ಕಥೆ-833
ಕಲೆ ಮುಚ್ಚಿಡಲು ಅಲ್ಲ
https://basapurs.blogspot.com
ಓರ್ವ ಸಿರಿವಂತನು ಸುಪ್ರಸಿದ್ಧವಾದ ಕಲಾವಿದನ ಚಿತ್ರಪ್ರದರ್ಶನ ನೋಡಲು ಹೋದ. ಅದರಲ್ಲಿ ಅತ್ಯಂತ ಸುಂದರವಾದ ಚಿತ್ರದ ಹರಾಜು ನಡೆದಿತ್ತು. ಲಕ್ಷಾಂತರ ಹಣ ಕೊಟ್ಟು ಸಿರಿವಂತನು ಆ ಚಿತ್ರವನ್ನು ಖರೀದಿಸಿದನು. ಮನೆಗೆ ತಂದು ಅದನ್ನು ಪೆಟ್ಟಿಗೆಯಲ್ಲಿ ಭದ್ರವಾಗಿಟ್ಟು ಮುಚ್ಚಿ ಕೀಲಿ ಹಾಕಿದ. ತನ್ನ ಮನೆಯವರಿಗೂ ಅದನ್ನು ಅವನು ತೋರಿಸಲಿಲ್ಲ. ಕಲಾವಿದನು ತನ್ನ ಚಿತ್ರವನ್ನು ಎಲ್ಲಿಟ್ಟಿದ್ದಾನೆಂದು ತಿಳಿಯಲು ಸಿರಿವಂತನ ಮನೆಗೆ ಹೋದ. ಚಿತ್ರವು ಎಲ್ಲಿಯೂ ಕಾಣದಿದ್ದಾಗ ನನ್ನ ಚಿತ್ರವೆಲ್ಲಿ?' ಎಂದು ಸಿರಿವಂತನಿಗೆ ಕೇಳಿದ.“ಅದನ್ನು ಪೆಟ್ಟಿಗೆಯಲ್ಲಿ ಭದ್ರವಾಗಿ ಇಟ್ಟಿದ್ದೇನೆ” ಎಂದು ಸಿರಿವಂತ ಹೇಳಿದ. ಇದನ್ನು ಕೇಳಿ ಕಲಾವಿದನಿಗಾದ ನೋವು ಅವರ್ಣನೀಯ.
ಚಿತ್ರವನ್ನು ಹೊರಗಿಟ್ಟರೆ ಅದು ಹಾಳಾಗಿ ಹೋಗುತ್ತದೆ. ಹಣ ಕೊಟ್ಟು ತಂದುದು ವ್ಯರ್ಥವಾಗುತ್ತದೆಂದು ಸಿರಿವಂತನು ಭಾವಿಸಿದ್ದ. ಆದರೆ ಶಾಂತಿ-ಸಮಾಧಾನ ಇರುವುದು ಹಣದಲ್ಲಿ ಅಲ್ಲ, ಚಿತ್ರದ
ಸೌಂದರ್ಯವನ್ನು ಅನುಭವಿಸುವುದರಲ್ಲಿ ಎನ್ನುವುದು ಸಿರಿವಂತನಿಗೆ ಕಲಾವಿದನು ತಿಳಿಸಿದ. ಸಿರಿವಂತನು ಕ್ಷಮೆ ಕೇಳಿ ಚಿತ್ರವನ್ನು ಹೊರಗೆ ಇಟ್ಟು ಎಲ್ಲರಿಗೂ ಸಂತಸಪಡಿಸಿದ. ಎಷ್ಟೋ ವಿದ್ಯಾರ್ಥಿಗಳಲ್ಲಿ ಉತ್ತಮ ಕಲೆ ಇರುತ್ತದೆ, ಅದನ್ನು ಅಭಿವ್ಯಕ್ತಿಗೊಳಿಸುವ ಪ್ರಯತ್ನ ಮಾಡುವುದಿಲ್ಲ.. ಇದರಿಂದಾಗಿ ಅವರ ಕಲೆ ಮೂಲೆಗುಂಪಾಗಿರುತ್ತದೆ... ಕಲೆ ಮುಚ್ಚಿಡಲು ಅಲ್ಲ, ಸಂತೋಷಪಡಿಸಲು, ಆನಂದಿಸಲು..
ಶ್ರೀ *ಸಿದ್ಧೇಶ್ವರ ಸ್ವಾಮೀಜಿ*
No comments:
Post a Comment