Thursday, September 25, 2025

 ಕಥೆ-885

ಅಂದುಕೊಂಡಿರುವುದು ಆಗದಿದ್ದರೆ ಪರವಾಗಿಲ್ಲ


ಜೀವನದಲ್ಲಿ ದೊಡ್ಡ ದೊಡ್ಡ ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳಬಹುದು. ಅದಕ್ಕೆ ತಕ್ಕಂತೆ ಕೆಲಸ ಮಾಡಬಹುದು. ಒಂದು ಹಂತದವರೆಗೆ ಎಲ್ಲವೂ ಅಂದುಕೊಂಡಂತೆ ಆಗಬಹುದು. ಆಗ ಸಹಜವಾಗಿ ಖುಷಿಯಾಗುತ್ತದೆ. ಆದರೆ, ಅಂದುಕೊಂಡಂತೆ ಆಗದಿದ್ದರೆ? ಆಗ ಏನು ಕಥೆ? ಈ ಪ್ರಶ್ನೆಗೆ ಉತ್ತರ ಎಂದರೆ, ನನ್ನ ತಂದೆ ಹೇಳಿದ ಮಾತು ಸದಾ ನೆನಪಿಗೆ ಬರುತ್ತದೆ. 'ಎಲ್ಲವೂ ಅಂದುಕೊಂಡಂತೆ ನಡೆದರೆ ಒಳ್ಳೆಯದು. ಅಕಸ್ಮಾತ್ ಅಂದುಕೊಂಡಂತೆ ನಡೆಯದಿದ್ದರೆ ಇನ್ನೂ ಒಳ್ಳೆಯದು'. ಹೀಗಾಗಬೇಕು ಎಂದು. ನಮ್ಮದೊಂದು ಕಲ್ಪನೆ ಇರುತ್ತದೆ. ಅದರಂತೆ ಎಲ್ಲವೂ ನಡೆದರೆ ಒಳ್ಳೆಯದು. ಆದರೆ ಅದರಂತೆ ನಡೆಯದೇ ಇದ್ದರೆ ಅಲ್ಲಿ ಇನ್ನೊಂದು ಯಾವುದೋ ದಿವ್ಯ ಶಕ್ತಿ ಅಲ್ಲಿ ಕೆಲಸ ಮಾಡುತ್ತಿದೆ ಎಂದರ್ಥ. ಆ ದಿವ್ಯ ಶಕ್ತಿ ಎಂದಿಗೂ ನಮಗೆ ಒಳಿತನ್ನು ಬಯಸುತ್ತದೆ. ಎಂದಿಗೂ ಕೆಡುಕಾಗಲಿ ಎಂದು ಯೋಚಿಸುವುದಿಲ್ಲ. ಆದ್ದರಿಂದ ಒಳ್ಳೆಯದೇ ಆಗುವುದರಿಂದ ಆ ಶಕ್ತಿಯ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು. ಒಂದು ಅವಕಾಶ ಕೈ ತಪ್ಪಿ ಹೋದರೆ ಚಿಂತಿಸುವ ಅವಶ್ಯಕತೆ ಇಲ್ಲ. ಕೊರಗಬೇಕಾಗಿಲ್ಲ, ಏಕೆಂದರೆ, ಆ ಅವಕಾಶ ಕೈ ತಪ್ಪಿದೆ ಎಂದರೆ ಅದು ದೈವೇಚ್ಛೆ ಆಗಿರುತ್ತದೆ. ಮುಂದೆ ಅದಕ್ಕಿಂತಲೂ ಉತ್ತಮ ಅವಕಾಶ ಒದಗಿ ಬರಬಹುದು.

-ಅಮಿತಾ ಬಚ್ಚನ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು