ಕಥೆ-864
ಮ್ಯಾಗ ಏರುತಿದೆ ಮ್ಯಾಗೇರಿ,
ಕಬಡ್ಡಿ ಕೂಡುತಿದೆ ಮೇಲೇರಿ.
(ಅನಿರೀಕ್ಷಿತ ಆಯೋಜನೆ ಅದ್ಭುತ ಪ್ರಾಯೋಜನೆ)
ಒತ್ತಡದ ಬದುಕಿನಲ್ಲಿ, ನೌಕರರ ಒತ್ತಡದ ಕೆಲಸಗಳ ನಡುವೆ, ಅನಿರೀಕ್ಷಿತವಾಗಿ ಹಿರೇಮ್ಯಾಗೇರಿಗೆ ಬಂದದ್ದು 2025-26ನೇ ಸಾಲಿನ ಪ್ರೌಢಶಾಲಾ ತಾಲೂಕ ಮಟ್ಟದ ಕಬಡ್ಡಿ ಕ್ರೀಡಾಕೂಟದ ಆಯೋಜನೆ. ಈ ಕ್ರೀಡಾಕೂಟಕ್ಕೆ ಸಂಬಂಧಿಸಿ ಅನೇಕ ಸಾರಿ ಸಭೆ ಕರೆಯುವ ಪ್ರಯತ್ನ ಮಾಡಿದರೂ, ಸಭೆಗಳು ಸಂಪೂರ್ಣವಾಗಲೇ ಇಲ್ಲ, ಎಲ್ಲಿ ತಾಲೂಕ ಮಟ್ಟದ ಕ್ರೀಡಾಕೂಟ ಅಬಾಸವಾಗುತ್ತದೆ ಏನೋ ಎಂಬಂತೆ ಆಗಿಬಿಟ್ಟಿತ್ತು.. 10/09/2025 ದಿನಾಂಕ ಫಿಕ್ಸ್ ಆಗಿದ್ದು... ಮಾಡಲೇಬೇಕು ಬಿಡುಗಡೆ ಅಂತೂ ಇಲ್ಲ, ಏನೇ ಆಗಲಿ ಅದನ್ನು ಮಾಡಿಯೇ ತೀರಬೇಕೆಂಬುದು ನಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ಸಿಬ್ಬಂದಿ ಮತ್ತು ಎಸ್ಡಿಎಂಸಿ ಅವರ ತೀರ್ಮಾನವಾಗಿತ್ತು, ಅದರ ಜೊತೆಗೆ ಊರಿನ ಮುಖಂಡರು ತಯಾರಾಗಿದ್ದರು, ಆದರೂ ಈ ಕ್ರೀಡಾಕೂಟದ ಪೂರ್ವ ತಯಾರಿ & ಆಯೋಜನೆಗಾಗಿ ಒಂದು ಪೂರ್ವಭಾವಿ ಸಭೆಯನ್ನು ಯಶಸ್ವಿಯಾಗಿ ಮಾಡಲು ಸಾಧ್ಯವಾಗಲಿಲ್ಲ... ಪದ್ಧತಿ ಪ್ರಕಾರ ಏಕೆ ಇದನ್ನು ಆಯೋಜನೆ ಮಾಡಲು ಆಗುತ್ತಿಲ್ಲ ಎಂಬಂತಾಗಿತ್ತು... ಕಳೆದ ವರ್ಷ ತಾಲೂಕು ಮಟ್ಟದ ಕ್ರೀಡಾಕೂಟವನ್ನು ರಾಜ್ಯಮಟ್ಟದಂತೆ ಅದ್ಭುತವಾಗಿ ನಡೆಸಿಕೊಟ್ಟ ಹೆಗ್ಗಳಿಕೆ ನಮ್ಮ ಹಿರೇಮ್ಯಾಗೇರಿ ಗ್ರಾಮಕ್ಕೆ ಸಲ್ಲುತ್ತದೆ..
ಆಯೋಜಕರು ಸಂಘಟನೆ ಮಾಡಬೇಕೆನ್ನುವರು ಪದೇ ಪದೇ ದಾನಿಗಳನ್ನು ಕೇಳೋದಕ್ಕೆ ಮುಜುಗರ ಪಡುವಂತಾಗಿತ್ತು.. ಬುಧವಾರ ಕ್ರೀಡಾಕೂಟ ಆರಂಭವಾಗುತ್ತದೆ ಆದರೂ ಮಂಗಳವಾರ ಸಂಜೆವರೆಗೂ ಯಾವುದೇ ತಯಾರಿ ಇರಲಿಲ್ಲ.. ಕೊನೆಗೆ ಸಂಜೆ ಹೊತ್ತಲ್ಲಿ ನಮ್ಮ ಮುಖ್ಯೋಪಾಧ್ಯಾಯರಾದ ಮುಕುಂದ ಸರ್ ಮತ್ತು ಯುವ ಮಿತ್ರ ನಿಂಗರಾಜ ಹೊಸಮನಿ ಕಬಡ್ಡಿ ಕ್ರೀಡಾಂಗಣ ತಯಾರಿ ಮಾಡಲು ಶುರು ಮಾಡಿದರು...ನಂತರ ಯುವ ಮಿತ್ರರು ಸೇರಿಕೊಂಡರು.. ಇದರಲ್ಲಿ SDMC ಸಹಕಾರ ದೊಡ್ಡದು. ಪಂಚಾಯಿತಿ ಸಹಕಾರ, ಊರಿನ ಮುಖಂಡರ ಸಹಕಾರ, ದಾನಿಗಳ ಸಹಕಾರ ಯುವಕರ ಸಹಕಾರದಿಂದ ಬೆಳಕು ಹರಿಯುವುದರೊಳಗೆ, ಕ್ರೀಡಾಕೂಟದ ಆಯೋಜನೆಯ ಚಿತ್ರಣ ಬದಲಾಗಿತ್ತು. ಕಬಡ್ಡಿ ಕ್ರೀಡಾಂಗಣ ಮಧುವಣಗಿತ್ತಿಯಂತೆ ಶೃಂಗಾರಗೊಂಡು ಕ್ರೀಡಾಪಟುಗಳನ್ನು ಕೈಬಿಸಿ ಕರೆಯುವಂತಾಗಿತ್ತು.
ಮ್ಯಾಗೇರಿ ಹೆಸರು
ಕಬಡ್ಡಿ ಉಸಿರು ಎಂಬಂತೆ ಆಗಿತ್ತು..
ಊರಿನ ಅಭಿಮಾನ ಬಂದಾಗ ಹಿರೇಮ್ಯಾಗೇರಿ ಒಂದು ಹೆಜ್ಜೆ ಮುಂದೆ ಇರುತ್ತದೆ... ಆಟ ಅಂತ ಬಂದಾಗ ಅದು ಎಷ್ಟೋ ಹೆಜ್ಜೆ ಮುಂದೆ ಇರುತ್ತದೆ...
ಅದರಲ್ಲಿ ಒಂದು ಹೆಜ್ಜೆ ಪಾಠದ ಕಡೆ ಹಾಕಿದ್ದೆ ಆದರೆ ಹಿರೇಮ್ಯಾಗೇರಿ ಚಂದವೋ ಚಂದ...
ಕಬಡ್ಡಿಯಲ್ಲಿ ರಾಷ್ಟ್ರಮಟ್ಟದಲ್ಲೂ ಸದ್ದು ಮಾಡಿರುವಂತಹ ಪ್ರತಿಭೆಗಳಿವೆ.. ಕೌಶಲ್ಯ ಭರಿತ ಪ್ರತಿಭಾವಂತ ಆಟಗಾರರ ಪಡೆಗಳನ್ನೇ ಹೊಂದಿರುವ ಹೆಗ್ಗಳಿಕೆ ಹಿರೇಮ್ಯಾಗೇರಿಗಿದೆ ಅಲ್ಲದೆ ಸಾಮೂಹಿಕ ವಿವಾಹ, ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸುತ್ತಾ ಬಂದಿರೋದು ವಿಶೇಷ...
ಮಕ್ಕಳ ಜೀವನ ರೂಪಿಸಿಕೊಳ್ಳುವಲ್ಲಿ ಓದಿಗಿರುವಷ್ಟು ಅವಕಾಶಗಳು ಆಟದಲ್ಲಿ ಇಲ್ಲ... ಆಟದಲ್ಲಿ ಗಂಧ ಗಾಳಿ ಗೊತ್ತಿಲ್ಲದ, ಓದಿನಲ್ಲಿ ಆಸಕ್ತಿ ಇರುವ ಅದೆಷ್ಟೋ ಪ್ರತಿಭೆಗಳು, ಆಟದ ಪ್ರಭಾವಕ್ಕೆ ಸಿಲುಕಿ ಇತ್ತ ಓದಿನಲ್ಲಿಯೂ ಮುಂದೆ ಬಾರದೆ, ಅತ್ತ ಆಟದಲ್ಲಿ ಇಲ್ಲದೆ, ಎಷ್ಟೋ ವಿದ್ಯಾರ್ಥಿಗಳು ಒಂದು ಒಳ್ಳೆ ಜೀವನ ರೂಪಿಸಿಕೊಳ್ಳಲಾಗದ ಸ್ಥಿತಿ ಹೊಂದಿರುತ್ತಾರೆ...
