Sunday, August 17, 2025

 ಕಥೆ-830

ಬುದ್ಧಿವಂತನಿಗೆ ಗೆಲುವು

ಪ್ರಾಚೀನ ಕಾಲದ ದಾಯ್ ಜನಾಂಗದಲ್ಲಿ ನಮ್ಮ ತೆನಾಲಿ ರಾಮಕೃಷ್ಣ, ಬೀರಬಲ್ಲನಂತೆ ಐಸು ಮತ್ತು ಐಶಿ ಎಂಬ ಸಹೋದರರು ತಮ್ಮ ಚುರುಕು ಬುದ್ಧಿವಂತಿಕೆಗೆ ಬಹಳ ಹೆಸರಾಗಿದ್ದರು. ಈ ಸಹೋದರರನ್ನು ಕಂಡರೆ ಆ ಊರಿನ ಶ್ರೀಮಂತನೊಬ್ಬನಿಗೆ ಸದಾಕಾಲ ಹೊಟ್ಟೆ ಉರಿಯುತ್ತಿತ್ತು. ಏನಾದರೂ ಮಾಡಿ ಇವರನ್ನು ಮೂರ್ಖರನ್ನಾಗಿಸಿ ಸೋಲಿಸಬೇಕೆಂದು ಅವನ ಮಹದಾಸೆಯಾಗಿತ್ತು.

ಒಂದು ದಿನ ಅವನು ಸುತ್ತಲೂ ಸೇರಿದ್ದ ಜನರಿಗೆ "ಇಂದು ನಾನು ಏನಾದರೂ ಮಾಡಿ ಐಶಿಯನ್ನು ಮೂರ್ಖನನ್ನಾಗಿ ಮಾಡಿಯೇ ತೀರುತ್ತೇನೆ" ಎಂದು ಹೇಳಿ ತನ್ನ ಸೇವಕರಿಗೆ ಐಶಿಯನ್ನು ಕರೆದುಕೊಂಡು ಬರುವಂತೆ ಆಜ್ಞಾಪಿಸಿದನು. ಸ್ವಲ್ಪ ಹೊತ್ತಿನಲ್ಲೇ ಐಶಿ ಅಲ್ಲಿಗೆ ಬಂದನು. ಶ್ರೀಮಂತ ಕಾಲಿನ ಮೇಲೆ ಕಾಲು ಹಾಕಿ ಕುರ್ಚಿಯ ಮೇಲೆ ಕುಳಿತಿದ್ದ. ಐಶಿ ಬಂದವನೇ ಸ್ವಲ್ಪ ದೂರದಲ್ಲೇ ನಿಂತು ಶ್ರೀಮಂತನಿಗೆ ಕೈಮುಗಿದ. ಆಗ ಶ್ರೀಮಂತನು "ನೀನು ಈ ಊರಿನಲ್ಲಿ ಎಲ್ಲರಿಗಿಂತ ತುಂಬಾ ಬುದ್ಧಿವಂತನೆಂದು ಹೇಳುತ್ತಾರೆ. ನಾನು ಈಗ ನಿನ್ನನ್ನು ಪರೀಕ್ಷಿಸುತ್ತೇನೆ. ಎಲ್ಲಿ ನನ್ನನ್ನು ಈ ಕುರ್ಚಿ ಬಿಟ್ಟು ಏಳುವಂತೆ ಮಾಡು ನೋಡೋಣ" ಎಂದು ಸವಾಲು ಹಾಕಿದ.

