ಕಥೆ-910
ಹಾಸ್ಯ ರಾಜನ ಕೋಟೆ
ರಾಜು ತಾಳಿಕೋಟೆ
ನಾಲ್ಕನೇ ತರಗತಿ ಓದುತ್ತಿದ್ದಾಗ ತಂದೆ ಪಾರ್ಶ್ವವಾಯುವಿಗೆ ಪೀಡಿತರಾದರೆ ತಾಯಿ ಕ್ಯಾನ್ಸರ ಕಾಯಿಲೆಗೆ ತುತ್ತಾದರು..11ನೆಯ ವಯಸ್ಸಿಗೆ ಹೆತ್ತವರನ್ನು ಕಳೆದುಕೊಂಡ ಬಾಲಕ ರಾಜು ತಾಳಿಕೋಟಿ ಓದಿಗೆ ಇತಿಶ್ರೀ ಹಾಡಿ, ಹೊಟ್ಟೆಪಾಡಿಗಾಗಿ ಹೋಟೆಲ್‌ನಲ್ಲಿ ಸಪ್ಲೈಯರ್, ಅಲ್ಲದೆ ಲಾರಿ ಕ್ಲೀನರ್, ಚಿತ್ತರಗಿ ನಾಟಕ ಕಂಪನಿಯಲ್ಲಿ ಗೇಟ್ ಕೀಪರ್ ಆಗಿ, ನಾಟಕ ಪ್ರಚಾರಕ್ಕಿಂತ ಆಗಿ, ಪರದೆ ಎಳೆಯುವರಾಗಿ ಕಾರ್ಯನಿರ್ವಹಿಸಿದ್ದರು.. ಒಂದು ಸಾರಿ ಪಾತ್ರಧಾರಿಯೊಬ್ಬ ಕೈ ಕೊಟ್ಟ ವೇಳೆ ಬಣ್ಣ ಹಚ್ಚಿದ ರಾಜು ಅವರು ಮತ್ತೆ ಹಿಂತಿರುಗಿ ನೋಡುವ ಪ್ರಮೇಯ ಬರಲಿಲ್ಲ. ಅವರೊಳಗಿನ ಕಲಾವಿದ ಬೆಳಕಿಗೆ ಬಂದಿದ್ದ.
ತದನಂತರ ತಂದೆ-ತಾಯಿ ಕಟ್ಟಿದ್ದ `ಖಾಸ್ಗತೇಶ್ವರ ನಾಟ್ಯ ಸಂಘ'ಕ್ಕೆ ಅಣ್ಣನ ಜೊತೆ ಸೇರಿ 1983ರಲ್ಲಿ ಮರುಜೀವ ತುಂಬಿದರು.
ಕುಡುಕರ ಜೀವನವನ್ನು ಹಾಸ್ಯವಾಗಿ ಚಿತ್ರಿಸಿದ `ಕಲಿಯುಗದ ಕುಡುಕ' ನಾಟಕ 40 ಸಾವಿರಕ್ಕೂ ಅಧಿಕ ಕಲಾಪ್ರದರ್ಶನ ಕಂಡಿತ್ತು. ಕುಡುಕ ವಿನ್ಯಾ ಆಗಿ ಸಂಭಾಷಣೆ, ನಟನೆಯಿಂದ ನಾಡಿನ ಕಲಾರಸಿಕರ ಹೃದಯ ಸಾಮ್ರಾಜ್ಯಕ್ಕೆ ಲಗ್ಗೆ ಇಟ್ಟಾಗ ಸಿನಿರಂಗ ಕೈ ಮಾಡಿ ಅವಕಾಶ ನೀಡಿತು.
ಅವರ ನಾಟಕಗಳ ಆಡಿಯೋ ಕ್ಯಾಸೆಟ್‌ಗಳು ಕೂಡ ಆ ಕಾಲದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದ್ದವು.
ನಮ್ಮ ಉತ್ತರ ಕರ್ನಾಟಕ ಭಾಗದ ಮೇರು ಕಲಾವಿದರಾಗಿ, ಉತ್ತರ ಕರ್ನಾಟಕದ ಭಾಷಾ ಸೊಗಡನ್ನು ಪಸರಿಸಿದ ಒಬ್ಬ ಶ್ರೇಷ್ಠ ನಟನನ್ನು ಕಳೆದುಕೊಂಡಂತಾಗಿದೆ. ಹಲವು ಚಿತ್ರಗಳಲ್ಲಿ ಹಾಸ್ಯ ನಟನೆ ಮೂಲಕ ಕನ್ನಡಿಗರ ಮನರಂಜಿಸಿದ್ದಾರೆ. ʼಪಂಚರಂಗಿʼ ಸೇರಿದಂತೆ ಹಲವು ಚಿತ್ರಗಳಲ್ಲಿ ಅತ್ಯದ್ಭುತವಾಗಿ ನಟಿಸಿದ ರಾಜು ತಾಳಿಕೋಟೆಯವರ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟ...
ರಾಜು ತಾಳಿಕೋಟಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ...
💐💐💐💐
.jpeg)
No comments:
Post a Comment