ಈ ಆಟದ ಪಂದ್ಯಾವಳಿಗಳಿಗೆ ಪ್ರೋತ್ಸಾಹ ನೀಡಿದಂತೆ, ಅದರ ಜೊತೆಗೆ, ಯುವಕರಿಗೆ ಸ್ವಯಂ ಉದ್ಯೋಗ ತರಬೇತಿ, ಗ್ರಂಥಾಲಯ ಬಳಕೆ ಕುರಿತು ಕಾರ್ಯಕ್ರಮಗಳು... ಮಕ್ಕಳಿಗೆ ಮೌಲ್ಯ ಶಿಕ್ಷಣ, ಓದುವ, ಸ್ಪರ್ಧಾತ್ಮಕ ಪರೀಕ್ಷೆಗಳ, ಕ್ವಿಜ್, ಥಟ್ಟಂತ ಹೇಳಿ, ಕೌಶಲ್ಯ ತರಬೇತಿಗಳ, ಇತ್ಯಾದಿ ಕಾರ್ಯಕ್ರಮಗಳ ಪಂದ್ಯಾವಳಿಗಳನ್ನು ಹಮ್ಮಿಕೊಂಡರೆ, ಯುವಕರಿಗೆ ಸ್ವಯಂ ಉದ್ಯೋಗ ಮಾಡಲು ಅನುಕೂಲವಾಗುತ್ತದೆ, ಮತ್ತು ಓದಿನಲ್ಲಿ ಪ್ರತಿಭಾವಂತ ಇರೋರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ.. ಅದು ಇತರೆ ಅನೇಕ ವಿದ್ಯಾರ್ಥಿಗಳಿಗೆ ಓದಲು ಪ್ರೇರಣೆ ನೀಡುತ್ತದೆ... ಆಗ ಹಿರೇಮ್ಯಾಗೇರಿ ಆಟದಲ್ಲೂ ಮುಂದು, ಪಾಠದಲ್ಲೂ ಮುಂದು ಆಗುತ್ತದೆ...
ನಮ್ಮ ಹಿರೇಮ್ಯಾಗೇರಿ ಪ್ರೌಢಶಾಲಾ ಬಾಲಕರ ತಂಡ, ತವರು ಆಟವಾದ ಕಬಡ್ಡಿ ಸ್ಪರ್ಧೆಯಲ್ಲಿ ತಾಲೂಕು ಮಟ್ಟ ವಿಜೇತರಾದ ಕ್ಷಣ, ಸಡಗರ ಸಂಭ್ರಮವನ್ನು ಹೊತ್ತು ತಂದಿತ್ತು...
ತಾಲೂಕು ಮಟ್ಟದ ಕ್ರೀಡೆಗಳು ಹಿರೇಮ್ಯಾಗೇರಿಯಲ್ಲಿ ಯಶಸ್ವಿಯಾಗಲು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಭಾಗಿಯಾದವರೆಲ್ಲರೂ ಅಭಿನಂದನಾರ್ಹರು...
ಈ ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ನನ್ನನ್ನು ಸನ್ಮಾನಿಸಿದ ಆಯೋಜಕರಿಗೆ ಮತ್ತು ಶಾಲಾ ಮುಖ್ಯೋಪಾಧ್ಯಾಯರು & ಸಿಬ್ಬಂದಿಗೆ ನಾನು ಚಿರಋಣಿ...
ಇವತ್ತು ನಡೆಯಲಿರುವ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಕಬಡ್ಡಿ ತಂಡ ಗೆದ್ದು ಬೀಗಲಿ ಎಂದು ಶುಭ ಹಾರೈಸೋಣ...👍
Shankargouda Basapur
GHS Hiremyageri
💐💐💐💐💐💐💐💐💐💐💐💐

No comments:
Post a Comment