ಐಶಿಗೆ ಗಲಿಬಿಲಿಯಾಯಿತು. ಅವನು ಅದನ್ನು ತೋರಗೊಡದೆ ಒಂದು ಕ್ಷಣ ಯೋಚಿಸಿ ಬಹಳ ಭಯ ಭಕ್ತಿಯಿಂದ "ಮಹಾಸ್ವಾಮಿ! ನೀವು ಈ ಊರಿಗೆ ಹಿರಿಯರು. ಮೇಲಾಗಿ ಭಾರೀ ಶ್ರೀಮಂತಾರಲ್ಲದೆ ಮುಖಂಡರು ಹೌದು. ಈಗ ತಾವು ಕುಳಿತಿರುವ ಆಸನ ಸಾಮಾನ್ಯವಾದುದಲ್ಲ. ಅದು ಪವಿತ್ರವಾದ ಸ್ಥಾನವಾಗಿದೆ. ಇಂತಹ ಪವಿತ್ರವಾದ ಆಸನದ ಮೇಲೆ ಕುಳಿತಿರುವವರ ಜೊತೆ ಯಾರು ತಮಾಷೆ ಮಾಡುವುದು ಸಭ್ಯತೆಯಲ್ಲ. ನೀವು ನಿಜವಾಗಿಯೂ ನನ್ನೊಡನೆ ಪಂದ್ಯ ಹೋದುವುದೇ ಆದರೆ ಇಗೋ ಈ ಕಡೆ ಇರುವ ಕೊನೆಯ ಕುರ್ಚಿಯ ಮೇಲೆ ಕುಳಿತುಕೊಳ್ಳಿ. ಆಗ ನಿಮ್ಮನ್ನು ನಾನು ಸೋಲಿಸುತ್ತೇನೆಯೋ ಇಲ್ಲವೋ ನೀವೇ ನೋಡಿ" ಎಂದ.

ಶ್ರೀಮಂತನಿಗೆ ಈ ಮಾತು ನಿಜವೆನ್ನಿಸಿತು. ಅವನು ತಾನು ಕುಳಿತಿರುವ ಆ ಆಸನ ದೊಡ್ಡ ಸ್ಥಾನವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಅದರ ಮೇಲೆ ಕುಳಿತು ಸವಾಲು ಹಾಕುವುದು ಸರಿಯಲ್ಲ ಎಂದು ಯೋಚಿಸಿದವನೆ ಕೊಡಲೇ ತಾನು ಕುಳಿತಿದ್ದ ಕುರ್ಚಿಯಿಂದ ಎದ್ದು ಐಶಿ ತೋರಿಸಿದ ಕುರ್ಚಿಯ ಮೇಲೆ ಕುಳಿತುಕೊಂಡ. ನಾನಾತರ ಐಶಿಯನ್ನು ಕುರಿತು "ಈಗ ನನ್ನ ಸವಾಲಿಗೆ ಏನು ಹೇಳುತ್ತೀಯಾ? ಸೋಲೊಪ್ಪಿಕೊಳ್ಳುವೆಯಾ? ಎಂದು ಪ್ರಶಿಸಿದನು.

ಅದಕ್ಕೆ ಐಶಿ "ಮಹಾಸ್ವಾಮಿ! ನಿಮ್ಮ ಸವಾಲನ್ನು ನಾನು ಸ್ವೀಕರಿಸಿಯೂ ಆಯಿತು. ಅದರಲ್ಲಿ ಜಯಶಾಲಿಯು ಆಗಿದ್ದೇನೆ. ನೀವು ಕುಳಿತಿದ್ದ ಕುರ್ಚಿಯಿಂದ ನಿಮ್ಮನ್ನು ನಾನು ಈಗಾಗಲೇ ಎಬ್ಬಿಸಿ ಬಿಟ್ಟಿದ್ದೇನೆ. ಅದನ್ನು ನೀವು ಗಮನಿಸಿಲ್ಲವೆಂದು ತೋರುತ್ತದೆ" ಎಂದವನೇ "ಮಹಾಸ್ವಾಮಿ ನಾನಿನ್ನು ಬರುತ್ತೇನೆ"ಎನ್ನುತ್ತಾ ತನ್ನ ಮನೆಗೆ ನಡೆದನು. ಶ್ರೀಮಂತ ಗರ್ವಭಂಗದಿಂದ ಅವಮಾನಿತನಾದ.


 

ಕೃಪೆ: ಕಿಶೋರ್.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು