ಕಥೆ-880
ಸದ್ಯದ ಪೀಳಿಗೆಯ ಬಗ್ಗೆ ಚಿಂತನೆ. (ಭಾಗ-1)
ಸದ್ಯ ಗಮನ ಸೆಳೆಯುವ ' ಪೀಳಿಗೆಯ ನಡವಳಿಕೆಗೆ ಸಂಕುಚಿತ ಭಾವನೆ ಮೂಡುತ್ತದೆ.. ಇದು ತಮ್ಮ ಉತ್ಸಾಹ, ಪ್ರತಿಭೆ ಮತ್ತು ಔದಾರ್ಯವನ್ನು ಸ್ವಯಂ ಸೇವಿಸಲು ಸಿದ್ಧರಿರುವ ಯುವ ಪೀಳಿಗೆಯಾಗಿದೆ. ಈ ಯುವಕರು 'ಸಾಮಾಜಿಕ' ಮತ್ತು ಪ್ರಬುದ್ಧ 'ಡಿಜಿಟಲ್' ಆಗಿ ಬೆಳೆದಿದ್ದಾರೆ. ಅವರಿಗೆ ಹಿಂದಿನ ತಲೆಮಾರುಗಳು ಅನುಸರಿಸುತ್ತಿದ್ದ ಸಾಂಪ್ರದಾಯಿಕ ಸಂಭಾಷಣೆ & ಪ್ರದೇಶಗಳ ಬಗ್ಗೆ ಯಾವುದೇ ಪರಿಕಲ್ಪನೆ ಇಲ್ಲ.
ವಿದ್ಯಾರ್ಥಿಗಳ ನಡೆ ನುಡಿ ಬಗ್ಗೆ ಎಷ್ಟೇ ಎಚ್ಚರಿಕೆ ನೀಡಿದರೂ ಅವರ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ, ಶಿಕ್ಷಕರು ನೋಡುತ್ತಾ, ಏನು ಮಾಡಲಾಗದ ಸ್ಥಿತಿಯಲ್ಲಿದ್ದಾರೆ.
ತಂದೆ ತಾಯಿಗಳಿಗೆ ಮಕ್ಕಳ ಮೇಲಿನ ಅತಿಯಾದ ಪ್ರೀತಿ.. ಅಲ್ಲದೆ ಅವರ ಮೇಲಿನ ಗಮನ, ನಿಯಂತ್ರಣ, ಕಡಿಮೆಯಾಗಿದ್ದರ ಪರಿಣಾಮ ಈ ರೀತಿ ಬೆಳೆದು ಬರುತ್ತಿದ್ದಾರೆ,
ಮಕ್ಕಳಿಗೆ ಕೇವಲ ಶಿಸ್ತು ಮಾತುಗಳಿಂದ ಹೇಳಿದರೆ ತಿಳುವಳಿಕೆ ಬಾರದು, ಸ್ವಲ್ಪ ಮಟ್ಟಿಗೆ ಶಿಕ್ಷೆ, ಭಯ, ಭಕ್ತಿಯಿಂದ ಮಾತ್ರ ಬದಲಾವಣೆ ಸಾಧ್ಯ ಎಂಬುದು ಹಲವರ ವಾದ..
ಮಕ್ಕಳಿಗೆ ಶಾಲೆಯಲ್ಲಿ ಭಯವಿಲ್ಲ, ಮನೆಗೆ ಹೋದರೂ ಭಯವಿಲ್ಲ, ಆದ್ದರಿಂದಲೇ ಸಮಾಜ ಇಂದು ಭಯಭೀತವಾಗುತ್ತಿದೆ.
ಆ ಹುಡುಗರೆ ಇಂದಿನ ರೌಡಿಗಳಾಗಿ, ಜನರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಅವರ ನಡವಳಿಕೆಯಿಂದ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆ ನಂತರ ಪೋಲಿಸರ ಕೈಗೆ ಸಿಕ್ಕಿ ನ್ಯಾಯಾಲಯದಲ್ಲಿ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ,
ಇಂದಿನ ಪೋಷಕರು ಬೈಬೇಡಿ, ಶಿಕ್ಷೆ ನೀಡಬೇಡಿ.. ಶಾಲೆಗೆ ಬಾರದವನನ್ನು ಯಾಕೆ ಬರುವುದಿಲ್ಲ ಎಂದು ಕೇಳಬೇಡಿ! ಎನ್ನುತ್ತಿದ್ದಾರೆ,
ಶಿಕ್ಷಕರೇನು ಹೊಡೆಯಲು ಮಾತ್ರ ಇಷ್ಟಪಡುವವರಲ್ಲಾ.
ಅವರಿಗೂ ಮನಸ್ಸಿದೆ. ಪ್ರೀತಿಯಿದೆ. ಅವರಿಗೂ ಮಕ್ಕಳು, ಮೊಮ್ಮಕ್ಕಳು ಇದ್ದಾರೆ. ಆದರೆ ಅವರು ಬಯಸುವುದು ನಿಮ್ಮ ಮಕ್ಕಳ ಕಲಿಕೆಯನ್ನು ಮಾತ್ರ.
ಇವತ್ತಿನ ಓದು ಓದು ಎನ್ನುವ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಮೌಲ್ಯಗಳನ್ನು ಹೇಳೋದನ್ನೆ ಮರೆಯುತ್ತಿದ್ದೇವೆ.. ಹೀಗಾಗಿ ನಮ್ಮ ಮಕ್ಕಳಲ್ಲಿ ಸಂಸ್ಕಾರ ಬರಲು ಹೇಗೆ ಸಾಧ್ಯ,?
3ನೇ ತರಗತಿಯಿಂದಲೇ ವಿಚಿತ್ರ ಹೇರ್ ಸ್ಟೈಲ್, ಕತ್ತರಿಸಿದ ಜೀನ್ಸ್ ಪ್ಯಾಂಟ್, ಗೋಡೆಗಳ ಮೇಲೆ, ಕಟ್ಟೆಗಳ ಮೇಲೆ, ಕುಳಿತು ಹೋಗುವವರನ್ನು ಬರುವವರನ್ನು ಟೀಕೆ ಮಾಡುವ ಮನಸ್ಥಿತಿ (ಅದು ಜನ್ಮ ಕೊಟ್ಟ ತಂದೆ- ತಾಯಿ ಇರಬಹುದು ಕಲಿಸಿದ ಗುರುಗಳು ಇರಬಹುದು)
ಕೆಲವು ಪೋಷಕರು ನಮ್ಮ ಮಗು ಓದದಿದ್ದರೂ ಪರವಾಗಿಲ್ಲ, ಆದರೆ ಶಿಕ್ಷಕರು ಬೈಬಾರದು ಹೊಡೆಯಬಾರದು, ಎಂದು ಹೇಳುತ್ತಿರುವುದು ಸಮಾಜದ ದುರಂತವೆ ಸರಿ, !!
ಶಾಲೆಯಲ್ಲಿ ತಪ್ಪು ಮಾಡಿದರೂ ಶಿಕ್ಷೆ ಕೊಡಬಾರದು, ಬೈ ಬಾರದು, ಕನಿಷ್ಠ ಪಕ್ಷ ಗಂಭೀರವಾಗಿ ಮನದಟ್ಟು ಮಾಡಬಾರದು, ಸ್ನೇಹ ಪೂರ್ವಕವಾಗಿ ಹೇಳಬೇಕು ಎಂದು ಈಗಿನ ಪೋಷಕರು ಪ್ರತಿಪಾದನೆ..
ದಂಡನೆಯಿಲ್ಲದ ಶಿಕ್ಷಣ ಫಲಕಾರಿಯಾಗುವುದೇ? ಸಮಾಜ ಕೂಡ ಹಾಗೆ ಮಾಡುತ್ತದೆಯೇ?
ಮುಂದುವರೆಯುವುದು....
No comments:
Post a Comment