ಕಥೆ-840
ನಿರಂತರ ಕ್ರಿಯಾಶೀಲತೆ ಜೀವನಚಕ್ರ...
ಓರ್ವ ಮಹಾರಾಜನು ಕಾಯಿಲೆಯಿಂದ ಹಾಸಿಗೆ ಹಿಡಿದ. ಏನೆಲ್ಲ ಉಪಚಾರ ಮಾಡಿದರೂ ರಾಜನ ಕಾಯಿಲೆ ಗುಣವಾಗಲಿಲ್ಲ. ಸಂತರೊಬ್ಬರು ಬಂದು ಹೇಳಿದರು “ಆನಂದ ಪುರುಷನ ಅಂಗಿಯನ್ನು ತಂದು ರಾಜನಿಗೆ ಹಾಕಿದರೆ ಸಾಕು ಕಾಯಿಲೆ ಗುಣವಾಗುತ್ತದೆ”
ಮಂತ್ರಿಯೂ ಆನಂದವಾಗಿರಲಿಲ್ಲವೆಂದು ಪ್ರಾಮಾಣಿಕವಾಗಿ ಹೇಳಿ ಬೇರೆಯವರ ಅಂಗಿ ತರಲು ಹೋದ. ಎಲ್ಲಿ ಹೋದರೂ ಎಲ್ಲರೂ
ಒಂದಿಲ್ಲೊಂದು ಕಷ್ಟಕೊರತೆ ಹೇಳುತ್ತಿದ್ದರು. ಕೊನೆಗೆ ಒಬ್ಬ ಯುವಕ ಅರಣ್ಯದಲ್ಲಿ ಹಾಡುತ್ತ ಕಟ್ಟಿಗೆ ಕಡಿಯುತ್ತಿದ್ದ ಆದರೆ ಅವನ ಮೈಮೇಲೆ ಅಂಗಿಯೇ ಇರಲಿಲ್ಲ. ರಾಜನು ಸ್ವತಃ ಆ ಯುವಕನೊಂದಿಗೆ ಮೈ ಮುರಿದು ದುಡಿದಾಗ ರಾಜನ ಕಾಯಿಲೆ ಹೇಳದೆ ಕೇಳದೆ ಓಡಿ ಹೋಗಿತ್ತು! ಕಾಯಕದಲ್ಲಿಯೆ ಕೈಲಾಸವಿದೆ ಎಂದು ರಾಜನಿಗೆ
ಮನದಟ್ಟಾಗಿತ್ತು. ರವಿ ಶಶಿ ತಾರೆಗಳಂತೆ ನಾವು ನಿರಂತರ ಕ್ರಿಯಾಶೀಲರಾಗಿರಬೇಕು. ಇದೇ ಜೀವನಚಕ್ರ, ವಿಶ್ವಚಕ್ರ.
ಶ್ರೀ *ಸಿದ್ಧೇಶ್ವರ ಸ್ವಾಮೀಜಿ*
No comments:
Post a Comment