Tuesday, September 2, 2025

 ಕಥೆ-854

ಅನಾಥರು ಹಾಗೂ ಬಡವರ ಸೇವೆಗೆ ಬದುಕು ಮುಡಿಪಾಗಿಟ್ಟ -ಮದರ್ ತೆರೇಸಾ.

https://basapurs.blogspot.com


    ಅನಾಥರು, ಬಡವರು, ನಿರ್ಗತಿಕರ ಸೇವೆಯಲ್ಲಿಯೇ ಬದುಕಿನ ಪ್ರೀತಿಯನ್ನು ಕಂಡ ಮಹಾನ್ ಚೇತನ ಮದರ್ ತೆರೇಸಾ.


    ಮದರ್ ತೆರೇಸಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅಸಹಾಯಕರಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಮದರ್ ತೆರೇಸಾ ಜಗತ್ತಿಗೆ ಪ್ರೀತಿ - ವಾತ್ಸಲ್ಯವನ್ನು ಹಂಚಿದವರು. ಮದರ್ ತೆರೇಸಾ ಸುಮಾರು 45 ವರ್ಷಗಳ ಕಾಲ ಬಡವರು, ರೋಗಿಗಳು, ಅನಾಥರು, ಸಂಕಷ್ಟದಲ್ಲಿರುವವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. 1970 ರ ವೇಳೆಗೆ ಇವರು ಒಬ್ಬ ಮಹಾ ಮಾನವತಾವಾದಿಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆರುವಾಸಿಯಾಗಿದ್ದರು.


       "ಮದರ್ ತೆರೇಸಾ ಒಬ್ಬ ಮಹಾ ಮಾನವತಾವಾದಿಯಾಗಿ ಬಡವರ, ನಿರ್ಗತಿಕರ, ರೋಗಿಗಳ, ಅನಾಥರ, ವೃದ್ಧರಿಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಇವರಿಗೆ 1979 ರಲ್ಲಿ ವಿಶ್ವದ ಅತ್ಯುನ್ನತ ಗೌರವ ನೊಬೆಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು". ಮದರ್ ತೆರೇಸಾ ಯುದ್ದಗಳನ್ನು ನಿಲ್ಲಿಸಿದರು. ಅಧ್ಯಕ್ಷರೊಂದಿಗೆ ಸ್ನೇಹ ಸಂಬಂಧವನ್ನು ಬೆಳಸಿಕೊಂಡರು. ಅನಾಥಾಶ್ರಮಗಳ ಸಾಮ್ರಾಜ್ಯವನ್ನು ನಿರ್ಮಿಸಿ ಸೇವೆ ಸಲ್ಲಿಸಿದ ಇವರು, ಅನಾರೋಗ್ಯದಿಂದ ಬಳಲುತ್ತಿದ್ದ ಅನೇಕ ಕೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಮಾಡಿದ್ದರು.

     ಅನಾಥರು, ಬಡವರು, ನಿರ್ಗತಿಕರ ಸೇವೆಯಲ್ಲಿಯೇ ಬದುಕಿನ ಪ್ರೀತಿಯನ್ನು ಕಂಡ ಮಹಾನ್ ಚೇತನ ಮದರ್ ತೆರೇಸಾ. ಇಂದು ಇಂತಹ ಮಾತೃ ಹೃದಯಿ ಮದರ್ ತೆರೇಸಾ *ಆಗಸ್ಟ್ 26, 1910 ರಂದು ಒಟ್ಟೋಮನ್ ಎಂಪೈರ್‌ನ ಊಸ್ಕೂಬ್ ನಗರದಲ್ಲಿ ಜನಿಸಿದರು. ಆಗಸ್ಟ್‌ 26 ರಂದು ಜನಿಸಿದ್ದರೂ ಸಹ ಇವರು ತಾವು ದೀಕ್ಷಾವಿಧಿ ಸ್ವೀಕರಿಸಿದ ಆಗಸ್ಟ್‌ 27 ರ ದಿನಾಂಕವನ್ನೇ ತಮ್ಮ “ನೈಜ ಜನ್ಮ ದಿನಾಂಕ” ಎಂದು ಪರಿಗಣಿಸಿದ್ದರು.* ತೆರೇಸಾ ಅಲ್ಬೇನಿಯಾದ ಸ್ಕೋಡರ್‌ನಗರ ವಾಸಿಗಳಾದ ನಿಕೊಲ್ಲೇ ಮತ್ತು ಡ್ರಾನ ಬೋಜಕ್ಸಿಯು ದಂಪತಿಗಳಿಗೆ ಜನಿಸಿದ ಮಕ್ಕಳಲ್ಲೇ ಅತಿ ಕಿರಿಯಳು. ಮದರ್ ತೆರೇಸಾ ಅವರ ಮೊದಲ ಹೆಸರು ಆಗ್ನೆಸೇ ಗೋನ್‌ಕ್ಸೆ ಬೋಜಕ್ಸಿಯು.


