Saturday, October 11, 2025

 ಕಥೆ-907

ಅಸಾಧ್ಯ ಎನ್ನುವ ತಪ್ಪು ಕಲ್ಪನೆಯನ್ನು ಮನದಿಂದ ಕಿತ್ತೆಸೆ.


ದೊಡ್ಡ ಆರಳಿ ಮರಗಳು ಯಾವಾಗಲೂ ನಮ್ಮ ಗಮನ ಸೆಳೆಯುತ್ತವೆ. ಎರಡೂ ಮರಗಳು ಒಂದು ವಾರದ ಅಂತರದಲ್ಲಿ ತಮ್ಮರೆಂಬೆಕೊಂಬೆಗಳಲ್ಲಿರುವ ಎಲ್ಲ ಎಲೆಗಳನ್ನು ಕಳಚಿಕೊಂಡು ಬೋಳಾಗುತ್ತವೆ. ನೋಡಿದರೆ ಮರಕ್ಕೆ ರೋಗ ತಗುಲಿ ಒಣಗಿದಂತೆ ತಾಣುವವು. ಸ್ವಲ್ಪ ಬೆಂಕಿ ತಗಲಿದರೂ ಆ ಮರಗಳು ಸುಟ್ಟು ಬೂದಿಯಾಗುವವು ಎನ್ನುವ ಭಾವನೆ ಬರುವುದಾದರೆ ಒಂದು ವಾರದೊಳಗಾಗಿ ಆ ಮರಗಳ ಆಕಾರದಲ್ಲಿ ತೀವ್ರ ಬದಲಾವಣೆ ಕಾಣುವುದು. ಪ್ರಕೃತಿಯಲ್ಲಿ ಅದ್ಭುತ ಚೈತನ್ಯವಿದೆ. ಒಣಗಿದ ಹರಿಗಳಲ್ಲಿ ವಿವಿಧ ಬಣ್ಣಗಳ ಚಿಗುರಿನ ಚಿತ್ತಾರ ಮೂಡಿ ಎಲೆಗಳಾಗಿ ನಳನಳಿಸಲಾರಂಭಿಸಿ ಹಕ್ಕಿ ಪಕ್ಷಿಗಳನ್ನು ಆಕರ್ಷಿಸುವುದು ನಾನು ಸತ್ತಿಲ್ಲ ಹೊಸ ಹುಟ್ಟು ಪಡೆದಿದ್ದೇನೆಂದು ಆ ಮರಗಳು ಸಾರಿ ಸಾರಿ ಹೇಳುವವು.. ಅವು ಮನುಷ್ಯನಿಗೆ, 'ಏ ಮಾನನ ನೀನು ಎಂಥ ಸಂದರ್ಭದಲ್ಲೂ ಎದೆಗುಂದಬೇಡ ಧೈರ್ಯವಾಗಿ ಮುನ್ನುಗ್ಗು ನಿನ್ನೊಳಗೂ ಚಿಗುರುವ ಚೈತನ್ಯವಿದೆ.. ಮನಸ್ಸು ಮಾಡಿದರೆ ಬೆಂಕಿಯಿಂದಲೂ ಮೇಲೆದ್ದು ಬೆಳಕು ಕೊಡಬಲ್ಲೆ ಅಸಾಧ್ಯ ಎನ್ನುವ ತಪ್ಪು ಕಲ್ಪನೆಯನ್ನು ಮನದಿಂದ ಕಿತ್ತೆಸೆ. ನೋಡು ನನ್ನ ಎಲೆಗಳೆಲ್ಲ ಉದುರಿ ಬೋಳಾಗಿ ನಾನು ಸಾಯುವ ಪರಿಸ್ಥಿತಿಯಲ್ಲೂ ಎದೆಗುಂದುವುದಿಲ್ಲ.. ಹಳೆಯದನ್ನು ಕಳಿಸಿಕೊಂಡಾಗಲೇ ಹೊಸ ಹುಟ್ಟು ಸಾಧ್ಯ ಎಂದು ನಮಗೆ ಮಾರ್ಮಿಕವಾಗಿ ಹೇಳಿದಂತಿದೆ..

ಮರಗಳನ್ನು ನೋಡಿದಾಗಲೆಲ್ಲ

ನಮಗೆ ನೆನಪಾಗುವ ಬಸವಣ್ಣನವರ ವಚನ ನೀನೊಲಿದರೆ ಕೊರಡು ಕೊನರುವುದಯ್ಯ

ನೀನೊಲಿದರೆ ಬರಡು ಹಯನಹುದಯ್ಯ

ನೀನೊಲಿದರೆ ವಿಷವಮೃತವಹುದಯ್ಯ

ನೀನೊಲಿದರೆ ಸಕಲ ಪಡಿಪದಾರ್ಥ ಇದಿರಲಿಪ್ಪವು

ಕೂಡಲಸಂಗಮದೇವ....

-ಪಂ.ಶಿವಾಚಾರ್ಯ ಶ್ರೀಗಳು ತರಳಬಾಳು

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು