ಕಥೆ-794
ಸಾಧನೆಗೆ ಶಾರ್ಟ್‌ಕಟ್ ಇರುವುದಿಲ್ಲ
ಬದಲಾವಣೆ ಎನ್ನುವುದು ಸಹಜ. ಅದು ಸ್ವಾಗತಾರ್ಹವಷ್ಟೇ ಅಲ್ಲ, ಅನಿವಾರ್ಯವೂ ಕೂಡಾ. ಆದರೆ, ಆಗಿರುವ ಬದಲಾವಣೆಗೆ ನಾವು ಹೇಗೆ ಒಗ್ಗಿಕೊಳ್ಳುತ್ತೇವೆ ಎನ್ನುವುದು ಬಹಳ ಮುಖ್ಯ.
ಸಂಗೀತದಲ್ಲಿ ತಂತ್ರಜ್ಞಾನ ಹೆಚ್ಚಾಗುತ್ತಿದ್ದಂತೆಯೇ, ಅದರ ಬಗ್ಗೆ ಇವತ್ತಿನ ತಲೆಮಾರಿನವರು ಸಾಕಷ್ಟು ರಿಸರ್ಚ್ ಮಾಡುತ್ತಿರುವುದಷ್ಟೇ ಅಲ್ಲ, ತಾಂತ್ರಿಕವಾಗಿ ಧ್ವನಿಮುದ್ರಣ ದಲ್ಲಿ ಅದ್ಭುತಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ಅದನ್ನು ಕಲಿಯಬೇಕು, ಅರ್ಥ ಮಾಡಿಕೊಳ್ಳಬೇಕು, ಸಾಧನೆ ಮಾಡಬೇಕು. ಅಷ್ಟೊಂದು ಸಮಯವನ್ನು ಯಾರು ವ್ಯಯಿಸುತ್ತಾರೆ? ಪ್ರಯತ್ನ ಪಡದೆ ಸಂಗೀತಗಾರರಾಗಲು ಇಷ್ಟಪಡುತ್ತಾರೆ. ಆದರೆ ಅದು ಶಾರ್ಟ್ ಕಟ್ ರೂಟ್.. ಆದರೆ ಅದರಿಂದ ಸಾಧನೆ ಸಾಧ್ಯ ಇಲ್ಲ. ಒಟ್ಟಿನಲ್ಲಿ ನಾವು ಹಾಡಬೇಕು, ಗಾಯಕ ಎಂದೆನಿಸಿಕೊಳ್ಳಬೇಕು ಎಂದು ಶಾರ್ಟ್‌ಕಟ್ ಹಿಡಿದು, ತಾಂತ್ರಿಕವಾಗಿ ತಂತ್ರಜ್ಞಾನ ಮುಂದಿರುತ್ತದೆಯೇ ಹೊರತು, ಸಂಗೀತ ಇರುವುದಿಲ್ಲ. ನಿಮ್ಮಲ್ಲಿರುವ ಕೌಶಲತೆ ಖಂಡಿತಾ ಬಳಸಿಕೊಳ್ಳಬೇಕು. ಆದರೆ, ಅದರಿಂದ ಜನರಿಗೆ ಮೋಸ ಆಗಬಾರದು. ಇಲ್ಲಿ ಸಂಗೀತ ಕಲಿಯುವುದಷ್ಟೇ ಮುಖ್ಯವಲ್ಲ. ವಿವೇಕ, ಸಂಸ್ಕಾರ, ಪ್ರಾಮಾಣಿಕತೆ, ಸಾಧನೆ ಬಹಳ ಮುಖ್ಯ. ನಿಮ್ಮಲ್ಲಿರುವ ಕಲೆಯಿಂದ ನಿಮ್ಮನ್ನು ಗುರುತಿಸಿಕೊಂಡು ಪೋಷಿಸಿ. ಆತ್ಮವಿಶ್ವಾಸ ಮತ್ತು ಅನುಗ್ರಹವಿದ್ದರೆ ದೊಡ್ಡ ಮಟ್ಟದಲ್ಲಿ ಬೆಳೆಯಬಹುದು.
-ಸಂಗೀತಾ ಕಟ್ಟಿ ಗಾಯಕಿ
No comments:
Post a Comment