       ಮದರ್ ತೆರೇಸಾ ಎಂಟು ವರ್ಷದವಳಿದ್ದಾಗ ಆಕೆಯನ್ನು ಚರ್ಚ್‌ನಲ್ಲಿ ಸಾಕಲಾಯಿತು. ತನ್ನ ಹನ್ನೆರಡನೇ ವಯಸ್ಸಿನಲ್ಲಿ ಅವರು ಸನ್ಯಾಸಿಯಾಗಲು ನಿರ್ಧರಿಸಿದರು. ಅವರು ತಮ್ಮ 18 ನೇ ವಯಸ್ಸಿನಲ್ಲಿ ಕ್ಯಾಥೋಲಿಕ್ ಸಿಸ್ಟರ್ಸ್‌ ಆಫ್‌ ಲೊರೆಟೊ ಆರ್ಡರ್‌ಗೆ ಸೇರಲು ಡಬ್ಲಿನ್‌ಗೆ ಹೋದರು. ನಂತರ ಒಂದು ವರ್ಷದ ಬಳಿಕ ಅವರು ಶಿಕ್ಷಕರಾಗಲು ಕೊಲ್ಕತ್ತಾಕ್ಕೆ ತೆರಳಿದರು.


     1943 ರ ಬಂಗಾಳದ ಕ್ಷಾಮದಿಂದ ಉಂಟಾದ ದುಃಖ ಮತ್ತು ಸಾವುಗಳ ನೋವುಗಳ ಸಂದರ್ಭದಲ್ಲಿ ಹಲವಾರು ಮೃತದೇಹಗಳು ಬೀದಿಗಳಲ್ಲಿ ಬಿದ್ದುದ್ದನ್ನು ಕಂಡ ಅವರಿಗೆ, ಈ ದೃಶ್ಯಗಳು ಅವರ ಮನಸ್ಸಿನ ಮೇಲೆ ಬಹಳ ಆಳವಾದ ಪ್ರಭಾವ ಬೀರಿದವು. 1950 ರಲ್ಲಿ ಮಿಷನರೀಸ್ ಆಫ್ ಚಾರಿಟಿ ಎಂಬ ಸ್ವಯಂ ಸೇವಾ ಸಂಘವನ್ನು ಕೋಲ್ಕತ್ತಾದಲ್ಲಿ ಸ್ಥಾಪಿಸಿದ ಇವರು, ಸುಮಾರು ನಲ್ವತ್ತೈದು ವರ್ಷಗಳ ಕಾಲ ಜನರ ಸೇವೆಯಲ್ಲಿ ತಮ್ಮನ್ನು ತೊಡಗಿಕೊಂಡಿದ್ದರು. ಈ ಮೂಲಕ ಅನೇಕರ ಬದುಕಿನಲ್ಲಿ ಭರವಸೆಯ ಕಿರಣ ಮೂಡಿಸಿದ್ದರು.


  *ಮದರ್ ತೆರೇಸಾ ಅವರ ಸಂದೇಶಗಳು*

# ನಗುವಿನೊಂದಿಗೆ ಶಾಂತಿ ಪ್ರಾರಂಭವಾಗುತ್ತದೆ.

# ನೀವು ಜನರ ತಪ್ಪುಗಳನ್ನು ಹುಡುಕಲು ಪ್ರಾರಂಭಿಸಿದರೆ, ನೀವು ಯಾರನ್ನೂ ಪ್ರೀತಿಸಲು ಸಾಧ್ಯವಿಲ್ಲ.

# ಒಂಟಿತನ ಮತ್ತು ನಾವು ಯಾರಿಗೂ ಪ್ರೀತಿಪಾತ್ರರಲ್ಲ ಎಂಬ ಭಾವನೆ ಭಯಾನಕ ಚಿ ಬಡತನವಿದ್ದಂತೆ.

# ಜೀವನವು ಪ್ರೀತಿಯಾಗಿದೆ, ಅದನ್ನು ಆನಂದಿಸಿ. ಜೀವನವು ರಹಸ್ಯವಾಗಿದೆ, ಅದನ್ನು ತಿಳಿದುಕೊಳ್ಳಿ. ಜೀವನವು ಒಂದು ಭರವಸೆಯಾಗಿದೆ, ಅದನ್ನು ಪೂರೈಸಿಕೊಳ್ಳಿ.

# ನಿನ್ನೆ ಕಳೆದಿದೆ, ನಾಳೆ ಇನ್ನೂ ಬಂದಿಲ್ಲ, ಈಗ ನಮ್ಮ ಪಾಲಿಗೆ ಇರುವುದು ಈ ದಿನ ಮಾತ್ರ, ಅದನ್ನು ಇಂದು ಪ್ರಾರಂಭಿಸೋಣ.

# ವಿಶ್ವದ ಶಾಂತಿಯನ್ನು ಉತ್ತೇಜಿಸಲು ನೀವೇನು ಮಾಡಬಹುದು..? 

ಮನೆಗೆ ಹೋಗಿ ಮತ್ತು ನಿಮ್ಮ ಕುಟುಂಬವನ್ನು ಪ್ರೀತಿಸಿ.

# ಪ್ರೀತಿ ತನ್ನಷ್ಟಕ್ಕೆ ಉಳಿಯಲು ಸಾಧ್ಯವಿಲ್ಲ. ಪ್ರೀತಿಯನ್ನು ಕ್ರಿಯೆಯ ರೂಪಕ್ಕೆ ತರಬೇಕು ಮತ್ತು ಆ ಕ್ರಿಯೆಯು ಸೇವೆಯಾಗಬೇಕು.

# ಹೊಟ್ಟೆಯ ಹಸಿವಿಗಿಂತ ಪ್ರೀತಿಯ ಹಸಿವನ್ನು ತೆಗೆದು ಹಾಕುವುದು ತುಂಬಾ ಕಷ್ಟ.

# ಪ್ರೀತಿ ಎಂಬುದು ಸರ್ವಋತುವಿನಲ್ಲೂ ಸಿಗುವ ಹಣ್ಣು ಮತ್ತು ಇದು ಎಲ್ಲರ ಕೈಗೆ ಎಟಕುವಂತೆ ಇರುತ್ತದೆ.

# ಸ್ವರ್ಗ ಹೇಗಿರುತ್ತದೆ ಎಂಬುದು ಖಚಿತವಾಗಿ ನನಗೆ ಗೊತ್ತಿಲ್ಲ. ಆದರೆ, ನಾವು ಮೃತಪಟ್ಟಾಗ ಮತ್ತು ದೇವರು ನಮ್ಮ ಬಗ್ಗೆ ನಿರ್ಣಯ ತೆಗೆದುಕೊಳ್ಳುವಾಗ, ನಿಮ್ಮ ಜೀವನದಲ್ಲಿ ನೀವೆಷ್ಟು ಒಳ್ಳೆಯ ಕೆಲಸ ಮಾಡಿದ್ದೀರಿ' ಎಂದು ಕೇಳುವುದಿಲ್ಲ, ಬದಲಾಗಿ ನೀವು ಮಾಡಿದ ಕಾರ್ಯಕ್ಕೆ ನೀವು ಪ್ರೀತಿ ನೀಡಿದ್ದೀರಿ ಎಂದು ಕೇಳುತ್ತಾನೆ ಎಂದು ನನಗೆ ತಿಳಿದಿದೆ.


 *ಪ್ರಶಸ್ತಿ / ಗೌರವ / ಪುರಸ್ಕಾರ* :

 # ಮದರ್‌ ತೆರೇಸಾ ಒಬ್ಬ ಮಹಾ ಮಾನವತಾವಾದಿಯಾಗಿ ಬಡವರ, ನಿರ್ಗತಿಕರ, ರೋಗಿಗಳ, ಅನಾಥರ, ವೃದ್ಧರ ಪರವಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಇವರಿಗೆ ವಿಶ್ವದ ಅತ್ಯುನ್ನತ ನೊಬೆಲ್‌ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

 # ಮದರ್‌ ತೆರೇಸಾರ ಪರಮಪದ ಪ್ರಾಪ್ತಿ ಮತ್ತು ಸಂತ ಪದ ಗ್ರಹಣ ಪ್ರಕ್ರಿಯೆಯಲ್ಲಿ ಸಾಕ್ಷಿಯಾಗಿ ಭಾಗಿಯಾಗಲು ವ್ಯಾಟಿಕನ್‌ ಕ್ರಿಸ್ಟೋಫರ್‌ ಹಿಚೆನ್ಸ್‌ ಅವರನ್ನು ಆಹ್ವಾನಿಸಿತ್ತು.

  # ಯುನೈಟೆಡ್‌ ಸ್ಟೇಟ್ಸ್‌ 1996 ರ ನವೆಂಬರ್‌ 16 ರಂದು ಇವರಿಗೆ ಗೌರವ ಪೌರತ್ವ ನೀಡಿತು.

 # ಮದರ್‌ ತೆರೇಸಾರ ಮಾತೃ ಭೂಮಿಯಾದ ಅಲ್ಬೇನಿಯಾ ಇವರಿಗೆ 1994 ರಲ್ಲಿ ಗೋಲ್ಡನ್‌ ಆನರ್‌ ಆಫ್ ದಿ ನೇಷನ್‌ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿತು.

  # ಮದರ್‌ ತೆರೇಸಾರಿಗೆ 1962 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಭಾರತ ಸರ್ಕಾರ ತನ್ನ ಗೌರವ ಸಲ್ಲಿಸಿತು.

  # ಅಂತಾರಾಷ್ಟ್ರೀಯ ಸಂವೇದನಾ ಶೀಲತೆಗೆ 1972 ರಲ್ಲಿ ಜವಾಹರಲಾಲ್‌ ನೆಹರು ಪ್ರಶಸ್ತಿ,

1980 ರಲ್ಲಿ ಭಾರತದ ಅತ್ಯುನ್ನತ ಪೌರ ಪ್ರಶಸ್ತಿಯಾದ ಭಾರತ ರತ್ನ ಇವರ ಪಾಲಾದವು.

  # ಇವರ ಅಂತರಾಷ್ಟ್ರೀಯ ಅರಿವು ಹಾಗೂ ದಕ್ಷಿಣ ಮತ್ತು ಪೂರ್ವ ಏಷ್ಯಾದಲ್ಲಿ ಸಲ್ಲಿಸಿದ ಸೇವೆಗೆ ಫಿಲಿಪ್ಪೈನ್ಸ್ ಮೂಲದ ರಾಮನ್‌ ಮ್ಯಾಗ್ಸೆಸೆ ಪ್ರಶಸ್ತಿ 1962 ರಲ್ಲಿ ಇವರ ಮುಡಿಗೇರಿತು

1980 ರ ನಂತರ, ಮದರ್ ತೆರೇಸಾ ಅವರು ಎರಡು ಹೃದಯ ಸ್ತಂಭನ ಸೇರಿದಂತೆ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಿದರು. ಅವರ ಆರೋಗ್ಯ ಸಮಸ್ಯೆಗಳ ಹೊರತಾಗಿಯೂ, ತಾಯಿಯು ಮಿಷನರೀಸ್ ಆಫ್ ಚಾರಿಟಿ ಮತ್ತು ಅದರ ಶಾಖೆಗಳನ್ನು ಚಿ ಮೊದಲಿನಂತೆಯೇ ಸಮರ್ಥವಾಗಿ ನಿರ್ವಹಿಸುತ್ತಿದ್ದರು. ಏಪ್ರಿಲ್ 1996 ರಲ್ಲಿ, ಮದರ್ ತೆರೇಸಾ ಬಿದ್ದು ಅವರ ಕಾಲು ಮೂಳೆ ಮುರಿಯಿತು. ಅದರ ನಂತರ, ತಾಯಿಯ ಆರೋಗ್ಯವು ಕ್ಷೀಣಿಸಲು ಪ್ರಾರಂಭಿಸಿತು ಮತ್ತು ಸೆಪ್ಟೆಂಬರ್ 5, 1997 ರಂದು ಅವರು ಸ್ವರ್ಗೀಯ ನಿವಾಸಕ್ಕೆ ತೆರಳಿದರು.


   ಕೃಪೆ- ಡೈಲಿ ಹಂಟ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು