ಕಥೆ-890
ಚೆನ್ನಾಗಿರುವುದರ ಕಡೆ ಗಮನ...
ಸಿದ್ದೇಶ್ವರ ಸ್ವಾಮೀಜಿ ಅವರು ಒಮ್ಮೆ ಒಂದು ಪ್ರವಚನ ಮುಗಿಸಿ ವೇದಿಕೆಯಿಂದ ಕೆಳಗೆ ಇಳಿಯುತ್ತಿದ್ದರಂತೆ. ಆಗ ಅವರ ಅಂಗಿಯ ಕಾಲರ್ ಭಾಗದಲ್ಲಿ ಚೂರು ಹರಿದಿದ್ದನ್ನು ಒಬ್ಬರು ಗಮನಿಸಿದರಂತೆ. ಗಮನಿಸಿದ ಆ ವ್ಯಕ್ತಿ ಸಿದ್ದೇಶ್ವರ ಸ್ವಾಮೀಜಿ ಅವರಿಗೆ, 'ಅಪ್ಪಾರ, ನಿಮ್ಮ ಅಂಗಿ ಚೂರು ಹರಿದೈತಿ. ಹೊಸಾದು ತಗೊಳೋನೇನು?' ಸ್ವಾಮೀಜಿಯವರು, ', ಅಂಗಿಯಲ್ಲಿ ಇಷ್ಟೆಲ್ಲಾ ಚೊಲೋ ಇರೋದೈತಿ. ನೀ ಮಾತ್ರ ಅದ್ಯಾಕ ಹರಿದ ಅಷ್ಟು ಸಣ್ಣ ಭಾಗ ಮಾತ್ರ ನೋಡ್ತಿ?' ಎಂದು ಪ್ರಶ್ನೆ ಮಾಡಿ ನಕ್ಕರಂತೆ. ಎಲ್ಲರ ಜೀವನದಲ್ಲೂ ಹೀಗೇ ಆಗುವುದಲ್ಲವೇ? ಇಡೀ ಹಾಳೆ ಬಿಳಿಯಾಗಿದ್ದರೂ ಅದರಲ್ಲಿನ ಒಂದು ಕಲೆಯ ಮೇಲೆ ನಮ್ಮ ಗಮನವಿರುತ್ತದೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಒಂದು ಸಣ್ಣ ಲೋಪವಿದ್ದರೆ ಅದನ್ನೇ ಗಮನಿಸುತ್ತೇವೆ. ಅವರಲ್ಲಿರುವ ಎಷ್ಟೋ ಒಳ್ಳೆಯ ಗುಣಗಳನ್ನು ಗಮನಿಸದೇ ಇದ್ದುಬಿಡುತ್ತೇವೆ. ಚೆನ್ನಾಗಿರುವ ಅಂಶಗಳನ್ನು ನೋಡುವ, ಅವುಗಳನ್ನು ಗುರುತಿಸುವ ದೃಷ್ಟಿಯನ್ನು ನಾವು ಬೆಳೆಸಿಕೊಳ್ಳೋಣ. ಏಕೆಂದರೆ ನಮ್ಮ ದೃಷ್ಟಿ ಬದಲಾದರೆ ಇಡೀ ಜಗತ್ತೇ ಸುಂದರವಾಗಿ ಕಾಣುತ್ತದೆ. ನಮ್ಮನ್ನು ನಾವು ತಿದ್ದಿಕೊಳ್ಳುವುದಕ್ಕಿಂತ ದೊಡ್ಡ ಕಾರ್ಯ ಇನ್ನೊಂದಿಲ್ಲ.
-ರವಿ ಡಿ ಚೆನ್ನಣ್ಣನವರ್
No comments:
Post a Comment