಕು. ಎಲ್ಲರಿಗೂ ಹಣದ ಸಮಸ್ಯೆ ಇರುವುದಿಲ್ಲ. ಬೇರೆಬೇರೆ ರೀತಿಯ ಸಮಸ್ಯೆಗಳಿರುತ್ತವೆ. ಅಂಥವರಿಗೆ ನಾಲ್ಕು ಮಾತುಗಳು ಬೇಕಿರುತ್ತದೆ. ನಿಮ್ಮ ಉಪಸ್ಥಿತಿ ಸಾಕಾಗುತ್ತದೆ. ಅಂಥವರಿಗೆ ಕೋಟಿ ರೂಪಾಯಿ ಕೊಟ್ಟರೂ ಪ್ರಯೋಜನವಿರುವುದಿಲ್ಲ. ಅವರಿಗೆ ಆ ಕ್ಷಣಕ್ಕೆ ತಮ್ಮ ನೋವು, ದುಗುಡವನ್ನು ಹೇಳಿಕೊಳ್ಳುವುದಕ್ಕೆ ಒಂದು ಮನಸ್ಸು, ಒಂದು ಕಿವಿ ಬೇಕಿರುತ್ತದೆ. ಆ ಮನಸ್ಸು ಮತ್ತು ಕಿವಿ ನಿಮ್ಮದಾಗಿರಲಿ. ಅದಕ್ಕಿಂತ ಇನ್ನೊಂದು ದೊಡ್ಡ ಉಪಕಾರ ನೀವು `ಬೇರೆಯವರಿಗೆ ಮಾಡುವುದಕ್ಕೆ ಸಾಧ್ಯವಿಲ್ಲ.
ಶಿವ್ ಖೇರಾ ಮಾರ್ಗದರ್ಶಕ
No comments:
Post a Comment