Monday, September 22, 2025

 ಕಥೆ-882

ಮಕ್ಕಳು ಕಲಿಸುವ ಮೂರು ಪಾಠಗಳು


ನಾವು ಜೀವನದಿಂದ ಪಾಠ ಕಲಿಯುತ್ತೇವೆ. ಅನುಭವದಿಂದ ಕಲಿಯುತ್ತೇವೆ. ಹಿರಿಯರಿಂದ, ಸಾಧಕರಿಂದ, ಶಿಕ್ಷಕರಿಂದ ... ಹೀಗೆ ಎಲ್ಲರಿಂದಲೂ ಜೀವನ ಪೂರ್ತಿ ಪಾಠ ಕಲಿಯುತ್ತಲೇ ಇರುತ್ತೇವೆ.ಕಲಿಯುವುದನ್ನು ಯಾವುತ್ತೂ ನಿಲ್ಲಿಸಬೇಡ ಎಂದು ತಲತಲಾಂತರದಿಂದ ಕೇಳುತ್ತಲೇ ಬಂದಿರುವುದರಿಂದ ಎಷ್ಟು ಕಲಿತರೂ ಮುಗಿಯುವುದೇ ಇಲ್ಲ. ಕಲಿಯುವುದನ್ನು ನಿಲ್ಲಿಸಿಬಿಟ್ಟರೆ ನಾವು ಮುದುಕರಾಗಿ ಬಿಡುತ್ತೇವೆ ಎಂಬ ವಿಷಯ ನಮ್ಮ ತಲೆಯಲ್ಲಿ ಆಳವಾಗಿ ಬೇರೂರಿರುವುದರಿಂದ ನಾವು ಒಂದಲ್ಲ ಒಂದು ಪ್ರಯತ್ನಿಸುತ್ತಿರುತ್ತೇವೆ. ಆದರೆ, ಯಾವತ್ತಾದರೂ ಮಕ್ಕಳಿಂದಲೂ ಪಾಠ ಕಲಿಯುವುದಿದೆ ಎಂದು `ಯೋಚಿಸಿದ್ದೇವಾ? : ಬಹಳಷ್ಟು ಜನ ತಮಗಿಂತ ಕಿರಿಯರಿಗಿಂತ ಏನನ್ನೋ ಕಲಿಯುವುದಕ್ಕೆ ಬಯಸುವುದಿಲ್ಲ. ಅದೊಂದು ಅಪಮಾನ 


ಮೊದಲನೆಯದಾಗಿ, ಯಾವುದೇ ಕಾರಣವಿಲ್ಲದೆ ಸದಾ ಸಂತೋಷವಾಗಿರುವುದು. 


ಎರಡನೆಯದಾಗಿ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಮತ್ತು 


ಮೂರನೆಯದಾಗಿ ತನಗೆ ಅನಿಸಿದ್ದನ್ನು ಹಠ ಹಿಡಿದು ಮಾಡುವುದು. 


ನಾವೆಲ್ಲರೂ ಮಕ್ಕಳಾಗಿದ್ದಾಗಿ ಇವೆಲ್ಲಾ ಮಾಡಿರುತ್ತೇವೆ. ಆದರೆ, ದೊಡ್ಡವರಾಗುತ್ತಿದ್ದಂತೆಯೇ ಬದಲಾಗುತ್ತೇವೆ. ಆಗ ಅವೆಲ್ಲ ಮಕ್ಕಳಾಟ ಎಂದನಿಸುತ್ತದೆ. ಕೊನೆಗೆ ಒಂದು ಹಂತದಲ್ಲಿ, ಮಕ್ಕಳು ಮಾಡುವುದೇ ಸರಿ ಎಂದನಿಸುವುದಷ್ಟೇ ಅಲ್ಲ, ಜೀವನದಲ್ಲಿ ಸಂತೋಷವಾಗಿರುವ ರಹಸ್ಯವನ್ನು ಮತ್ತೆ ಮಕ್ಕಳಿಂದಲೇ ಕಲಿಯಬೇಕಾಗುತ್ತದೆ. ಹಾಗಾಗಿ, ಎಷ್ಟೇ ದೊಡ್ಡವರಾದರೂ ಮಕ್ಕಳಂತೆ ಇರಬೇಕೆನಿಸುತ್ತದೆ. ಸತ್ಯನಿಷ್ಠರಾಗಿ, ಪ್ರಾಮಾಣಿಕವಾಗಿ ಮತ್ತು ಕರುಣಾಮಯಿಯಾಗಿ ಮಕ್ಕಳಂತೆ ಇದ್ದರೆ ಎಷ್ಟು ಚೆಂದ...

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು