Monday, October 13, 2025

ಕಥೆ-909

ಗೆಲ್ಲಲು ಪ್ರಯತ್ನ ದೊಡ್ಡದು..

https://basapurs.blogspot.com/

ಸ್ಪರ್ಧೆಯಲ್ಲಿ ಎಲ್ಲರೂ ಶಕ್ತಿಮೀರಿ ಪ್ರಯತ್ನ ಮಾಡುವವರೇ ಆದರೆ ಎಲ್ಲಾ ಸಂದರ್ಭಗಳಲ್ಲಿ ಜಯಶಾಲಿಗಳಾಗಲು ಸಾಧ್ಯವಿಲ್ಲ. ಆದರೆ, ಗೆಲುವು ಸಿಗುವವರೆಗೂ ಹೋರಾಡಿ ಎದುರಾಳಿಗೆ ಉತ್ತಮ ಪೈಪೋಟಿ ನೀಡಲು ಸಾಧ್ಯವಿದೆ. ಎಷ್ಟು ದೂರ ಸಾಧ್ಯವಿದೆಯೋ ಅಷ್ಟು ದೂರ ಸ್ಪರ್ಧೆಯಲ್ಲಿ ಸಾಗುವುದು ಅಗತ್ಯ. ಎಲ್ಲದಕ್ಕಿಂತ ಸಾಹಸದ ಕೆಲಸ ಏನು ಎಂದರೆ, ಸೋಲುತ್ತೇವೆ ಎನ್ನುವುದು ಗೊತ್ತಿದ್ದರೂ ಸೋಲುತ್ತೇನೆ, ಇನ್ನು ನನ್ನಿಂದ ಸಾಧ್ಯವಿಲ್ಲ ಎಂಬ ಸ್ಥಿತಿ ತಲುಪಿದಾಗಲು ಇನ್ನೊಮ್ಮೆ ಪ್ರಯತ್ನ ಮಾಡಬೇಕು ಎನ್ನುವ ಛಲ ಇದ್ದರೆ ಅದಕ್ಕಿಂತ ದೊಡ್ಡ ಗೆಲುವು ಮತ್ತೊಂದಿಲ್ಲ. ಇನ್ನೊಬ್ಬರು ಎದ್ದು ನಿಲ್ಲಲು ಹೆದರಿದಾಗ ನಾವು ಎದ್ದು ನಿಂತರೆ, ಅದು ಕೂಡ ಒಂದು ಸಾಧನೆ ಎಂದೇ ಹೇಳಬಹುದು. 


ಜೀವನವೂ ಅದೇ ರೀತಿ ಒಂದು ಸ್ಪರ್ಧೆ ಇದ್ದ ಹಾಗೆ. ಇಲ್ಲಿ ಗೆಲ್ಲಲೇಬೇಕು ಎನ್ನುವ ಅಗತ್ಯವಿಲ್ಲ. ಆದರೆ, ಪ್ರಯತ್ನ ಬಿಡಬಾರದು. ಜೀವನದ ದೊಡ್ಡ ಕ್ಯಾನ್ವಾಸ್‌ನಲ್ಲಿ ಹೆಜ್ಜೆ ಗುರುತನ್ನು ಮೂಡಿಸಬೇಕು, ಅದು ಅತ್ಯಂತ ದೊಡ್ಡ ಹೆಜ್ಜೆ ಗುರುತು ಆಗಬೇಕು ಎಂದಿಲ್ಲ.

ಆದರೆ, ನಮ್ಮಿಂದ ಪೂರ್ಣ ಪ್ರಮಾಣದ ಪ್ರಯತ್ನ ಆಗಿದೆ ಎಂಬ ಛಾಪು ಮೂಡಿರಬೇಕು. ಅಂದುಕೊಂಡದ್ದನ್ನು ಸಾಧಿಸಿ ಒಂದಿಷ್ಟು ದೂರ ಸಾಗಿದರೂ ಸಾರ್ಥಕವಾಗುತ್ತದೆ. ಮುಂದೆ ಅದು ದೊಡ್ಡ ಗೆಲುವಿಗೆ ಸಹಾಯವಾಗುತ್ತದೆ...

-ಸಿಲ್ವೆಸ್ಟರ್ ಸ್ಟಾಲ್ಲೊನ್ ನಟ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು