ಕಥೆ-859
ಚಲನೆ ಕ್ರಿಯಾಶೀಲತೆ ಬದಲಾವಣೆ
https://basapurs.blogspot.com
ಬೆಳಿಗ್ಗೆ ಅರಳಿದ ಹೂವು ಮಧ್ಯಾಹ್ನ ಬಾಡುತ್ತದೆ. ಸಂಜೆ ನೆಲಕ್ಕೆ ಉರುಳುತ್ತದೆ, ಮರುದಿನ ಮಣ್ಣಲ್ಲಿ ಬೆರೆತು ಮರೆಯಾಗಿ ಹೋಗುತ್ತದೆ. ಹಾಗೇ ಇಂದು ಜನಿಸಿದ ಮಗು ಬೆಳೆದು ಬಾಲಕನಾಗುತ್ತಾನೆ, ಯುವಕನಾಗುತ್ತಾನೆ, ಮುದುಕನಾಗುತ್ತಾನೆ. ಕೊನೆಗೆ ಒಂದು ದಿನ,ಈ ಜಗತ್ತನ್ನೆ ತೊರೆದು, ಬಯಲಲ್ಲಿ ಬೆರೆತು, ಬಯಲಾಗಿ ಹೋಗುತ್ತಾನೆ. ಅಷ್ಟೇ ಅಲ್ಲ ಬದುಕಿರುವವರೆಗೂ ಮನೆಯಿಂದ ಮನೆಗೆ ಊರಿಂದೂರಿಗೆ ದೇಶದಿಂದ ದೇಶಕ್ಕೆ ಅಲೆದಾಡುತ್ತಲೆ ಇರುತ್ತಾನೆ. ಈ ಚಲನೆಯು
ಜೀವನದ ಸುಲಕ್ಷಣವಾಗಿದೆ.
ನಾವಿರುವ ಈ ಭೂಮಿಯು ಸ್ಥಿರವಾಗಿರುವಂತೆ ಕಾಣುತ್ತದೆ.
ಆದರೆ ಭೂಮಿಯಿಂದ ದೂರ ಹೋಗಿ ನಿಂತು ನೋಡಿದರೆ, ಈ ಭೂಮಿಯು ತಿರುಗುವುದು ತಿಳಿಯುತ್ತದೆ. ಭೂಮಿಯು ತನ್ನ ಸುತ್ತ ತಾನೆ ತಿರುಗುವುದಲ್ಲದೆ ಸೂರ್ಯನ ಸುತ್ತಲೂ ತಿರುಗುತ್ತದೆ. ಇತಿಹಾಸವನ್ನು ತೆಗೆದು ನೋಡಿದರೆ ಮೊದಲು ಲಕ್ಷಲಕ್ಷ ವರುಷಗಳ ಹಿಂದೆ ಈ ಜಗತ್ತು ಹೀಗಿರಲಿಲ್ಲ.ಪ್ರಾರಂಭದಲ್ಲಿ ಏಕಾಣು ಜೀವಿ ಅಮೀಬಾ ಮಾತ್ರ ಇತ್ತು. ಕಣ್ಣಿಗೆ ಕಾಣದ ಕೈಗೆ ಸಿಗದ ಕೈಕಾಲು
ಕಣ್ಣು ಏನೇನೂ ಇಲ್ಲದ ಈ ಏಕಾಣು ಜೀವಿಯೇ ಬೆಳೆದು ಕೋಟ್ಯಂತರ
ವರುಷಗಳ ನಂತರ ಈಗಿರುವ ಪಶು, ಪಕ್ಷಿ, ಕ್ರಿಮಿ, ಕೀಟಾದಿಯಾಗಿ ಭವ್ಯ ಮಾನವನಾದ! ಆ ಏಕಾಣು ಜೀವಿ ಅಮೀಬಾವೇ ಬೆಳೆದು
ಹೀಗಾಯಿತೆಂದು ಯಾರಿಂದಲೂ ಕಲ್ಪಿಸಲಾಗುವುದಿಲ್ಲ!
ಶ್ರೀ *ಸಿದ್ಧೇಶ್ವರ ಸ್ವಾಮೀಜಿ*
No comments:
Post a Comment