Monday, September 22, 2025

 ಕಥೆ-881

ಸದ್ಯದ ಪೀಳಿಗೆಯ ಬಗ್ಗೆ ಚಿಂತನೆ. (ಭಾಗ-2)

https://basapurs.blogspot.com/


ಪೋಷಕರೆ ಗಮನಿಸಿ ಮಕ್ಕಳ ಆಟ್ಟಿಟ್ಯೂಡ್ ಬದಲಾಗ್ತಾಯಿದೆ..

ಮಕ್ಕಳ ವರ್ತನೆಯನ್ನು ಬದಲಾಯಿಸಲು ಶಿಕ್ಷಕರು ಮುಖ್ಯ ಪಾತ್ರವಹಿಸುತ್ತಾರೆ, ಕೆಲವು ಶಿಕ್ಷಕರ ತಪ್ಪಿಗಾಗಿ ಎಲ್ಲಾ ಶಿಕ್ಷಕರನ್ನು ಅಪಮಾನಿಸಬೇಡಿ, ಪ್ರತಿ ಸಣ್ಣ ತಪ್ಪಿಗೂ ಶಿಕ್ಷಕರ ಮೇಲೆ ಆರೋಪ ಮಾಡಬೇಡಿ, ಶಿಕ್ಷಕರು ಮಕ್ಕಳ ಉತ್ತಮ ಭವಿಷ್ಯವನ್ನು ಬಯಸುತ್ತಾರೆ, ನಾವು ಓದುತ್ತಿದ್ದಾಗ ಕೆಲವು ಶಿಕ್ಷಕರು ನಮ್ಮನ್ನು ಬೈದಿದ್ದಾರೆ, ಹೊಡೆದಿದ್ದಾರೆ,ಆದರೆ ನಮ್ಮ ಪೋಷಕರು ಶಾಲೆಗೆ ಬಂದು ಶಿಕ್ಷಕರನ್ನು ಪ್ರಶ್ನೆ ಮಾಡಲಿಲ್ಲ, ಅವರು ನಮ್ಮ ಕಲ್ಯಾಣವನ್ನು ಮಾತ್ರ ಗಮನಿಸುತ್ತಿದ್ದರು,


ಮೊದಲು ಪೋಷಕರು ಗುರುವಿನ ಮಹತ್ವವನ್ನು ಮಕ್ಕಳಿಗೆ ಮನದಟ್ಟಾಗುವಂತೆ ಮಾಡಬೇಕು, ಮಕ್ಕಳ ಭ್ರಷ್ಟತೆಯ 60% ರಷ್ಟು ಕಾರಣ ಸ್ನೇಹಿತರು, ಮೊಬೈಲ್, ಮೀಡಿಯಾ , ಇನ್ನು ಉಳಿದ 40% ಪೋಷಕರು, ಅತಿಯಾದ ಮಮತೆ, ಅಜ್ಞಾನ, ಮೂಢನಂಬಿಕೆ, ಮಕ್ಕಳಿಗೆ ಹಾನಿ ಮಾಡುತ್ತವೆ.. ಮಕ್ಕಳ ಮನಸ್ಥಿತಿ ಬದಲಾಗಬೇಕಿದೆ... ಮಕ್ಕಳ ಅಭಿವೃದ್ಧಿಗಾಗಿ ಎಷ್ಟೋ ಪಾಲಕರು ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆ... ಪಾಲಕರ ಶ್ರಮ ಮಕ್ಕಳಿಗೆ ಅರ್ಥವಾಗಬೇಕಿದೆ... ಮಕ್ಕಳಿಗೆ ವಸ್ತುಗಳ ಮೌಲ್ಯ ತಿಳಿಯಬೇಕಿದೆ.. 

 

ಮಕ್ಕಳ ಇಂದಿನ ದಿನಗಳು ಹೀಗಿವೆ.


ಪೋಷಕರು ಕಾರು, ಬೈಕ್‌, ಶುಚಿ ಗೊಳಿಸಿ ಎಂದರೆ ತೊಳೆಯುವುದಿಲ್ಲ,

ದನ ಕರುಗಳಂತೂ ಇಲ್ಲವೇ ಇಲ್ಲ. ಸಗಣಿ ಮುಟ್ಟಲ್ಲ.


ವಸ್ತು ತರಲು ಅಂಗಡಿಗೆ ಹೋಗಿ ಬರಲು ಸಿದ್ದರಿಲ್ಲ,


ಶಾಲಾ ಪೆನ್, ಬ್ಯಾಗ್‌ ಸರಿಯಾಗಿ ಇಡುವುದಿಲ್ಲ,


ಮನೆಗೆ ಸಹಾಯ ಮಾಡಲು ಉತ್ಸಾಹವಿಲ್ಲ,


ರಾತ್ರಿ 10 ರೊಳಗೆ ಮಲಗುವುದಿಲ್ಲ, ಬೆಳಿಗ್ಗೆ 6 ರಿಂದ 7 ರೊಳಗೆ ಎಳುವುದಿಲ್ಲ,


ಗಂಭೀರವಾಗಿ ಮಾತನಾಡಿದರೆ ಎದರಿಸುತ್ತಾರೆ,


ಬೈದರೆ ವಸ್ತುಗಳನ್ನು ಎಸೆದು ಬಿಡುತ್ತಾರೆ,


ಹಣ ಕೊಟ್ಟರೆ ದುರುಪಯೋಗ ಮಾಡಿಕೊಳ್ಳುತ್ತಾರೆ ( ಅನಾರೋಗ್ಯಕರ ತಿಂಡಿ ತಿನಿಸುಗಳನ್ನು ತಿನ್ನುತ್ತಾರೆ, ಮೋಜು ಮಸ್ತಿ ಅಂತ ಖರ್ಚು ಮಾಡುತ್ತಾರೆ)


ಅಪ್ರಾಪ್ತ ಮಕ್ಕಳು ಬೈಕ್ ಓಡಿಸುತ್ತಾರೆ, ಅಪಘಾತಕ್ಕೀಡಾಗುತ್ತಾರೆ, ಕೇಸಿನಲ್ಲಿ ಸಿಕ್ಕಿ ಬೀಳುತ್ತಾರೆ,


ಹುಡುಗಿಯರು ದಿನನಿತ್ಯದ ಕಾರ್ಯಗಳನ್ನು ನಿರ್ವಹಿಸುವುದಿಲ್ಲ,


ಅತಿಥಿಗಳು ಮನೆಗೆ ಬಂದಾಗ ಒಂದು ಲೋಟ 1 ನೀರನ್ನು ಕೊಡಲು ಮನಸ್ಸಿಲ್ಲ, ನಮ್ಮ ಸಂಬಂಧಿಕರೊಡನೆ ಪ್ರೀತಿಯಿಂದ ಮಾತನಾಡುತ್ತಿಲ್ಲ.

ಹಾಯ್ ಅಂಕಲ್ 

ಹಾಯ್ ಆಂಟಿ ಅಷ್ಟಕ್ಕೇ ಸೀಮಿತ.


ಹೆಣ್ಣುಮಕ್ಕಳಿಗೆ ಅಡುಗೆ ಮಾಡಲು ಬರುವುದಿಲ್ಲ,


ಸರಿಯಾಗಿ ಉಡುಗೆ ಉಡಿಸುವುದು ಸವಾಲಾಗಿದೆ,


ಪ್ಯಾಷನ್, ಟ್ರೆಂಡ್, ತಂತ್ರಜ್ಞಾನ, ಎಲ್ಲವೂ ಅವ್ಯವಸ್ಥಿತ,


ಈ ಎಲ್ಲದಕ್ಕೂ ಕಾರಣ ನಾವುಗಳು, ನಮ್ಮ ಗರ್ವ, ಮಾನ, ಮರ್ಯಾದೆ ಮತ್ತು ಪ್ರಭಾವಗಳನ್ನು ಮಕ್ಕಳಿಗೆ ಜೀವನ ಪಾಠ ಕಲಿಸುತ್ತಿಲ್ಲ,


ಕಷ್ಟ ಅನುಭವಿಸದವರು, ಜೀವನದ ಮೌಲ್ಯವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ..


ಇಂದಿನ ಯುವಕರು 15 ನೇ ವಯಸ್ಸಿಗೆ ಪ್ರೇಮಕತೆ, ಧೂಮಪಾನ, ಮದ್ಯಪಾನ, ಜೂಜು, ಡ್ರಗ್ಸ್‌, ಇನ್ನು ಮುಂತಾದ ಅಪರಾಧಗಳಲ್ಲಿ ಭಾಗಿಯಾಗುತ್ತಿದ್ದಾರೆ, ಜೊತೆಗೆ ಸೋಮಾರಿತನಗಳಾಗಿ ಜೀವನದ ಗುರಿ ಇಲ್ಲದೆ ತಿರುಗುತ್ತಿದ್ದಾರೆ,


ಮಕ್ಕಳ ಜೀವನದ ಭದ್ರತೆ ನಮ್ಮೆಲ್ಲರ ಹೊಣೆಯಾಗಿದೆ, ನಾವು ಎಚ್ಚರ ವಹಿಸದಿದ್ದರೆ, ಭವಿಷ್ಯದ ಪೀಳಿಗೆಯು ನಾಶವಾಗುತ್ತದೆ, ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಜೀವನಕ್ಕಾಗಿ ನಾವು ಬದಲಾಗಬೇಕು,ಮತ್ತು ಬದಲಾಯಿಸಬೇಕು.


ಇಲ್ಲದಿರೆ ಮುಂದಿನ ದಿನಗಳಲ್ಲಿ ನಮ್ಮ ಪೀಳಿಗೆ ತುಂಬಾ ದುರಂತವನ್ನು ನೋಡ ಬೇಕಾಗಬಹುದು.

ಎಚ್ಚರ ಎಚ್ಚರ ಎಚ್ಚರ.


" ಗುರುವನ್ನು ಗೌರವಿಸದ ಸಮಾಜ ನಾಶವಾಗುತ್ತದೆ" 

 

ಪಾಲಕರಾದ ನಾವು ಬದಲಾಗೋಣ ಮಕ್ಕಳನ್ನು ಬದಲಾಯಿಸೋಣ...


ಮಕ್ಕಳು ಬದಲಾವಣೆಯಾಗುತ್ತಾರೆ ಇಲ್ಲವೆ ಸಮಾಜವನ್ನು ಉತ್ತಮ ರೀತಿಯಲ್ಲಿ ಬದಲಾಯಿಸುತ್ತಾರೆ, ಎಂಬ ನಂಬಿಕೆ,

-ಮಕ್ಕಳ ಬದಲಾವಣೆ ಬಯಸುವ ಶಿಕ್ಷಕ ಬಳಗ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು